ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ; ಇಬ್ಬರು ಪಾದ್ರಿಗಳು ಕೋರ್ಟ್​ಗೆ ಶರಣು

news18
Updated:August 13, 2018, 4:22 PM IST
ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ; ಇಬ್ಬರು ಪಾದ್ರಿಗಳು ಕೋರ್ಟ್​ಗೆ ಶರಣು
news18
Updated: August 13, 2018, 4:22 PM IST
-ನ್ಯೂಸ್​ 18 ಕನ್ನಡ

ನವದೆಹಲಿ,(ಆ.13): ಅತ್ಯಾಚಾರ ಆರೋಪ ಹೊತ್ತಿಕೊಂಡು​ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ ಕೇರಳದ 4 ಜನ ಪಾದ್ರಿಗಳಲ್ಲಿ ಇಬ್ಬರು ಇಂದು ಕೇರಳದ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಫಾದರ್​ ಅಬ್ರಹಾಂ ವರ್ಗೀಸ್​ ಮತ್ತು ನಾಲ್ಕನೇ ಆರೋಪಿ ಫಾದರ್​ ಜೈಸ್​ ಕೆ. ಜಾರ್ಜ್​ ಕೊಲ್ಲಂ ಕೋರ್ಟ್​ಗೆ ಶರಣಾತರಾಗಿದ್ದಾರೆ. ಸುಪ್ರೀಂ ಕೋರ್ಟ್​ ಈ ಇಬ್ಬರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆ.06 ರಂದು ತಿರಸ್ಕರಿಸಿತ್ತು. ಅಲ್ಲದೇ ಆ.13 ರೊಳಗೆ ಶರಣಾಗಿ ಪೊಲೀಸರ ತನಿಖೆಗೆ ಸಹಕರಿಸಬೇಕೆಂದು ಆಜ್ಞೆ ನೀಡಿತ್ತು. ಎ.ಕೆ.ಸಿಕ್ರಿ ಮತ್ತು ಅಶೋಕ್​ ಭೂಷಣ್ ಅವರನ್ನೊಳಗೊಂಡ ನ್ಯಾಯಾಧಿಪೀಠವು ಈ ಇಬ್ಬರು ಪಾದ್ರಿಗಳು ಒಂದು ಸಲ ಶರಣಾದರೆ ಜಾಮೀನು ಪಡೆದುಕೊಳ್ಳಬಹುದು ಎಂದು ಹೇಳಿತ್ತು.

ಕೇರಳದ ಮಲಂಕರ ಆರ್ಥಡಕ್ಸ್​ ಚರ್ಚ್​ನ  4 ಜನ ಪಾದ್ರಿಗಳು ತನ್ನ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯ ಗಂಡ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಫಾದರ್ ಅಬ್ರಾಹಿಂ ವರ್ಗೀಸ್, ಫಾದರ್​ ಜಾಬ್​​ ಮ್ಯಾಥ್ಯೂ, ಫಾದರ್ ಜಾಯಿಸ್ ಕೆ. ಜಾರ್ಜ್​, ಫಾದರ್​ ಜಾನ್ಸನ್​ ಮ್ಯಾಥ್ಯೂ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿದ್ದರು.

ತನ್ನ ಮೇಲೆ ಸತತವಾಗಿ ಅತ್ಯಾಚಾರ ಮಾಡಿ, ಅದನ್ನು ಯಾರಿಗೂ ಹೇಳದಂತೆ ಬ್ಲಾಕ್​ಮೇಲ್​ ಮಾಡಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದರು. 'ನನಗೆ ದೂರದ ಸಂಬಂಧಿಯಾಗಿರುವ ಫಾದರ್​ ಅಬ್ರಾಹಿಂ ವರ್ಗೀಸ್​ ನಾನು 16 ವರ್ಷದವಳಾಗಿದ್ದಾಗಿನಿಂದಲೂ ಅತ್ಯಾಚಾರ ಮಾಡುತ್ತಿದ್ದರು. ಈ ವಿಷಯವನ್ನು ನನ್ನ ಜೂನಿಯರ್ ಆಗಿದ್ದ ಫಾದರ್ ಜಾಬ್​ ಮ್ಯಾಥ್ಯೂ ಬಳಿ ಹೇಳಿಕೊಂಡಾಗ ಆತನೂ ನನ್ನನ್ನು ಬಳಸಿಕೊಂಡಿದ್ದಲ್ಲದೆ, ಈ ವಿಷಯವನ್ನು ಬೇರೆಯವರ ಬಳಿ ಹೇಳಿದರೆ ಎಲ್ಲ ವಿಷಯವನ್ನು ನನ್ನ ಗಂಡನಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದರು. ಈ ವಿಷಯವನ್ನು ಕೌನ್ಸಿಲರ್​ ಬಳಿ ಹೇಳಿದರೆ ಅವರೂ ನನಗೆ ಸಹಾಯ ಮಾಡದೆ ಅನುಚಿತವಾಗಿ ವರ್ತಿಸಿದ್ದರು. ಚರ್ಚ್​ನ ನಾಲ್ವರು ಪಾದ್ರಿಗಳೂ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು. ಕೊನೆಗೆ, ನನ್ನ ಗಂಡನಿಗೆ ಈ ವಿಷಯ ಗೊತ್ತಾದ ಮೇಲೆ ಆ ಪಾದ್ರಿಗಳ ನಡವಳಿಕೆಯನ್ನು ಚರ್ಚ್​ನವರ ಗಮನಕ್ಕೆ ತಂದೆವು. ಆದರೆ, ಈ ಬಗ್ಗೆ ವಿಚಾರಿಸಲು ಚರ್ಚ್​ನವರು ಮೂರು ತಿಂಗಳು ತೆಗೆದುಕೊಂಡರು ಎಂದು ಮಹಿಳೆ ಹೇಳಿಕೆ ನೀಡಿದ್ದರು.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...