HOME » NEWS » National-international » 2 KERALA BASED NEWS CHANNELS BANNED FOR 48 HOURS OVER DELHI VIOLENCE REPORTAGE LG

ದೆಹಲಿ ಹಿಂಸಾಚಾರ: ಪಕ್ಷಪಾತಿ ವರದಿ ಆರೋಪದ ಮೇಲೆ ಕೇರಳದ 2 ಸುದ್ದಿ ವಾಹಿನಿಗಳಿಗೆ 48 ಗಂಟೆ ನಿಷೇಧ

ಮಾಹಿತಿ ಮತ್ತು ಪ್ರಸರಣ ವಿಭಾಗವು ಮೀಡಿಯಾ ಒನ್​ ಮತ್ತು ಏಷಿಯಾನೆಟ್​ ನ್ಯೂಸ್​ ಚಾನೆಲ್​​ಗಳನ್ನು ಮಾರ್ಚ್​​ 6 ಸಂಜೆ 7.30ರಿಂದ ಮಾರ್ಚ್​​ 8 ಸಂಜೆ 7.30ರವರೆಗೆ ನಿಷೇಧಿಸಿದೆ.

news18-kannada
Updated:March 7, 2020, 9:40 AM IST
ದೆಹಲಿ ಹಿಂಸಾಚಾರ: ಪಕ್ಷಪಾತಿ ವರದಿ ಆರೋಪದ ಮೇಲೆ ಕೇರಳದ 2 ಸುದ್ದಿ ವಾಹಿನಿಗಳಿಗೆ 48 ಗಂಟೆ ನಿಷೇಧ
ದೆಹಲಿ ಹಿಂಸಾಚಾರ- ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮಾ.07): ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಕುರಿತಾಗಿ ಒಂದು ಸಮುದಾಯದ ಪರವಾಗಿ ವರದಿ ಮಾಡಿದ ಆರೋಪದಲ್ಲಿ ಕೇರಳದ ಎರಡು ಸುದ್ದಿವಾಹಿನಿಗಳನ್ನು ಕೇಂದ್ರ ಸರ್ಕಾರ 48 ಗಂಟೆಗಳ ಕಾಲ ನಿಷೇಧಿಸಿದೆ. ಈ ನಿಷೇಧವು ಶುಕ್ರವಾರ ಸಂಜೆ 7.30ರಿಂದ ಪ್ರಾರಂಭವಾಗಿದೆ. ಆದರೆ, ಇಂದು ಬೆಳಗ್ಗೆ ಏಷ್ಯಾನೆಟ್ ನ್ಯೂಸ್ ವಾಹಿನಿಯ ಮೇಲಿನ ನಿರ್ಬಂಧವನ್ನು ತೆಗೆದುಹಾಕಲಾಗಿದೆ.


ಮಾಹಿತಿ ಮತ್ತು ಪ್ರಸರಣ ಸಚಿವಾಲಯವು ಈ ಆದೇಶ ಹೊರಡಿಸಿದೆ. ಮಲೆಯಾಳಿ ಭಾಷೆಯ ಏಷ್ಯಾನೆಟ್​ ನ್ಯೂಸ್​ ಮತ್ತು ಮೀಡಿಯಾ ಒನ್-ಈ ಎರಡು ಸುದ್ದಿ ಮಾಧ್ಯಮಗಳನ್ನು ಬ್ಯಾನ್ ಮಾಡಲಾಗಿದೆ. ಫೆಬ್ರವರಿ 25ರಂದು ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯನ್ನು ಈ ವಾಹಿನಿಗಳು ವರದಿ ಮಾಡಿದ್ದವು.

YES Bank Crisis: ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ಇಡಿ ದಾಳಿ

ಈ ಸುದ್ದಿ ವಾಹಿನಿಗಳು "ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಎತ್ತಿ ತೋರಿಸಿ, ಒಂದು ನಿರ್ದಿಷ್ಟ ಸಮುದಾಯದ ಪರವಾಗಿ ವರದಿ ಮಾಡಿದ್ದವು ಎನ್ನಲಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರವು ಆ ಚಾನೆಲ್​ಗಳನ್ನು 48 ಗಂಟೆಗಳ ಕಾಲ ನಿಷೇಧಿಸಿ, ಶೋಕಾಸ್​ ನೋಟಿಸ್​ ನೀಡಿದೆ. ಈ ವಾಹಿನಿಗಳು 1995ರ ಕೇಬಲ್​ ಟೆಲಿವಿಷನ್​ ನೆಟ್​ವರ್ಕ್​​ಗಳ(ನಿಯಂತ್ರಣ) ಕಾಯ್ದೆಯಡಿ ಬರುವ ಪ್ರೋಗ್ರಾಂ ಕೋಡ್​ನ್ನು​​ ಉಲ್ಲಂಘಿಸಿರುವುದು ಸಚಿವಾಲಯ ಗಮನಕ್ಕೆ ಬಂದಿದೆ.

ಮಾಹಿತಿ ಮತ್ತು ಪ್ರಸರಣ ವಿಭಾಗವು ಮೀಡಿಯಾ ಒನ್​ ಮತ್ತು ಏಷ್ಯಾನೆಟ್​ ನ್ಯೂಸ್​ ಚಾನೆಲ್​​ಗಳನ್ನು ಮಾರ್ಚ್​​ 6 ಸಂಜೆ 7.30ರಿಂದ ಮಾರ್ಚ್​​ 8 ಸಂಜೆ 7.30ರವರೆಗೆ ನಿಷೇಧಿಸಿದೆ. 48 ಗಂಟೆಗಳ ನಿಷೇಧವನ್ನು ಖಂಡಿಸಿ ಮೀಡಿಯಾ ಒನ್​ ಚಾನೆಲ್​ ಶನಿವಾರ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. "ಸಚಿವಾಲಯದ ಈ ಕ್ರಮವು ಮುಕ್ತ ಮತ್ತು ನ್ಯಾಯಯುತ ವರದಿಗಾರಿಕೆಯ ವಿರುದ್ಧ ನಿರ್ದಯ ದಾಳಿ" ಎಂದು ಹೇಳಿಕೆ ನೀಡಿದೆ.

ಇದೇ ವೇಳೆ, ಶನಿವಾರ ಬೆಳಗ್ಗೆ ಏಷ್ಯಾನೆಟ್ ನ್ಯೂಸ್ ಮೇಲಿನ ನಿಷೇಧವನ್ನು ಕೇಂದ್ರ ಹಿಂಪಡೆದುಕೊಂಡಿತು. ಬೆಳಗ್ಗೆ 7ಗಂಟೆಯಿಂದ ಆ ವಾಹಿನಿಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಆದರೆ, ಮೀಡಿಯಾ ಒನ್ ವಾಹಿನಿ ಮೇಲಿನ ನಿಷೇಧ ಮುಂದುವರಿದಿದೆ.Corona Virus - ಒಂದು ಲಕ್ಷ ದಾಟಿದ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ; 3,400ಕ್ಕೂ ಹೆಚ್ಚು ಜನರು ಸಾವು
Youtube Video

 
First published: March 7, 2020, 9:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories