ಅಮೆರಿಕದಲ್ಲಿ ಥ್ಯಾಂಕ್ಸ್​ಗಿವಿಂಗ್​ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಮೇಲೆ ಹರಿದ ಟ್ರಕ್​

ಸ್ಟಾನ್ಲೀ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರೆ, ಗೋಪಿಶೆಟ್ಟಿ ಡಾಕ್ಟರೇಟ್​ ಪಡೆಯಲು ವಿದ್ಯಾಭ್ಯಾಸ ನಡೆಸುತ್ತಿದ್ದರು.

Latha CG | news18-kannada
Updated:December 2, 2019, 5:57 PM IST
ಅಮೆರಿಕದಲ್ಲಿ ಥ್ಯಾಂಕ್ಸ್​ಗಿವಿಂಗ್​ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಮೇಲೆ ಹರಿದ ಟ್ರಕ್​
ಮೃತಪಟ್ಟ ಭಾರತೀಯ ವಿದ್ಯಾರ್ಥಿಗಳು
  • Share this:
ಥ್ಯಾಂಕ್ಸ್​ ಗಿವಿಂಗ್​ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ  ಇಬ್ಬರು ಭಾರತೀಯ ವಿದ್ಯಾರ್ಥಿಗಳು ಹಿಟ್​​ ಆ್ಯಂಡ್​ ರನ್​​ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಅಮೆರಿಕದ ಸೌತ್​​ ನಶ್​ವಿಲ್ಲೆಯಲ್ಲಿ ನಡೆದಿದೆ.

ವೈಭವ್​ ಗೋಪಿಶೆಟ್ಟಿ(26) ಮತ್ತು ಜುಡಿ ಸ್ಟಾನ್ಲೀ ಪಿನ್​​ಹೆರಿಯೊ(23) ಮೃತಪಟ್ಟ ವಿದ್ಯಾರ್ಥಿಗಳು. ಇವರು ಟೆನ್ನೆಸ್ಸೇ ಸ್ಟೇಟ್​ ಯುನಿವರ್ಸಿಟಿಯಲ್ಲಿ ಫುಡ್​ ಸೈನ್ಸ್​​ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ಧಾರೆ.

ಸ್ಟಾನ್ಲೀ ಮತ್ತು ಗೋಪಿಶೆಟ್ಟಿ ಹಿಟ್​ ಆ್ಯಂಡ್​ ರನ್​ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ನವೆಂಬರ್ 28ರಂದು ನಡೆದಿದೆ. ಥ್ಯಾಂಕ್ಸ್​ ಗಿವಿಂಗ್​ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುತಿದ್ದ ವಿದ್ಯಾರ್ಥಿಗಳ ಮೇಲೆ ಟ್ರಕ್​​ವೊಂದು ಹರಿದಿದೆ. ಪರಿಣಾಮ ಇಬ್ಬರೂ ಸಹ ಸ್ಥಳದಲ್ಲೇ ಸಾವನ್ನಪ್ಪಿದ್ಧಾರೆ.

ಉಪ ಚುನಾವಣೆ; ಅನರ್ಹರ ಕುರಿತು ಜನರ ಮನಸ್ಥಿತಿ ಏನು? ಯಾರಿಗೆ ಸಿಹಿ, ಯಾರಿಗೆ ಕಹಿ? ಏನಾಗಲಿದೆ ಫಲಿತಾಂಶ? ಇಲ್ಲಿದೆ ಡೀಟೈಲ್ಸ್​

ಸ್ಟಾನ್ಲೀ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರೆ, ಗೋಪಿಶೆಟ್ಟಿ ಡಾಕ್ಟರೇಟ್​ ಪಡೆಯಲು ವಿದ್ಯಾಭ್ಯಾಸ ನಡೆಸುತ್ತಿದ್ದರು. ಯುನಿವರ್ಸಿಟಿ ವಿದ್ಯಾರ್ಥಿಗಳು ಈ ಇಬ್ಬರು ವಿದ್ಯಾರ್ಥಿಗಳ ಸಾವನ್ನು ಖಂಡಿಸಿದ್ದಾರೆ. ಬಸ್​ ಸ್ಟ್ಯಾಂಡ್​​ಗೆ ನಡೆದು ಹೋಗುತ್ತಿದ್ಧಾಗ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಯುನಿವರ್ಸಿಟಿ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ದಿ ಟೆನ್ನೆಸ್ಸೇ ಸ್ಟೇಟ್​ ಯುನಿವರ್ಸಿಟಿ ಫ್ಯಾಮಿಲಿ ಥ್ಯಾಂಕ್ಸ್​ ಗಿವಿಂಗ್​ ಡೇ ಆಚರಿಸಲು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕಳೆದುಕೊಂಡಿದೆ. ಇಬ್ಬರೂ ವಿದ್ಯಾರ್ಥಿಗಳು ಭಾರತದವರಾಗಿದ್ದು, ಇಲ್ಲಿ ಫುಡ್​ ಸೈನ್ಸ್​​ ಡಿಗ್ರಿ ಪಡೆಯಲು ಓದುತ್ತಿದ್ದರು. ವಿದ್ಯಾರ್ಥಿಗಳ ಸಾವಿಗೆ ಯುನಿವರ್ಸಿಟಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶೋಕ ವ್ಯಕ್ತಪಡಿಸಿದ್ದಾರೆ.

ಟ್ರಕ್​ ಚಾಲಕ ಘಟನೆ ಬಳಿಕ ಪರಾರಿಯಾಗಿದ್ದ. ಬಳಿಕ ಆತನನ್ನು ಬಂಧಿಸಿ  ನಶ್​ವಿಲ್ಲೆ ಪೊಲೀಸರು ವಿಚಾರಣೆ ನಡೆಸಿದ್ಧಾರೆ. ಇನ್ನು, ಮೃತ ವಿದ್ಯಾರ್ಥಿಗಳ ಪೋಷಕರಿಗೆ ವಿಷಯ ತಿಳಿಸಲಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ.ನಿಗೂಢವಾಗೇ ಉಳಿದ ಪಂಕಜಾ ಮುಂಡೆ ಭವಿಷ್ಯದ ಪ್ರಯಾಣ ಪೋಸ್ಟ್; ಟ್ವಿಟರ್ ಸ್ವವಿವರ ಸ್ಥಳದಲ್ಲಿ ಬಿಜೆಪಿ ಹೆಸರು ತೆಗೆದ ಮಾಜಿ ಶಾಸಕಿ

First published: December 2, 2019, 4:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading