HOME » NEWS » National-international » 2 ELEPHANTS RUN OVER BY GOODS TRAIN IN ODISHA RAILWAYS AND FOREST OFFICIALS PLAY BLAME GAME STG LG

ಒಡಿಶಾದಲ್ಲಿ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದು 2 ಆನೆಗಳ ದಾರುಣ ಸಾವು; ತನಿಖೆಗೆ ಆದೇಶ

ರೈಲ್ವೆ ಹಳಿ ದಾಟುವಾಗ ಸುಮಾರು 30 ಅರಣ್ಯ ಸಿಬ್ಬಂದಿ ಆನೆ ಹಿಂಡಿನ ಮೇಲೆ ನಿಗಾ ಇಟ್ಟಿದ್ದರು. ರೈಲ್ವೆ ಟ್ರ್ಯಾಕ್ ಬಳಿ ಆನೆ ಹಿಂಡಿನ ಚಲನೆಯ ಬಗ್ಗೆ ಬುಧವಾರ ಸಂಜೆ ಎಚ್ಚರಿಕೆ ಆದೇಶ ಹೊರಡಿಸಲಾಗಿದ್ದರೂ, ರೈಲು ಅತಿ ವೇಗದಲ್ಲಿ ಚಲಿಸಿದೆ” ಎಂದು ಉಸ್ತುವಾರಿ ಪಿಸಿಸಿಎಫ್ (ವನ್ಯಜೀವಿ) ಶಶಿ ಪಾಲ್ ಹೇಳಿದ್ದಾರೆ.

news18-kannada
Updated:February 6, 2021, 12:06 PM IST
ಒಡಿಶಾದಲ್ಲಿ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದು 2 ಆನೆಗಳ ದಾರುಣ ಸಾವು; ತನಿಖೆಗೆ ಆದೇಶ
ಪ್ರಾತಿನಿಧಿಕ ಚಿತ್ರ
  • Share this:
ಒಡಿಶಾ(ಫೆ.06): ಆನೆ ಹಿಂಡು ರೈಲ್ವೆ ಹಳಿಗಳನ್ನು ದಾಟುತ್ತಿದ್ದಾಗ ಸರಕು ಸಾಗಣೆ ರೈಲೊಂದು ಎರಡು ಆನೆಗಳನ್ನು ಬಲಿ ಪಡೆದಿರುವ ಮನಕಲುಕುವ ಘಟನೆ ಒಡಿಶಾದಲ್ಲಿ ನಡೆದಿದೆ. ಆದರೆ, ಆನೆಗಳ ದುರಂತ ಸಾವಿನ ವಿಚಾರದಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳ ನಡುವೆ ಆರೋಪ - ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಗುರುವಾರ ಮುಂಜಾನೆ 1.30 ರ ಸುಮಾರಿಗೆ ಆನೆ ಹಿಂಡು ರೈಲ್ವೆ ಹಳಿಗಳನ್ನು ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ ಮತ್ತು ಆಗ್ನೇಯ ರೈಲ್ವೆ (ಎಸ್ಇಆರ್) ವಿಭಾಗದ ಭಾಲುಲತಾ-ಜರೈಕೆಲಾ ನಡುವೆ ಗೂಡ್ಸ್ ರೈಲು ವೇಗವಾಗಿ ಚಲಿಸುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಒಂದು ಆನೆ ಅಪ್ ಮತ್ತು ಡೌನ್ ಲೈನ್ ನಡುವೆ ಬಿದ್ದಿದ್ದರೆ, ಮತ್ತೊಂದು ಆನೆ ರೈಲಿನ ಎಂಟನೇ ಕೋಚ್​​ಗೆ ಸಿಲುಕಿ ಮೃತಪಟ್ಟಿದೆ. ಇನ್ನು, ಪಾರ್ಸೆಲ್ ವ್ಯಾನ್​​ನ ಮುಂಭಾಗದ ಟ್ರಾಲಿಯ ಎಲ್ಲಾ ನಾಲ್ಕು ಚಕ್ರಗಳು (ಎಂಜಿನ್ನ ಪಕ್ಕದಲ್ಲಿ) ಆನೆಗಳನ್ನು ಹೊಡೆದ ನಂತರ ಹಳಿ ತಪ್ಪಿದವು.

ಆನೆಗಳ ದುರಂತ ಸಾವಿಗೆ ಲೊಕೊ ಪೈಲಟ್ನನ್ನು ಅರಣ್ಯ ಅಧಿಕಾರಿಗಳು ದೂಷಿಸಿದ್ದಾರೆ. ಆನೆ ಹಿಂಡಿನ ಚಲನೆಯ ಬಗ್ಗೆ ರೈಲ್ವೆಗೆ ಮಾಹಿತಿ ನೀಡಲಾಗಿದ್ದರೂ, ಆನೆಗಳಿಗೆ ಅಪ್ಪಳಿಸಿದಾಗ ರೈಲು ಅತಿ ವೇಗದಲ್ಲಿ ಚಲಿಸುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.

ಆನೆಯನ್ನು 200 ಮೀಟರ್​ವರೆಗೆ ಎಳೆದ ರೈಲು

ಆ ಗೂಡ್ಸ್ ರೈಲಿನ ವೇಗವು ವಯಸ್ಕ ಹೆಣ್ಣು ಆನೆಗಳಲ್ಲಿ ಒಂದನ್ನು ಸುಮಾರು 200 ಮೀಟರ್ ದೂರದವರೆಗೆ ಟ್ರೈನ್ ಎಳೆದುಕೊಂಡು ಹೋಗಿದೆ ಎಂದು ತಿಳಿದುಬಂದಿದೆ. ರೈಲಿಗೆ ಡಿಕ್ಕಿ ಹೊಡೆದ ನಂತರ ಟ್ರ್ಯಾಕ್ನ ಹೊರಗೆ ಬಿದ್ದ ಮತ್ತೊಂದು ಐದು ವರ್ಷದ ಆನೆ ಗಾಯಗೊಂಡಿತ್ತು. ಈ ಹಿನ್ನೆಲೆ ಅದನ್ನು ರಕ್ಷಿಸಲಾಯಿತಾದರೂ ಅದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಮುಂಜಾನೆ 1.24 ರ ಸುಮಾರಿಗೆ, ಟ್ರ್ಯಾಕ್ ಬಳಿ ಆನೆ ಹಿಂಡಿನ ಉಪಸ್ಥಿತಿಯ ಮಾಹಿತಿಯನ್ನು ಆನೆ ಮಾನಿಟರಿಂಗ್ ಅಪ್ಲಿಕೇಶನ್ನಲ್ಲಿ ಅಪ್ಡೇಟ್ ಮಾಡಲಾಗಿತ್ತು. ಆದರೂ, ವೇಗದ ರೈಲು 10 ನಿಮಿಷಗಳ ನಂತರ ಆನೆಗಳಿಗೆ ಡಿಕ್ಕಿ ಹೊಡೆದಿದೆ. ಆನೆಗಳನ್ನು ಉಳಿಸಲು ನಮ್ಮ ಪ್ರಯತ್ನಗಳು ವ್ಯರ್ಥವಾಯಿತು ಎಂದು ಹೇಳಿಕೊಂಡಿದ್ದಾರೆ.

ಇನ್ನು, ರೈಲ್ವೆ ಹಳಿ ದಾಟುವಾಗ ಸುಮಾರು 30 ಅರಣ್ಯ ಸಿಬ್ಬಂದಿ ಆನೆ ಹಿಂಡಿನ ಮೇಲೆ ನಿಗಾ ಇಟ್ಟಿದ್ದರು. ರೈಲ್ವೆ ಟ್ರ್ಯಾಕ್ ಬಳಿ ಆನೆ ಹಿಂಡಿನ ಚಲನೆಯ ಬಗ್ಗೆ ಬುಧವಾರ ಸಂಜೆ ಎಚ್ಚರಿಕೆ ಆದೇಶ ಹೊರಡಿಸಲಾಗಿದ್ದರೂ, ರೈಲು ಅತಿ ವೇಗದಲ್ಲಿ ಚಲಿಸಿದೆ” ಎಂದು ಉಸ್ತುವಾರಿ ಪಿಸಿಸಿಎಫ್ (ವನ್ಯಜೀವಿ) ಶಶಿ ಪಾಲ್ ಹೇಳಿದರು.ನೂರಾರು ಮಂದಿ ಸೇರಿ ಮನೆ ಶಿಫ್ಟ್​ ಮಾಡಿದ ವಿಡಿಯೋ ವೈರಲ್; ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ ನಾಗಾಲ್ಯಾಂಡ್ ಜನ

ರೈಲಿನ ವೇಗ ನಿಯಂತ್ರಿಸಲು ಎಚ್ಚರಿಕೆ ನೀಡಿರಲಿಲ್ಲ: ರೈಲ್ವೆ

ವೇಗದ ನಿರ್ಬಂಧದ ಬಗ್ಗೆ ಎಚ್ಚರಿಕೆಯ ಆದೇಶದಲ್ಲಿ ಉಲ್ಲೇಖವಿರಲಿಲ್ಲ. ತೀಕ್ಷ್ಣವಾಗಿ ಸುತ್ತಮುತ್ತ ನೋಡುವುದು ಮತ್ತು ದೊಡ್ಡದಾಗಿ ಹಾರ್ನ್ ಹೊಡೆಯಲು ಎಚ್ಚರಿಕೆ ನೀಡಲಾಗಿತ್ತು. ಅದನ್ನು ಲೋಕೋ ಪೈಲಟ್ ಮಾಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ರೈಲ್ವೆ ಇಲಾಖೆ - ಅರಣ್ಯ ಇಲಾಖೆ ನಡುವೆ ಆರೋಪ - ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ಸಮಿತಿ ರಚನೆ; ತನಿಖೆಗೆ ಆದೇಶ..!
ಈ ಬಗ್ಗೆ ಮಾತನಾಡಿದ ಚಕ್ರಾಧರಪುರದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮನೀಶ್ ಪಾಠಕ್, ಆನೆಗಳ ಸಾವಿನ ಸಂದರ್ಭದಲ್ಲಿ ಆರೋಪ - ಪ್ರತ್ಯಾರೋಪ ಮಾಡುವುದು ಸೂಕ್ಷ್ಮವಲ್ಲ. 80 ಕಿ.ಮೀ ವೇಗದಲ್ಲಿ ರೈಲು ಓಡುತ್ತಿದ್ದಾಗ ಚಾಲಕ ಆನೆಗಳನ್ನು ನೋಡಿದಾಗ ಬ್ರೇಕ್ ಹಾಕಿದ್ದಾರೆ. ಆದರೆ, ಫುಲ್ ಬ್ರೇಕ್ ಹಾಕಿದರೂ ಸಂಪೂರ್ಣವಾಗಿ ರೈಲು ನಿಲ್ಲುವಷ್ಟರಲ್ಲಿ 750 ಮೀಟರ್ನಿಂದ 1 ಕಿಲೋಮೀಟರ್ ಚಲಿಸುತ್ತದೆ. ಈ ಘಟನೆ ಬಗ್ಗೆ ನಾಲ್ವರು ಸದಸ್ಯರ ಅಧಿಕಾರಿಗಳ ತನಿಖೆಗೆ ಆದೇಶಿಸಲಾಗಿದೆ ಮತ್ತು ಉತ್ತಮ ಸಮನ್ವಯಕ್ಕಾಗಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ಪಿಸಿಸಿಎಫ್ ನಡುವೆ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಫೆಬ್ರವರಿ 8 ರಂದು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಅಲ್ಲದೆ, ರೂರ್ಕೆಲಾ ಆರ್ಸಿಸಿಎಫ್ ಭಂಜಾ ಕಿಶೋರ್ ಸ್ವೈನ್ ಅವರು ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಅದರ ಪ್ರಕಾರ ಪ್ರಕರಣ ದಾಖಲಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲ್ ಹೇಳಿದರು. ಕಳೆದ ಡಿಸೆಂಬರ್ನಲ್ಲಿ ಸಂಬಲ್ಪುರ ಸದರ್ ಅರಣ್ಯ ವ್ಯಾಪ್ತಿಯಲ್ಲಿ 33 ಕಿ.ಮೀ ದೂರದಲ್ಲಿರುವ ಜುಜುಮಾರ - ಹರಿಬಾರಿ ನಡುವಿನ ರೈಲು ಹಳಿಗಳಲ್ಲಿ ರೈಲುಗಳು ವೇಗವಾಗಿ ಚಲಿಸಿ ಎರಡು ಆನೆಗಳನ್ನು ಕೊಂದಿದ್ದವು.
Published by: Latha CG
First published: February 6, 2021, 12:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories