• Home
 • »
 • News
 • »
 • national-international
 • »
 • Elections: 2 ದಿನ, ದಕ್ಷಿಣದ 4 ರಾಜ್ಯಗಳಿಗೆ ನಮೋ ಭೇಟಿ: 2024ರ ಎಲೆಕ್ಷನ್​ಗೆ ಬಿಜೆಪಿಗೆ ಹೊಸ ಗುರಿ, ಮೋದಿ ನಡೆಯೇ ಸಾಕ್ಷಿ!

Elections: 2 ದಿನ, ದಕ್ಷಿಣದ 4 ರಾಜ್ಯಗಳಿಗೆ ನಮೋ ಭೇಟಿ: 2024ರ ಎಲೆಕ್ಷನ್​ಗೆ ಬಿಜೆಪಿಗೆ ಹೊಸ ಗುರಿ, ಮೋದಿ ನಡೆಯೇ ಸಾಕ್ಷಿ!

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಕಳೆದೆರಡು ದಿನದಲ್ಲಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಆದರೀಗ ಈ ಭೇಟಿಯನ್ನು ಮುಂದಿನ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸಲಾಗಿದೆ ಎನ್ನಲಾಗುತ್ತಿದೆ.

 • Trending Desk
 • Last Updated :
 • New Delhi, India
 • Share this:

  ನವದೆಹಲಿ(ನ.12): ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು 2024 ರ ಸಂಸತ್ತಿನ ಚುನಾವಣೆಯ (Loksabha Elections 2024) ತಯಾರಿಯಲ್ಲಿ ಭಾರತದ ದಕ್ಷಿಣ ಭಾಗದಿಂದ ತಮ್ಮ ಪ್ರಚಾರವನ್ನು ಪ್ರಾರಂಭಿಸಲು ಸ್ಪಷ್ಟಉದ್ದೇಶವನ್ನು ಹೊಂದಿದ್ದಾರೆ. ವಿವಿಧ ಯೋಜನೆಗಳನ್ನು ಪ್ರಾರಂಭಿಸಲು ನಾಲ್ಕು ರಾಜ್ಯಗಳನ್ನು ಒಳಗೊಂಡ ಅವರ ಎರಡು ದಿನಗಳ ದಕ್ಷಿಣ ಪ್ರವಾಸವು ಗುಜರಾತ್‌ನಿಂದ (Gujarat) ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಸಾಗಿದೆ. ಅವುಗಳಲ್ಲಿ ಎರಡು ರಾಜ್ಯಗಳ ಪ್ರವಾಸವು 2023 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸಲಾಗಿದೆ ಎನ್ನಲಾಗುತ್ತಿದೆ. 


  ದಕ್ಷಿಣವನ್ನು ಬಿಜೆಪಿ ಭದ್ರಕೋಟೆಯನ್ನಾಗಿಸಲಿರುವ ಮೋದಿ


  ಪ್ರವಾಸದ ಸಮಯದಲ್ಲಿ ನರೇಂದ್ರ ಮೋದಿಯವರು ಒಂದೇ ಸಂದೇಶ ಹಾಗೂ ಅರ್ಥಕ್ಕೆ ಮಹತ್ವ ನೀಡಿದ್ದು, ದಕ್ಷಿಣವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ರಚಿಸಿಕೊಂಡು, ಉತ್ತರ-ದಕ್ಷಿಣದ ವಿಭಜನೆಯನ್ನು ಕಡಿಮೆಮಾಡುವ ಉದ್ದೇಶಕ್ಕೆ ಬದ್ಧರಾಗಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯ ಮಂಡಿಸಿರುವ ರಾಜಕೀಯ ವಿಜ್ಞಾನಿ ಸಂದೀಪ್ ಶಾಸ್ತ್ರಿ, ಚುನಾವಣೆ ಪ್ರಚಾರವು ಒಂದು ಕ್ರಮವನ್ನು ಆಧರಿಸಿದ್ದು, 2014 ರಲ್ಲಿ ಬಿಜೆಪಿ ಉತ್ತರ ಭಾರತ, ಪಶ್ಚಿಮ ಭಾರತ ಮತ್ತು ಮಧ್ಯ ಭಾರತದ ಮೇಲೆ ಕೇಂದ್ರೀಕೃತವಾಗಿತ್ತು. 2019 ರಲ್ಲಿ, ಪೂರ್ವ ಭಾರತ ಮತ್ತು ಈಶಾನ್ಯ ಭಾರತದ ಮೇಲೆ ಬಿಜೆಪಿ ತನ್ನ ಗುರಿ ಇರಿಸಿಕೊಂಡಿತ್ತು. ಸ್ಪಷ್ಟವಾಗಿ 2024 ರಲ್ಲಿ ಬಿಜೆಪಿ ದಕ್ಷಿಣದ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: Bengaluru: ಬೆಂಗಳೂರು ಉದ್ಯಾನ ನಗರಿ ಎಂದು ಮತ್ತೆ ಸಾಬೀತಾಯ್ತು ನೋಡಿ!


  ಕರ್ನಾಟಕ ಮತ್ತು ತೆಲಂಗಾಣವನ್ನು ಬಿಜೆಪಿ ತನ್ನ ಉತ್ತಮ ಅವಕಾಶವನ್ನು ಕಾಣುವ ಎರಡು ಆರಂಭಿಕ ಹಂತಗಳು ಎಂದು ಕರೆದ ಶಾಸ್ತ್ರಿ, ರಾಜಕೀಯವಾಗಿ ಗೆಲ್ಲಲು ದಕ್ಷಿಣದಲ್ಲಿ ಸಾಧ್ಯವಾಗದ ಪಕ್ಷಕ್ಕೆ ಪ್ರಧಾನಿ ಮೋದಿಯವರ ಭೇಟಿಯು ಬಿಜೆಪಿಯ ದೊಡ್ಡ ಪ್ಯಾನ್-ಇಂಡಿಯಾ ಯೋಜನೆಗಳ ಭಾಗವಾಗಿದೆ ಎಂದು ಶಾಸ್ತ್ರಿ ನುಡಿದಿದ್ದಾರೆ.


  ತೆಲಂಗಾಣದಲ್ಲಿ ಬಿಜೆಪಿ ಪ್ರಮುಖ ಪಕ್ಷವಾಗಿದೆ


  ಕರ್ನಾಟಕ ಚುನಾವಣೆಗೆ ಕೆಲವು ತಿಂಗಳುಗಳು ಬಾಕಿ ಉಳಿದಿವೆ ಮತ್ತು ತೆಲಂಗಾಣ ಕೂಡ ಒಂದು ವರ್ಷದೊಳಗೆ ಚುನಾವಣೆಯನ್ನು ಎದುರಿಸಲಿದೆ. ಎರಡೂ ರಾಜ್ಯಗಳು 2024ರ ಲೋಕಸಭೆ ಕದನಕ್ಕೂ ಮುನ್ನ ಚುನಾವಣೆ ಎದುರಿಸಲಿದ್ದು, ಎರಡೂ ಚುನಾವಣೆಗಳು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕದಲ್ಲಿ ಅವರು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕಾಗಿದೆ, ಆದರೆ ತೆಲಂಗಾಣದಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಸ್ಪಷ್ಟವಾಗಿ ಹೊರಹೊಮ್ಮಿದೆ ಎಂಬುದು ಶಾಸ್ತ್ರಿಯವರ ಮಾತಾಗಿದೆ. ಕನಕದಾಸ ಜಯಂತಿಯಂದು ಕರ್ನಾಟಕದ ಬಿಜೆಪಿ ಸರಕಾರವು ಹೆಮ್ಮೆ ಪಡುವ "ಪ್ರಗತಿಯ ಪ್ರತಿಮೆ" ಎಂದು ಕರೆಯಲ್ಪಡುವ ಬೆಂಗಳೂರು ನಗರದ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಅವರು ಅನಾವರಣಗೊಳಿಸಿದರು.


  ಯೋಜನೆಗಳ ಅನಾವರಣ


  ದಕ್ಷಿಣದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಸುಮಾರು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಗುರುತಿಸಿರುವ ಇತರ ಎರಡು ಪ್ರಮುಖ ಯೋಜನೆಗಳನ್ನು ಅಧಿಕೃತವಾಗಿ ಆರಂಭಿಸಲಾಯಿತು. ವಂದೇ ಭಾರತ್ ಜೊತೆಗೆ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.


  ಚುನಾವಣೆಯ ತಯಾರಿ ಕುರಿತು ಅನಿಸಿಕೆ ಹಂಚಿಕೊಂಡ ಪಕ್ಷದ ಹಿರಿಯ ನಾಯಕರು, ಪ್ರಧಾನಿ ಮೋದಿಯವರ ಭೇಟಿಯು ಕಾರ್ಯಕರ್ತರಲ್ಲಿ ಹೆಚ್ಚಿನ ಶಕ್ತಿ ಮತ್ತು ಚೈತನ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಮೋದಿಯವರ ಭೇಟಿಯಿಂದ ವಿಶೇಷ ಶಕ್ತಿ ನಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. 2023 ರಲ್ಲಿ ಬಿಜೆಪಿಯ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವಾಗ ವಿಧಾನಸೌಧದಲ್ಲಿ ಮೋದಿಯವರೂ ನಮ್ಮೊಂದಿಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
  ತಮಿಳುನಾಡು, ತೆಲಂಗಾಣದಲ್ಲೂ ಮೋದಿ ಕಲರವ


  ತಮಿಳುನಾಡಿನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಮತ್ತು ಈಗ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ.ಅಣ್ಣಾಮಲೈ ಅವರ ನಾಯಕತ್ವದಲ್ಲಿ ಪಕ್ಷವು ಸಮರ್ಥವಾಗಿದ್ದು ತಮಿಳುನಾಡಿನ ಮೂರನೇ ಅತ್ಯಂತ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದೆ ಎಂಬುದು ಈ ಹಿಂದೆ ವರದಿಯಾಗಿತ್ತು. 2018-19 ಮತ್ತು 2019-20 ಬ್ಯಾಚ್‌ಗಳ 2,300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಸ್ವೀಕರಿಸುವ ತಮಿಳುನಾಡಿನ ಗಾಂಧಿಗ್ರಾಮ್ ರೂರಲ್ ಇನ್‌ಸ್ಟಿಟ್ಯೂಟ್‌ನ 36 ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.


  ತೆಲಂಗಾಣದಲ್ಲೂ ಮೋದಿಯವರಿಂದ ಹಲವಾರು ಯೋಜನೆಗಳ ಉದ್ಘಾಟನೆ


  ತೆಲಂಗಾಣದ 9,500 ಕೋಟಿ ವೆಚ್ಚದ ರಾಮಗುಂಡಂ ರಸಗೊಬ್ಬರ ಸ್ಥಾವರವನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದು, ಜೊತೆಗೆ ಸುಮಾರು 1,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಭದ್ರಾಚಲಂ ರಸ್ತೆ-ಸತ್ತುಪಲ್ಲಿ ರೈಲು ಮಾರ್ಗವನ್ನು ಮತ್ತು 2,200 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಇತರ ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.


  ಇದನ್ನೂ ಓದಿ: Bengaluru Traffic: ಬೆಂಗಳೂರಿಗೆ ಮೋದಿ, ಈ ರಸ್ತೆಗಳು ಬಂದ್, ಪರ್ಯಾಯ ಮಾರ್ಗ ಹೀಗಿದೆ


  ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ವಿಶೇಷ ವರ್ಗದ ಸ್ಥಾನಮಾನ, ರೈಲ್ವೆ ವಲಯ ಮತ್ತು ಎರಡು ಹಿಂದುಳಿದ ಪ್ರದೇಶಗಳಿಗೆ ಅಭಿವೃದ್ಧಿ ಪ್ಯಾಕೇಜ್ ಸೇರಿದಂತೆ ವಿಭಜನೆ ಸಂಬಂಧಿತ ಭರವಸೆಗಳನ್ನು ಈಡೇರಿಸಲು ರಾಜ್ಯ ಒತ್ತಾಯಿಸುತ್ತದೆ ಎಂದು ಜಗನ್ 2019 ರಲ್ಲಿ ಭರವಸೆ ನೀಡಿದ್ದರು. ಇದೀಗ ಮಾತಿಗೆ ಕಟ್ಟುಬಿದ್ದಿರುವ ಜಗನ್ ಒಂದು ರೀತಿಯ ತೊಳಲಾಟದಲ್ಲಿದ್ದಾರೆ. ಈ ಯೋಜನೆಗಳನ್ನು ಮೋದಿವರ ಕೈಯಿಂದ ಉದ್ಘಾಟಿಸುವ ಮೂಲಕ ಜಗನ್ ಒಂದು ರೀತಿ ನಿರಾಳವಾಗಲಿದ್ದಾರೆ ಎಂಬುದಾಗಿ ವರದಿಗಳು ತಿಳಿಸಿವೆ.

  Published by:Precilla Olivia Dias
  First published: