ಜಮ್ಮುವಿನ ಪೂಚ್​ನಲ್ಲಿ ಪಾಕ್​ನಿಂದ ಅಪ್ರಚೋದಿತ ದಾಳಿ; ಇಬ್ಬರು ನಾಗರಿಕರ ಸಾವು

ಶಹಪುರ್​ ಮತ್ತು ಕಿರನಿ ವಲಯದಲ್ಲಿ ಮಧ್ಯಾಹ್ನ 2.30ರ ಸಮಯದಲ್ಲಿ ಪಾಕ್​ ಅಪ್ರಚೋದಿತ ದಾಳಿ ನಡೆಸಿತು. ಪಾಕಿಸ್ತಾನದ ಈ ಸೇನಾ ದಾಳಿಗೆ ಸೇನೆ ಬಲವಾಗಿ ಮತ್ತ ಪರಿಣಾಮಕಾರಿಯಾಗಿ ಪ್ರತ್ಯುತ್ತರ ನೀಡುತ್ತೀವೆ

Seema.R | news18-kannada
Updated:December 3, 2019, 8:16 PM IST
ಜಮ್ಮುವಿನ ಪೂಚ್​ನಲ್ಲಿ ಪಾಕ್​ನಿಂದ ಅಪ್ರಚೋದಿತ ದಾಳಿ; ಇಬ್ಬರು ನಾಗರಿಕರ ಸಾವು
ಸಾಂದರ್ಭಿಕ ಚಿತ್ರ
  • Share this:
ಜಮ್ಮು (ಡಿ.03): ಜಮ್ಮು ಕಾಶ್ಮೀರದ ಪೂಂಚ್​ ಜಿಲ್ಲೆಯ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ  ನಡೆಸಿದ ಅಪ್ರಚೋದಿತ ದಾಳಿಯಿಂದಾಗಿ ಮಹಿಳೆ ಸೇರಿದಂತೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಎಂಟು ಜನ ಗಾಯಗೊಂಡಿದ್ದಾರೆ.

ಶಹಾಪಯರ ವಲಯದಲ್ಲಿ ಪಾಕಿಸ್ತಾನ ಶೆಲ್​ ದಾಳಿ ನಡೆಸಿದೆ. ಇದರಿಂದ ಗಡಿ ನಿಯಂತ್ರಣ ರೇಖೆ ಬಳಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ ಎಂದು ಪೂಂಚ್​ನ ಹಿರಿಯ ಎಸ್ಪಿ ರಮೇಶ್​ ಅಂಗ್ರಲ್​ ತಿಳಿಸಿದ್ದಾರೆ.

ಶಹಪುರ್​ ಮತ್ತು ಕಿರನಿ ವಲಯದಲ್ಲಿ ಮಧ್ಯಾಹ್ನ 2.30ರ ಸಮಯದಲ್ಲಿ ಪಾಕ್​ ಅಪ್ರಚೋದಿತ ದಾಳಿ ನಡೆಸಿತು. ಪಾಕಿಸ್ತಾನದ ಈ ಸೇನಾ ದಾಳಿಗೆ ಸೇನೆ ಬಲವಾಗಿ ಮತ್ತ ಪರಿಣಾಮಕಾರಿಯಾಗಿ ಪ್ರತ್ಯುತ್ತರ ನೀಡುತ್ತೀವೆ ಎಂದರು.

ಇದನ್ನು ಓದಿ: ಪ್ರಿಯಾಂಕ ನಿವಾಸದಲ್ಲಿ ಭದ್ರತಾ ಲೋಪ: ಮೂವರು ಸಿಬ್ಬಂದಿಗಳ ಅಮಾನತು ಮಾಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಅಮಿತ್ ಶಾ

ಶಹಪುರ ವಲಯದ ಬಂಡಿ ಚೆಚಿಯನ್​ ಪ್ರದೇಶಯದಲ್ಲಿ ವಿಭಜಕ ಶೆಲ್​ಗಳ ದಾಳಿ ನಾಗರಿಕರನ್ನು ಗಂಭೀರವಾಗಿ ಗಾಯಗೊಳಿಸಿದೆ. ಗ್ರಾಮದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.
First published: December 3, 2019, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading