Deadly Accident: ಹೊಸ BMW ಕಾರಿನ ವೇಗ ಪರೀಕ್ಷಿಸಲು ಹೋಗಿ ಇಬ್ಬರು ಮಕ್ಕಳನ್ನು ಕೊಂದ ಯುವ ಉದ್ಯಮಿ!

ಇಬ್ಬರು ಮಕ್ಕಳ ಪ್ರಾಣ ತೆಗೆದ ಕಾರು

ಇಬ್ಬರು ಮಕ್ಕಳ ಪ್ರಾಣ ತೆಗೆದ ಕಾರು

27 ವರ್ಷದ ಯುವ ಉದ್ಯಮಿ ಯತಿನ್ ಶರ್ಮಾ ಎಂಬಾತ ತನ್ನ ಚಿಕ್ಕಪ್ಪ ಖರೀದಿಸಿದ್ದ ಕಪ್ಪು ಬಣ್ಣದ ಹೊಸ ಬಿಎಂಡಬ್ಲ್ಯು ಕಾರಿನ ವೇಗವನ್ನು ಪರೀಕ್ಷಿಸಲು ರೈಡ್‌ಗೆ ಹೊರಟಿದ್ದ. ಲೋಧಿ ರಸ್ತೆಯ ಫ್ಲೈ ಓವರ್ ಬಳಿ ಬಿಎಂಡಬ್ಲೂ ಕಾರ್ ವ್ಯಾಗನ್‌ಆರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಅದು ಫ್ಲೈಓವರ್‌ನ ಕೆಳಗೆ ಮಲಗಿದ್ದವರ ಮೇಲೆ ಪಲ್ಟಿಯಾಗಿ ಬಿದ್ದಿದೆ.

ಮುಂದೆ ಓದಿ ...
  • Share this:

ನವದೆಹಲಿ: ನೀವು ಕನ್ನಡದ (Kannada) ‘ಆ್ಯಕ್ಸಿಡೆಂಟ್’ (Accident) ಎಂಬ ಸಿನಿಮಾ (Cinema) ನೋಡಿರುತ್ತೀರಿ. ಖ್ಯಾತ ನಟ ಶಂಕರ್ ನಾಗ್ (Shankarnag) ನಟಿಸಿ, ನಿರ್ದೇಶಿಸಿದ್ದ ಸಿನಿಮಾ ಅದು. ಅದರಲ್ಲಿ ರಾಜಕಾರಣಿಯ (Politician) ಪುತ್ರನೊಬ್ಬ (Son) ಕಾರು (Car) ಓಡಿಸಿ, ಬೀದಿಯಲ್ಲಿ ಮಲಗಿದ್ದವರ ಸಾವಿಗೆ ಕಾರಣನಾಗುತ್ತಾನೆ. ಅದು ರೀಲ್ ಕಥೆಯಾಯ್ತು (Reel Story), ಆದರೆ ಇಂಥದ್ದೇ ಕಥೆಯನ್ನು ಹೋಲುವ ರಿಯಲ್ ಘಟನೆ (Real Incident) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ನಡೆದಿದೆ. ಜೂನ್ 10 ರಂದು ದೆಹಲಿಯ ಲೋಧಿ ರಸ್ತೆಯ (Lodhi Road) ಫ್ಲೈಓವರ್ ನಲ್ಲಿ (Flyover) ಈ ಘಟನೆ ನಡೆದಿದೆ. ಆದರೆ ಅದು ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿ ಯುವಕನೊಬ್ಬ (Young Boy) ತನ್ನ ಚಿಕ್ಕಪ್ಪ (Uncle) ಖರೀದಿಸಿದ್ದ ಹೊಸ ಬಿಎಂಡಬ್ಲ್ಯೂ ಕಾರ್ (BMW Car) ಓಡಿಸಿ, ಫುಟ್‌ ಪಾತ್‌ ಮೇಲೆ ನುಗ್ಗಿಸಿದ್ದಾನೆ. ಪರಿಣಾಮ ಇಬ್ಬರು ಮಕ್ಕಳು (Children) ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡು (Injured) ಆಸ್ಪತ್ರೆ ಸೇರಿದ್ದಾರೆ.


ವ್ಯಾಗನರ್‌ಗೆ ಗುದ್ದಿದ ಹೊಸ ಬಿಎಂಡಬ್ಲ್ಯೂ ಕಾರ್


27 ವರ್ಷದ ಯುವ ಉದ್ಯಮಿ ಯತಿನ್ ಶರ್ಮಾ ಎಂಬಾತ ತನ್ನ ಚಿಕ್ಕಪ್ಪ ಖರೀದಿಸಿದ್ದ ಕಪ್ಪು ಬಣ್ಣದ ಹೊಸ ಬಿಎಂಡಬ್ಲ್ಯು ಕಾರಿನ ವೇಗವನ್ನು ಪರೀಕ್ಷಿಸಲು ರೈಡ್‌ಗೆ ಹೊರಟಿದ್ದ. ಲೋಧಿ ರಸ್ತೆಯ ಫ್ಲೈ ಓವರ್ ಬಳಿ ಬಿಎಂಡಬ್ಲೂ ಕಾರ್ ವ್ಯಾಗನ್‌ಆರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಅದು ಫ್ಲೈಓವರ್‌ನ ಕೆಳಗೆ ಮಲಗಿದ್ದವರ ಮೇಲೆ ಪಲ್ಟಿಯಾಗಿ ಬಿದ್ದಿದೆ.


ಇಬ್ಬರು ಮಕ್ಕಳು ಸಾವು, 8 ಮಂದಿಗೆ ಗಾಯ


ಫ್ಲೈ ಓವರ್ ಕೆಳಗೆ ಕೂಲಿ ಕಾರ್ಮಿಕರು, ಅವರ ಮಕ್ಕಳೆಲ್ಲ ಮಲಗಿದ್ದರು. ಅಪಘಾತಕ್ಕೆ ಒಳಗಾದ ಕಾರು ಅವರ ಮೇಲೆ ಬಿದ್ದಿದೆ. ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು 6 ವರ್ಷದ ರೋಶಿನಿ ಹಾಗೂ ಆಕೆಯ ಸಹೋದರ, 10 ವರ್ಷದ ಅಮೀರ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡು, ಅವರನ್ನು AIIMS ಆಸ್ಪತ್ರೆಯ  ಟ್ರಾಮಾ ಸೆಂಟರ್‌ಗೆ  ಸೇರಿಸಿದ್ದಾರೆ. ಇನ್ನು ಅಪಘಾತದ ಹೊಡೆತಕ್ಕೆ ವ್ಯಾಗನರ್‌ನಲ್ಲಿ ಇದ್ದವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.


ಇದನ್ನೂ ಓದಿ: Agnipath Protest: 3ನೇ ದಿನದ ಪ್ರತಿಭಟನೆಯಲ್ಲಿ 'ಅಗ್ನಿ'ಗೆ ಆಹುತಿಯಾದ ರೈಲು, ತೆಲಂಗಾಣದಲ್ಲಿ ಓರ್ವ ಬಲಿ


 ಪೊಲೀಸರಿಂದ ಆರೋಪಿ ಬಂಧನ


ಅಪಘಾತವಾಗುತ್ತಿದ್ದಂತೆ ಆರೋಪಿ ಯತಿನ್ ಶರ್ಮಾ ಎಸ್ಕೇಪ್ ಆಗಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪೊಲೀಸರ ಮುಂದೆ ಆತ ಹೇಳಿಕೆ ನೀಡಿದ್ದಾನೆ. ಆ ಸಮಯದಲ್ಲಿ ತಾನು ತನ್ನ ಮೂವರು ಸ್ನೇಹಿತರೊಂದಿಗೆ ಇದ್ದೆ.  ನಾನು ನನ್ನ ಸ್ನೇಹಿತರೊಂದಿಗೆ ಸಾಮ್ರಾಟ್ ಹೋಟೆಲ್‌ನಿಂದ ಸೂರ್ಯ ಹೋಟೆಲ್‌ಗೆ ಹೋಗುತ್ತಿದೆ. ಮುಂಜಾನೆ 4.30 ರ ಸುಮಾರಿಗೆ ನಾವು ಫ್ಲೈಓವರ್ ಅನ್ನು ದಾಟುತ್ತಿದ್ದಾಗ ಕಪ್ಪು ಕಾರು ನಮ್ಮ ಕಾರಿಗೆ ಬಲಭಾಗದಲ್ಲಿ ಡಿಕ್ಕಿ ಹೊಡೆದಿದೆ. ನನ್ನ ಕಾರು ಫ್ಲೈಓವರ್‌ನ ಕೊನೆಯಲ್ಲಿ ಎಳೆದುಕೊಂಡು ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಅದು ಪಲ್ಟಿಯಾಗಿ ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಬಿದ್ದಿದೆ. ನಾನು ಮತ್ತು ನನ್ನ ಸ್ನೇಹಿತರು ಗಾಯಗೊಂಡಿದ್ದೇವೆ. ಜನರು ನಮಗೆ ಸಹಾಯ ಮಾಡಿದರು. ಕಾರ್ ಡ್ರೈವರ್ ಮೂಲಚಂದ್ ಎಂಬವರು ಭಯಕ್ಕೆ ಓಡಿ ಹೋಗಿದ್ದಾರೆ ಎಂದು ಹೇಳಿದ್ದಾನೆ.


ಇದನ್ನೂ ಓದಿ: Kuja Dosha: ಪ್ರೀತಿಸಿದವನ ಜೊತೆ ಮದುವೆಗೆ ಕುಜದೋಷವೇ ಅಡ್ಡಿಯಾಯ್ತು! ನೊಂದ ಲೇಡಿ ಕಾನ್ಸ್‌ಟೇಬಲ್ ಸಾವಿಗೆ ಶರಣು


 ಆರೋಪಿ ವಿರುದ್ಧ ಪ್ರಕರಣ ದಾಖಲು


ಆರೋಪಿ ಯತೀನ್ ಶರ್ಮಾ ವಿರುದ್ಧ ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರು ಇತ್ತೀಚೆಗೆ ಪದವಿ ಪೂರ್ಣಗೊಳಿಸಿದ್ದಾರೆ ಮತ್ತು ನೋಯ್ಡಾದಲ್ಲಿ ಗಾರ್ಮೆಂಟ್ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Published by:Annappa Achari
First published: