Cockroaches: ಪಾಕಿಸ್ತಾನ ಸಂಸತ್ತಿನ ಆಹಾರದಲ್ಲಿ ಜಿರಳೆ! 2 ಕೆಫೆ ಕ್ಲೋಸ್

ಪಾಕಿಸ್ತಾನದ ಸಂಸತ್ತಿನ ಕೆಫೆ ಆಹಾರದಲ್ಲಿ ಜಿರಳೆಗಳು ಪತ್ತೆಯಾಗಿದ್ದು ಎರಡು ಕೆಫೆಗಳನ್ನು ಕ್ಲೋಸ್ ಮಾಡಲಾಗಿದೆ.

ಜಿರಳೆ

ಜಿರಳೆ

  • Share this:
ಇಸ್ಲಮಾಬಾದ್(ಆ.01): ತಮಗೆ ಬಡಿಸಿದ ಆಹಾರದಲ್ಲಿ ಜಿರಳೆಗಳಿವೆ ಎಂದು ಶಾಸಕರು ದೂರಿದ ನಂತರ ಅಧಿಕಾರಿಗಳು ಪಾಕಿಸ್ತಾನದ (Pakistan) ಸಂಸತ್ ಭವನದಲ್ಲಿರುವ ಎರಡು ಕೆಫೆಟೇರಿಯಾಗಳನ್ನು ಸೀಲ್ (Sealed) ಮಾಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಶನಿವಾರದ ಸಮಾ ಟಿವಿ ವರದಿಯ ಪ್ರಕಾರ, ಸ್ವಚ್ಛತೆ ಬಗ್ಗೆ ಶಾಸಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಇಸ್ಲಾಮಾಬಾದ್‌ನ  (Islamabad)ಜಿಲ್ಲಾಡಳಿತದ ಅಧಿಕಾರಿಗಳು ಸಂಸತ್ ಭವನದಲ್ಲಿರುವ ಎರಡು ಕೆಫೆಟೇರಿಯಾಗಳ ಮೇಲೆ ದಾಳಿ ನಡೆಸಿದರು. ಶಾಸಕರು (MLA) ತಮಗೆ ನೀಡುತ್ತಿರುವ ಆಹಾರದಲ್ಲಿ ಜಿರಳೆಗಳು (Cockroaches) ಕಂಡುಬಂದಿವೆ ಎಂದು ದೂರಿದರು.

ತಪಾಸಣೆಯ ನಂತರ, ಅವರು ತಿನ್ನುವ ಪ್ರದೇಶದಲ್ಲಿ ಕ್ರಿಮಿಕೀಟಗಳು ಮತ್ತು ಅಡುಗೆಮನೆಯಲ್ಲಿ ಸ್ವಚ್ಛತೆ ಇಲ್ಲದೆ ಇರುವುದರನ್ನು ಕಂಡುಕೊಂಡರು. ನಂತರ ಆವರಣವನ್ನು ಸೀಲ್ ಮಾಡಲಾಗಿದೆ ಎಂದು ವರದಿಯಾಗಿದೆ.

ಸ್ವಚ್ಛತೆ ಇಲ್ಲ ಎಂಬ ಆರೋಪ

ಈ ಕೆಫೆಟೇರಿಯಾಗಳ ಕಳಪೆ ನೈರ್ಮಲ್ಯದ ಕಾರಣದಿಂದ ಊಟವನ್ನು ಆರ್ಡರ್ ಮಾಡುವುದನ್ನು ನಿಲ್ಲಿಸಿದ್ದೇವೆ ಎಂದು ಅನೇಕ ಶಾಸಕರು ಹೇಳಿದ್ದಾರೆ. ಸಂಸತ್ ಭವನದ ಕೆಫೆಟೇರಿಯಾಗಳಲ್ಲಿ ಇಂತಹ ಘಟನೆಗಳು ಅಪರೂಪವೇನಲ್ಲ. 2014 ರಲ್ಲಿ, ಈ ಕೆಫೆಟೇರಿಯಾಗಳಲ್ಲಿ ಕೆಚಪ್ ಬಾಟಲಿಯಲ್ಲಿ ಜಿರಳೆ ಕಂಡುಬಂದಿದೆ.

ಇದನ್ನೂ ಓದಿ: Bihar: ಮಧ್ಯರಾತ್ರಿ ಯುವತಿ ಮನೆಗೆ ನುಗ್ಗಿ ಈ ಬೇಡಿಕೆ ಮುಂದಿಟ್ಟ! ಮನೆ ಮಂದಿ ಇದ್ದರೂ ಡೋಂಟ್ ಕೇರ್

2019 ರಲ್ಲಿ, ಶಾಸಕರು ಈ ಕೆಫೆಟೇರಿಯಾಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟ ಮತ್ತು ಹಲವಾರು ನಿಯಂತ್ರಣ ಉಲ್ಲಂಘನೆಗಳನ್ನು ಪ್ರತಿಭಟಿಸಿದರು.

ಇತ್ತೀಚೆಗೆ ಭಾರತದಲ್ಲಿಯೂ ಜಿರಳೆ ಪ್ರಕರಣಗಳು

ನೆಕ್ಸಸ್ ಎಲಾಂಟೆ ಮಾಲ್‌ನ ಮೂರನೇ ಮಹಡಿಯಲ್ಲಿರುವ ಫುಡ್ ಕೋರ್ಟ್‌ನಲ್ಲಿನ (Food Court) ರೆಸ್ಟೋರೆಂಟ್‌ನ ಆಹಾರದಲ್ಲಿ ಹಲ್ಲಿ ಕಂಡುಬಂದ ಒಂದು ತಿಂಗಳ ನಂತರ, ಶುಕ್ರವಾರದಂದು ಗ್ರಾಹಕರೊಬ್ಬರು ಮತ್ತೊಂದು ಫುಡ್ ಕೋರ್ಟ್ ತಿನಿಸುಗಳಲ್ಲಿ ತಮ್ಮ ಆಹಾರದಲ್ಲಿ ಜಿರಳೆಯನ್ನು (Cockroaches) ಕಂಡುಕೊಂಡರು.

ಪೊಲೀಸರನ್ನು ಸ್ಥಳಕ್ಕೆ ಕರೆಸಿದ ನಂತರ, ಮೌಲಿ ಕಾಂಪ್ಲೆಕ್ಸ್ ನಿವಾಸಿ ಅನಿಲ್ ಕುಮಾರ್ ಅವರು ತಮ್ಮ ಹೆಂಡತಿ ಮತ್ತು ಸಹೋದರಿಯೊಂದಿಗೆ ಊಟ ಮಾಡಲು ಬಂದಿರುವುದಾಗಿ ಹೇಳಿದರು. ಅವರು ಮಾಲ್‌ನ ಫುಡ್ ಕೋರ್ಟ್‌ನಲ್ಲಿರುವ ಚೈನೀಸ್ ಫುಡ್ ಔಟ್‌ಲೆಟ್ "ನಿ ಹಾವೊ" ನಿಂದ ಫ್ರೈಡ್ ರೈಸ್ ಅನ್ನು ಆರ್ಡರ್ ಮಾಡಿದರು ಮತ್ತು ಅದರಲ್ಲಿ ಜಿರಳೆ ಕಂಡು ಬೆಚ್ಚಿಬಿದ್ದರು.

ಪೊಲೀಸರಿಗೆ ಕರೆ ಮಾಡಿದ ಗ್ರಾಹಕ

ಅವರು ಅದನ್ನು ರೆಸ್ಟೋರೆಂಟ್ ಸಿಬ್ಬಂದಿಗೆ ತೋರಿಸಿದಾಗ ಅವರು ಅದನ್ನು ಈರುಳ್ಳಿ ತುಂಡು ಎಂದು ಮಾತು ಬದಲಾಯಿಸಿದ್ದಾರೆ. ನಂತರ ಗ್ರಾಹಕ ಪೊಲೀಸರಿಗೆ ಕರೆ ಮಾಡಿದ್ದಾರೆ.

ರೆಸ್ಟೊರೆಂಟ್ ಮತ್ತು ಮಾಲ್ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ಎಲಾಂಟೆ ಫುಡ್ ಕೋರ್ಟ್ ಅಯಾನ್ ಫುಡ್ಸ್ ಒಡೆತನದಲ್ಲಿದೆ ಮತ್ತು ರೆಸ್ಟೋರೆಂಟ್ ನೇರವಾಗಿ ಅವರಿಂದಲೇ ನಡೆಸಲ್ಪಡುತ್ತದೆ. ಫುಡ್ ಕೋರ್ಟ್ ಮಾಲೀಕರು ಮಾಲ್ ಆಡಳಿತದ ಪಿತೂರಿ ಆರೋಪಿಸಿದ್ದಾರೆ.

ಅಯಾನ್ ಫುಡ್ಸ್ ಮಾಲೀಕ ಪುನೀತ್ ಗುಪ್ತಾ ಅವರು ಏಪ್ರಿಲ್‌ನಲ್ಲಿ ಬಾಡಿಗೆಗೆ ಸಂಬಂಧಿಸಿದಂತೆ ವಿವಾದವನ್ನು ಹೊಂದಿದ್ದ ಮಾಲ್ ಆಡಳಿತದ ವಿಧ್ವಂಸಕ ಕೃತ್ಯ ಎಂದು ಹೇಳಿದ್ದಾರೆ. ಆಗ ಮಾಲ್ ಆಡಳಿತ ಮಂಡಳಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಈ ಗ್ರಾಹಕರು ಮಾಲ್‌ನ ಉದ್ಯೋಗಿಯಾಗಿದ್ದು, ಘಟನೆ ಸಂಭವಿಸುವ ಮೊದಲು ಮಾಲ್‌ನ ಇತರ ಕೆಲವು ಉದ್ಯೋಗಿಗಳೊಂದಿಗೆ ಚಾಟ್ ಮಾಡುತ್ತಿರುವುದು ಕಂಡುಬಂದಿದೆ ಎಂದು ಗುಪ್ತಾ ಆರೋಪಿಸಿದ್ದಾರೆ.

ಬೇಕೆಂದೇ ನಡೆದಿತ್ತಾ ಪಿತೂರಿ

“ನಾವು ಫುಡ್ ಕೋರ್ಟ್ ನಡೆಸುತ್ತಿರುವ ಒಂಬತ್ತು ವರ್ಷಗಳಲ್ಲಿ, ನಮಗೆ ಅಂತಹ ದೂರುಗಳು ಬಂದಿಲ್ಲ. ಆದರೆ, ಕಳೆದ ಎರಡು ತಿಂಗಳಲ್ಲಿ ಎರಡು ಘಟನೆಗಳು ನಡೆದಿವೆ. ನಮ್ಮ ಮತ್ತು ಮಾಲ್ ನಡುವಿನ ಫುಡ್ ಕೋರ್ಟ್ ಗುತ್ತಿಗೆ ವಿವಾದದ ನಂತರ ಇದು ಪ್ರಾರಂಭವಾಯಿತು. ವಿಷಯವು ನ್ಯಾಯಾಲಯದ ಮೆಟ್ಟಿಲೇರಿತು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಕೇಳಿದ್ದು, ಈ ಕಾರಣಕ್ಕಾಗಿಯೇ ಈ ವಿಧ್ವಂಸಕ ಕೃತ್ಯಗಳನ್ನು ನಡೆಸಲಾಗುತ್ತಿದೆ, ಎಂದು ಆರೋಪಿಸಿದರು.
Published by:Divya D
First published: