Narada Sting Case; ನಾರದ ಪ್ರಕರಣ ಸಂಬಂಧ ಬಂಗಾಳದ 2 ಸಚಿವರು, ಶಾಸಕರ ಬಂಧನ, ಸಿಬಿಐ ಕಚೇರಿಗೆ ಬಂದ ಸಿಎಂ ಮಮತಾ ಬ್ಯಾನರ್ಜಿ

“ನಾರದಾ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನನ್ನನ್ನು ಬಂಧಿಸಿದೆ. ನನಗೆ ಯಾವುದೇ ಮುನ್ಸೂಚನೆ ನೀಡದೆಯೇ ನನ್ನನ್ನು ಬಂಧಿಸಲಾಗಿದೆ. ನನ್ನ ಬಂಧನವನ್ನು ನಾನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ ”ಎಂದು ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಮತ್ತು ಪುರಸಭೆಯ ವ್ಯವಹಾರಗಳ ಸಚಿವ ಹಕೀಮ್ ಹೇಳಿದ್ದಾರೆ.

ಸಿಬಿಐ ಕಚೇರಿಗೆ ಆಗಮಿಸಿದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಕಾರ್ಯಕರ್ತರು.

ಸಿಬಿಐ ಕಚೇರಿಗೆ ಆಗಮಿಸಿದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಕಾರ್ಯಕರ್ತರು.

  • Share this:
ಕೋಲ್ಕತ್ತಾ (ಪಶ್ಚಿಮಬಂಗಾಳ) ನಾರದ ಭ್ರಷ್ಟಾಚಾರ ಪ್ರಕರಣ (Narada Sting Case) ಸಂಬಂಧ ಕೇಂದ್ರ ತನಿಖಾ ಸಂಸ್ಥೆ (CBI) ಪಶ್ಚಿಮಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್​ (ಟಿಎಂಸಿ)ನ ಹಾಲಿ ಇಬ್ಬರು ಸಚಿವರು ಹಾಗೂ ಓರ್ವ ಶಾಸಕರನ್ನು ಸೋಮವಾರ ಬಂಧಿಸಿದೆ. ಸಚಿವರಾದ ಫಿರ್ಹಾದ್ ಹಕೀಂ ಮತ್ತು ಸುಬ್ರಾತ್ ಮುಖರ್ಜಿ ಹಾಗೂ ಓರ್ವ ಶಾಸಕ ಮದನ್ ಮಿತ್ರ, ಕೋಲ್ಕತ್ತಾ ಮಾಜಿ ಮೇಯರ್ ಸೋವನ್ ಚಟರ್ಜಿ ಅವರನ್ನು ಬಂಧಿಸಲಾಗಿದೆ. ಪಶ್ಚಿಮಬಂಗಾಳದ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡ ಬಳಿಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಘರ್ಷಣೆ ತೀವ್ರಗೊಂಡಿದೆ. ನಾಲ್ಕು ವರ್ಷದ ಹಳೆಯ ಭ್ರಷ್ಟಾಚಾರ ಪ್ರಕರಣವನ್ನು ಕೇಂದ್ರ ಸರ್ಕಾರ ರಾಜಕೀಯ ಷಡ್ಯಂತ್ರವಾಗಿ ಬಳಸುತ್ತಿದೆ ಎಂದು ಟಿಎಂಸಿ ಆರೋಪಿಸಿದರೆ, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿದೆ.

ನಾರದ ಸ್ಟಿಂಗ್ ಆಪರೇಷನ್​ ಪ್ರಕರಣದಲ್ಲಿ ಸಿಬಿಐನ ಕ್ರಮ ರಾಜಕೀಯ ವಿವಾದವನ್ನು ಸೃಷ್ಟಿಸಿದೆ. ಕೇಂದ್ರ ತನಿಖಾ ಸಂಸ್ಥೆ ಕೇಂದ್ರದ ಬಿಜೆಪಿ ಸರ್ಕಾರ ಹೇಳಿದಂತೆ ಕುಣಿಯುತ್ತಿದೆ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಟಿಎಂಸಿ ಆರೋಪಿಸಿದೆ. ಆದರೆ, ಟಿಎಂಸಿ ಆರೋಪವನ್ನು ಬಿಜೆಪಿ ನಿರಾಕರಿಸಿದೆ.

ಹಕ್ಕಿಂ ಮತ್ತು ಮುಖರ್ಜಿ ಹೊರತುಪಡಿಸಿ, ಟಿಎಂಸಿ ಶಾಸಕರಾದ ಮದನ್ ಮಿತ್ರಾ ಹಾಗೂ ಕೋಲ್ಕತ್ತಾ ಮಾಜಿ ಮೇಯರ್ ಸೋವನ್ ಚಟರ್ಜಿ ಅವರು ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾಗಿದ್ದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಟಿಎಂಸಿ ಕಾರ್ಯಕರ್ತರು ಮತ್ತು ವಕೀಲರು ನಿಜಾಮ್ ಪ್ಯಾಲೇಸ್​ನಲ್ಲಿರುವ ಸಿಬಿಐ ಕಚೇರಿಗೆ ಧಾವಿಸಿದರು. ಇದೇ ಕಚೇರಿಯಲ್ಲಿ ಟಿಎಂಸಿ ನಾಯಕರನ್ನು ಮೊದಲು ವಿಚಾರಣೆಗೆ ಕರೆದೊಯ್ದು ನಂತರ ಬಂಧಿಸಲಾಯಿತು. ಈ ಪ್ರಕರಣ ಟಿಎಂಸಿ ಮತ್ತು ಬಿಜೆಪಿ ನಡುವಿನ ಹೊಸ ಘರ್ಷಣೆಯಾಗಿ ಕಾಣಿಸಿಕೊಂಡಿದೆ.


ರಾಜ್ಯದ ಅಧಿಕಾರಿಗಳನ್ನು ಸ್ಪೀಕರ್ ಮತ್ತು ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಬಂಧಿಸುವಂತಿಲ್ಲ. ಒಂದು ವೇಳೆ ನೀವು ನನ್ನ ಅಧಿಕಾರಿಗಳನ್ನು ಬಂಧಿಸಿದರೆ ನನ್ನನ್ನು ಬಂಧಿಸಿ ಎಂದು ಸಿಎಂ ಮಮತಾ ಬ್ಯಾನರ್ಜಿ ಅವರು ಸಿಬಿಐ ಅಧಿಕಾರಿಗಳಿಗೆ ಹೇಳಿದ್ದಾಗಿ ವಕೀಲ ಅನಿಂದೋ ರಾವತ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇಂದು ಬೆಳಗ್ಗೆ ಸಚಿವ ಹಕ್ಕಿಂ ಅವರ ನಿವಾಸ ಮುಂದೆ ನಾಟಕೀಯ ಬೆಳವಣಿಗೆಗಳು ನಡೆದವು. ದಕ್ಷಿಣ ಕೊಲ್ಕತ್ತಾದ ಚೆಟ್ಲಾದಲ್ಲಿರುವ ಹಕ್ಕಿಂ ಅವರ ನಿವಾಸಕ್ಕೆ ಬೆಳಗ್ಗೆ 8 ಗಂಟೆಗೆ ಬಂದ ಸಿಬಿಐ ಅಧಿಕಾರಿಗಳು ಟಿಎಂಸಿ ಕಾರ್ಯಕರ್ತರ ಪ್ರತಿಭಟನೆ ನಡುವೆ ಸುಮಾರು 20 ನಿಮಿಷಗಳ ಕಾಲ ಅವರನ್ನು ವಿಚಾರಣೆ ನಡೆಸಿ ಬಳಿಕ ನಿಜಾಮ್ ಪ್ಯಾಲೇಸ್​ ಕಚೇರಿಗೆ ಕರೆದೊಯ್ದರು.

ಇದನ್ನು ಓದಿ: Actor Chetan: ಸ್ಮಶಾನ ಕಾರ್ಮಿಕರ ತಕ್ಷಣದ ಅಗತ್ಯಗಳು, ಶಾಶ್ವತ ಪರಿಹಾರಗಳಿಗೆ ಒತ್ತಾಯಿಸಿ ಸಿಎಂ ಬಿಎಸ್​ವೈಗೆ ನಟ ಚೇತನ್ ಪತ್ರ

ಆರಂಭದಲ್ಲಿ, ಸಿಬಿಐ ಅಧಿಕಾರಿಗಳು ಹಕ್ಕಿಂ ಅವರನ್ನು ಬಂಧಿಸಿಲ್ಲ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದರು. ಆದರೆ, ಆದರೆ ಹಕೀಂ ಅವರು ಸಿಬಿಐ ತಮ್ಮನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಿದ್ದರು. “ನಾರದಾ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನನ್ನನ್ನು ಬಂಧಿಸಿದೆ. ನನಗೆ ಯಾವುದೇ ಮುನ್ಸೂಚನೆ ನೀಡದೆಯೇ ನನ್ನನ್ನು ಬಂಧಿಸಲಾಗಿದೆ. ನನ್ನ ಬಂಧನವನ್ನು ನಾನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ ”ಎಂದು ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಮತ್ತು ಪುರಸಭೆಯ ವ್ಯವಹಾರಗಳ ಸಚಿವ ಹಕೀಮ್ ಹೇಳಿದ್ದಾರೆ.

ಪ್ರಕರಣ ಸಂಬಂಧ ತಮ್ಮ ಅನುಮತಿ ಪಡೆಯದೆ ಸಚಿವರನ್ನು ಬಂಧಿಸಿರುವುದು ಕಾನೂನು ಬಾಹಿರ ಎಂದು ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.
Published by:HR Ramesh
First published: