ಯುವತಿಯ ಜೀವ ತೆಗೆದ ವಿಪತ್ತು ನಿರ್ವಹಣಾ ತಂಡದ ಪ್ರಾತ್ಯಕ್ಷಿಕೆ (Video)

news18
Updated:July 13, 2018, 12:45 PM IST
ಯುವತಿಯ ಜೀವ ತೆಗೆದ ವಿಪತ್ತು ನಿರ್ವಹಣಾ ತಂಡದ ಪ್ರಾತ್ಯಕ್ಷಿಕೆ (Video)
news18
Updated: July 13, 2018, 12:45 PM IST
ಕೊಯಮತ್ತೂರು: ಇಲ್ಲಿನ ಖಾಸಾಗಿ ಕಾಲೇಜಿನಲ್ಲಿ ನಡೆಯುತ್ತಿದ್ದ ವಿಪತ್ತು ನಿರ್ವಹಣೆಗೆ ತರಬೇತಿ ವೇಳೆ ಸಂಭವಿಸಿದ ಅವಘಡದಲ್ಲಿ ಯುವತಿಯೊಬ್ಬಳು ಜೀವ ಕಳೆದುಕೊಂಡ ಘಟನೆ ನಡೆದಿದೆ.

ಕೊಯಮತ್ತೂರಿನ ಹೊರವಲಯದ ನರಸಿಪುರಂನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಗುರುವಾರ ಸಂಜೆ ವಿಪತ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ತರಬೇತಿ ನಡೆಯುತ್ತಿತ್ತು. ಈ ವೇಳೆ ತರಬೇತುದಾರ ಎರಡನೆ ವರ್ಷದ ಪದವಿ ವಿದ್ಯಾರ್ಥಿನಿ ಎನ್. ಲೋಕೇಶ್ವರಿಯನ್ನು ಎರಡನೆಯ ಮಹಡಿಯಿಂದ ಹಾರುವಂತೆ ಹೇಳಿದ್ದಾರೆ. ವಿದ್ಯಾರ್ಥಿನಿ ಹಿಂದೇಟು ಹಾಕಿದರೂ ಆತನೇ ಹಿಂಬದಿಯಿಂದ ತಳ್ಳಿದ್ದಾನೆ.ಕೆಳಗೆ ಬಿದ್ದ ಲೋಕೇಶ್ವರಿಯ ತಲೆಗೆ ಮೊದಲನೇ ಮಹಡಿಯ ಗೋಡೆ ಬಡಿದಿದೆ. ನೆಲದಲ್ಲಿ ಉಳಿದ ವಿದ್ಯಾರ್ಥಿಗಳು ಬಲೆ ಹಿಡಿದುಕೊಂಡು ಆಕೆಯನ್ನು ಹಿಡಿಯಲು ನಿಂತಿದ್ದರು. ಆದರೆ ತಲೆಗೆ ತೀವ್ರ ಗಾಯವಾದ ಕಾರಣ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಯುವತಿಯ ತಲೆ ಮತ್ತು ಕುತ್ತಿಗೆಯ ಸೂಕ್ಷ್ಮ ಭಾಗಗಳಿಗೆ ಪೆಟ್ಟಾಗಿತ್ತು ಎಂದು ವರದಿಯಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದಲೇ ಈ ತರಬೇತಿ ನಡೆಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ತರಬೇತುದಾರ ಆರ್ಮುಗಂ ಮತ್ತು ಕಾಲೇಜಿನ ಪ್ರಿನ್ಸಿಪಾಲ್ ಮಾಲಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸ್​ ಮಾಹಿತಿಗಳ ಪ್ರಕಾರ ಲೋಕೇಶ್ವರಿಗೂ ಮುನ್ನ ಐವರು ವಿದ್ಯಾರ್ಥಿಗಳು ಈ ಸಾಹಸದಲ್ಲಿ ಯಶಸ್ವಿಯಾಗಿದ್ದರಂತೆ.
First published:July 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...