ಗೌರಿ ಹಬ್ಬದಂದೇ ಫಸ್ಟ್ ರ‍್ಯಾಂಕ್ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ


Updated:September 14, 2018, 11:25 AM IST
ಗೌರಿ ಹಬ್ಬದಂದೇ ಫಸ್ಟ್ ರ‍್ಯಾಂಕ್ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ
ಪ್ರಾತಿನಿಧಿಕ ಚಿತ್ರ
  • Share this:
- ನ್ಯೂಸ್18 ಕನ್ನಡ

ಚಂಡೀಗಢ(ಸೆ. 14): ಹರಿಯಾಣದ ಮಹೇಂದ್ರಗಡ್​ನ ಕನಿನಾ ಎಂಬಲ್ಲಿ ಓರ್ವ ಹದಿಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಸಂಭವಿಸಿದ ಪೈಶಾಚಿಕ ಘಟನೆ ವರದಿಯಾಗಿದೆ. ನಾಲ್ಕೈದು ಜನರು 19 ವರ್ಷದ ಯುವತಿಯನ್ನು ಕಿಡ್ನಾಪ್ ಮಾಡಿ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಬುಧವಾರ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಈ ಸಂತ್ರಸ್ತ ಯುವತಿಯು ಕ್ಲಾಸ್12 ಪರೀಕ್ಷೆಯಲ್ಲಿ ಟಾಪ್ಪರ್ ಆಗಿದ್ದಳೆನ್ನಲಾಗಿದೆ.

ಬುಧವಾರದಂದು ಸಂತ್ರಸ್ತ ಯುವತಿಯು ಟ್ಯೂಷನ್​ಗೆಂದು ಹೋಗುತ್ತಿದ್ದಾಗ ಆರೋಪಿಗಳು ಕಾರಿನಲ್ಲಿ ಆಗಮಿಸಿ ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಮತ್ತುಬರಿಸುವ ಔಷಧಿಯನ್ನು ಪಾನೀಯಕ್ಕೆ ಬೆರಸಿ ಯುವತಿಗೆ ಬಲವಂತವಾಗಿ ಕುಡಿಸುತ್ತಾರೆ. ನಂತರ ಎಲ್ಲರೂ ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಾರೆ. ಅದಾದ ನಂತರ ಆಕೆಯನ್ನು ಕನೀನಾ ಎಂಬಲ್ಲಿನ ಬಸ್ ನಿಲ್ದಾಣವೊಂದರಲ್ಲಿ ಬಿಟ್ಟು ಹೋಗುತ್ತಾರೆ.

ರೇವಾರಿಯಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಝೀರೋ ಎಫ್​ಐಆರ್ ದಾಖಲಿಸಲಾಯಿತು. ಅತ್ಯಾಚಾರ ನಡೆದದ್ದು ಮಹೇಂದ್ರಗಡ್ ಸಮೀಪವಾದ್ದರಿಂದ ಅಲ್ಲಿಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನ ಹಿಡಿಯಲು ಬಲೆಬೀಸಿದ್ದಾರೆ.

ಏನಿದು ಝೀರೋ ಎಫ್​ಐಆರ್?
ಅಪರಾಧ ನಡೆದ ಸ್ಥಳ ಬೇರೆ ಠಾಣೆಯ ವ್ಯಾಪ್ತಿಯಲ್ಲಿದ್ದರೂ ಸಂತ್ರಸ್ತರು ನೀಡುವ ದೂರಿನ ಮೇರೆಗೆ ಎಲ್ಲಿ ಬೇಕಾದರೂ ಝೀರೋ ಎಫ್​ಐಆರ್ ದಾಖಲಿಸಬಹುದು. ಆ ನಂತರ ಆ ಪ್ರಕರಣವನ್ನು ನಿರ್ದಿಷ್ಟ ಠಾಣೆಗೆ ವರ್ಗಾಯಿಸಬಹುದು. ಸಂತ್ರಸ್ತರನ್ನು ಅಲ್ಲಿಂದಿಲ್ಲಿಗೆ ಅಲೆಯುವುದನ್ನು ತಪ್ಪಿಸಲು ಕಾನೂನಿನಲ್ಲಿ ಇಂಥದ್ದೊಂದು ಅವಕಾಶ ಕಲ್ಪಿಸಲಾಗಿದೆ.
First published:September 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ