Kerala Girl Shot Dead: ಅಮೆರಿಕದಲ್ಲಿ ಗುಂಡೇಟಿಗೆ ಕೇರಳ ಮೂಲದ ಯುವತಿ ಬಲಿ​..!

ಗುಂಡೇಟಿಗೆ ಬಲಿಯಾದ ಮರಿಯಮ್ ಸುಸಾನ್ ಮ್ಯಾಥ್ಯೂ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿರಣಂ ಮೂಲದ ಬೋಬೆನ್ ಮ್ಯಾಥ್ಯೂ ಅವರ ಪುತ್ರಿ. ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲು ಕ್ರಮಕೈಗೊಳ್ಳಲಾಗುತ್ತಿದೆ.

ಮೃತ ಮರಿಯಮ್ ಸುಸಾನ್

ಮೃತ ಮರಿಯಮ್ ಸುಸಾನ್

 • Share this:
  ಅಮೆರಿಕದ ಅಲಬಾಮಾ(Alabama) ರಾಜಧಾನಿ ಮಾಂಟ್‌ಗೊಮೆರಿಯಲ್ಲಿ (Montgomery) 19 ವರ್ಷದ ಕೇರಳದ (Kerala girl)ಯುವತಿಯೊಬ್ಬಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ಯುವತಿಯನ್ನು ಮರಿಯಮ್ ಸುಸಾನ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ, ಆಕೆಯು ತನ್ನ ಮನೆಯಲ್ಲಿ ಮಲಗಿದ್ದಾಗ ಮೇಲಿನ ಮಹಡಿಯಿಂದ ಬಂದ ಗುಂಡುಗಳು (bullets) ಸೀಲಿಂಗ್ ಮೂಲಕ (ceiling) ತೂರಿಕೊಂಡು ಆಕೆಗೆ ತಗಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತಪಟ್ಟ ಮರಿಯಮ್ ಸುಸಾನ್ ಮ್ಯಾಥ್ಯೂ( Mariam Susan Mathew) ಪತ್ತನಂತಿಟ್ಟ ಮೂಲದವರು ಎಂದು ತಿಳಿದುಬಂದಿದೆ. ಮರಿಯಂ ತನ್ನ ನಿವಾಸದಲ್ಲಿ ಮಲಗಿದ್ದ ವೇಳೆ ಮೇಲಿನ ಮಹಡಿಯಿಂದ ಬಂದ ಗುಂಡುಗಳು ಸೀಲಿಂಗ್​ ತೂರಿಕೊಂಡು ಯುವತಿಗೆ ನಾಟಿರುವುದು ನಿಜಕ್ಕೂ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

  ಇದನ್ನು ಓದಿ:Mona Rai: ಮಾಡೆಲ್​ ಮೋನ ರೈ ಹತ್ಯೆ, ಕೊನೆಗೂ ಕೊಲೆಯ ಹಿಂದಿನ ಮಾಸ್ಟರ್​​ ಮೈಂಡ್​ ಲಾಕ್​!

  ಕೇರಳಕ್ಕೆ ಕೊಂಡೊಯ್ಯಲು ಕ್ರಮ
  ಗುಂಡೇಟಿಗೆ ಬಲಿಯಾದ ಮರಿಯಮ್ ಸುಸಾನ್ ಮ್ಯಾಥ್ಯೂ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿರಣಂ ಮೂಲದ ಬೋಬೆನ್ ಮ್ಯಾಥ್ಯೂ ಅವರ ಪುತ್ರಿ. ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲು ಕ್ರಮಕೈಗೊಳ್ಳಲಾಗುತ್ತಿದೆ. ಅಲಬಮಾದ ಮಾಂಟ್ಗೋಮೆರಿಯಲ್ಲಿ ಈ ಘಟನೆಯು ನಡೆದಿದೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸೌತ್​ ವೆಸ್ಟ್​​ ಅಮೆರಿಕ ಮಲಂಕರ ಆರ್ಥೋಡಾಕ್ಸ್​​ ಚರ್ಚ್​ ಡಯಾಸಿಸ್​ನ ಫಾದರ್​ ಜಾನ್ಸನ್​ ಪಪ್ಪಚನ್​​ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಸೂಸನ್​ ಮ್ಯಾಥ್ಯೂ ಮನೆಯ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದು, ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಈ ಗುಂಡು ಸುಸನ್​​ಗೆ ತಗುಲಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಫೈರಿಂಗ್​​ ಆದ ತಕ್ಷಣವೇ ಸುಸನ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಯುವತಿ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಲಾಗಿದೆ.

  2ನೇ ಗುಂಡಿನ ದಾಳಿ
  ಅಂದಹಾಗೆ ಕಳೆದ 7 ದಿನಗಳಲ್ಲಿ ಮಾಂಟ್ಗೊಮೆರಿಯಲ್ಲಿ ನಡೆದ 2ನೇ ಗುಂಡಿನ ದಾಳಿ ಇದಾಗಿದೆ. ಇದಕ್ಕೂ ಮೊದಲು ಗುರುವಾರ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಡಲ್ಲಾಸ್​ ಎಂಬಲ್ಲಿ ದರೋಡೆಕೋರರ ಗುಂಡಿನ ದಾಳಿಗೆ ಮತ್ತೊಬ್ಬ ಕೇರಳಿಗ ಬಲಿಯಾಗಿರುವುದು ವರದಿಯಾಗಿದೆ. ಡಲ್ಲಾಸ್​ನಲ್ಲಿ ಸೌಂದರ್ಯವರ್ಧಕಗಳ ಅಂಗಡಿ ಹೊಂದಿದ್ದ ಸಜನ್​ ಮ್ಯಾಥ್ಯೂಸ್​​ ಕೊಲೆಯಾದ ಕೇರಳಿಗ ವ್ಯಕ್ತಿ. ಇವರ ಅಂಗಡಿಗೆ ನುಗ್ಗಿದ ದರೋಡೆಕೋರ ಮ್ಯಾಥ್ಯೂಸ್​ ಮೇಲೆ ಗುಂಡು ಹಾರಿಸಿದ್ದಾರೆ. ಕಳೆದ 2 ತಿಂಗಳಲ್ಲಿ ಅಮೆರಿಕದಲ್ಲಿ ಮೂರನೇ ಭಾರತೀಯ ಸಾವನ್ನಪ್ಪಿರುವುದು ವಿಪರ್ಯಾಸ. ಯುವತಿ ಕೊಲೆಗೆ ಕಾರಣವೆನೆಂದು ತಿಳಿಯಲು ಪೋಲಿಸರು ತನಿಖೆ ಚುರುಕುಗೊಳಿಸಿದ್ದಾರೆ.

  ಗಾಬರಿ ಹುಟ್ಟಿಸುವ ವಿಚಾರ
  ಇನ್ನು ಅಮೆರಿಕದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರ ಆತಂಕ ದಿನೇದಿನೆ ಹೆಚ್ಚುತ್ತಲೇ ಇದೆ. ಜನಾಂಗೀಯ ದಾಳಿಗಳಿಂದ ಭದ್ರತೆಯ ಭೀತಿ ಹೆಚ್ಚಿದೆ. ಇದರಿಂದಾಗಿ ಇಲ್ಲಿನ ನಿವಾಸಿಗರಿಗೆ ಆತಂಕದ ಕಾಡತೊಡಗಿದೆ. ಆಧುನಿಕ ಜಗತ್ತು ಬೆಳೆದಂತೆ ದೇಶ ದೇಶಗಳ ನಡುವಿನ ಅಂತರ ದೂರವಾಗುತ್ತಿದೆ. ಯಾರು ಎಲ್ಲಿ ಬೇಕಾದರೂ ಹೋಗಿ ಬದುಕಬಹುದು, ನೆಲೆ ಕಂಡುಕೊಳ್ಳಬಹುದು. ಆದರೆ ಇಂತಹ ಮಾತುಗಳು ಅಕ್ಷರಶಃ ಸುಳ್ಳಾಗುತ್ತಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಂದರೆ ಅಮೆರಿಕ, ಕೆನಡಾ ಮತ್ತು ಯುರೋಪ್‌ನಲ್ಲಿ ಭಾರತವೂ ಸೇರಿ ಏಷ್ಯಾದಿಂದ ವಲಸೆ ಹೋದವರ ಮೇಲೆ ಜನಾಂಗೀಯ ದಾಳಿ ನಡೆಸುತ್ತಿರುವ ಕೇಸ್‌ಗಳು ಹೆಚ್ಚಾಗುತ್ತಿರುವುದು ಗಾಬರಿ ಹುಟ್ಟಿಸುವ ವಿಚಾರವೂ ಹೌದು.

  ಇದನ್ನು ಓದಿ:Crime News: ದೇವರ ಪ್ರಸಾದವೆಂದು ಗಂಡನಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ಸೇರಿ ಕೊಲೆಗೆ ಯತ್ನಿಸಿದ ಹೆಂಡತಿ ಅಂದರ್!

  ಜಗತ್ತಿನಲ್ಲಿ ಅತಿಹೆಚ್ಚು ಭಾರತೀಯರು ವಲಸೆ ಹೋಗಿರುವ ದೇಶಗಳಲ್ಲಿ ಕೆನಡಾ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಕೆನಡಾದಲ್ಲಿ ಭಾರತೀಯರ ಸಂಖ್ಯೆ ಬಹುದೊಡ್ಡದು. ಏಷ್ಯಾ ಮೂಲದವರ ಲೆಕ್ಕ ತೆಗೆದುಕೊಂಡರೆ, ಭಾಗಶಃ ಕೆನಡಾದಲ್ಲಿ ನಮ್ಮವರೇ ವಾಸ ಮಾಡುತ್ತಿದ್ದಾರೆ. ಕೆನಡಾ ಶಾಂತ ದೇಶ ಎಂಬ ಕಾರಣಕ್ಕಾಗೇ ಏಷ್ಯನ್ನರು ಅಲ್ಲಿಗೆ ಹೋಗಿ ನೆಲೆಸುತ್ತಾರೆ. ಅಲ್ಲದೇ ಅಮೆರಿಕದಲ್ಲಿ ಭಾರತದಿಂದ ವಿದ್ಯಾಭ್ಯಾಸ, ನೌಕರಿ, ವ್ಯಾಪಾರ, ವ್ಯವಹಾರ ಅಂತ ಸಾಕಷ್ಟು ಮಂದಿ ಗುಳೆ ಹೋಗುವುದು ಸಾಮಾನ್ಯ.
  Published by:vanithasanjevani vanithasanjevani
  First published: