18,000 ಕೋಟಿ ರೂ. ಹಿಂತಿರುಗಿಸಿದ Vijay Mallya: ಸುಪ್ರೀಂ ಮುಂದೆ ತಿಳಿಸಿದ ಸರ್ಕಾರ

ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಕೇಸ್ ನಲ್ಲಿ 18,000 ಕೋಟಿ ರೂ. ಹಣವನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ವಿಜಯ್ ಮಲ್ಯ, ಮೆಹುಲ್ ಚೋಕ್ಸಿ , ನೀರವ್ ಮೋದಿ

ವಿಜಯ್ ಮಲ್ಯ, ಮೆಹುಲ್ ಚೋಕ್ಸಿ , ನೀರವ್ ಮೋದಿ

  • Share this:
    ನವದೆಹಲಿ: ವಿಜಯ್ ಮಲ್ಯ (Vijay Mallya), ನೀರವ್ ಮೋದಿ (Nirav Modi) ಮತ್ತು ಮೆಹುಲ್ ಚೋಕ್ಸಿ (Mehul Choksi) ಪ್ರಕರಣದಲ್ಲಿ (Case) 18,000 ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳಿಗೆ (Banks) ಹಿಂತಿರುಗಿಸಲಾಗಿದೆ ಎಂದು ಕೇಂದ್ರ ಸರ್ಕಾರ (Central Government), ಸುಪ್ರೀಂ ಕೋರ್ಟ್‌ಗೆ (Supreme Court) ಇಂದು ತಿಳಿಸಿದೆ. ಸಾಲಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta), ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿ ವಾದ ಮಂಡನೆ ಮಾಡಿದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ನೇತೃತ್ವದ ಪೀಠದ ಮುಂದೆ ಸಾಲಿಟರ್ ಜನರಲ್ ತುಷಾರ್ ಮೆಹ್ತಾ, ವಿವರಗಳನ್ನು ಸಲ್ಲಿಸಿದರು. ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಕೇಸ್ನಲ್ಲಿ 18,000 ಕೋಟಿ ರೂ. ಹಣವನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ ಎಂದು ಸಾಲಿಸಿಟರ್​ ಜನರಲ್​ ತುಷಾರ್ ಮೆಹ್ತಾ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

    18 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದು ಬ್ಯಾಂಕ್ ಹಿಂತಿರುಗಿಸಲಾಗಿದೆ

    ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಪ್ರಕರಣಗಳಲ್ಲಿನ ಅಪರಾಧಗಳ ಒಟ್ಟು ಆದಾಯ 67,000 ಕೋಟಿ ರೂ. ಆಗಿದೆ. ಇಂದು ಸುಪ್ರೀಂಕೋರ್ಟ್​​ಗೆ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಫಿಡವಿಟ್​ ಸಲ್ಲಿಸಿದೆ. ನೀರವ್​​​​ ಮೋದಿ, ಮೆಹುಲ್​ ಚೋಕ್ಸಿ ಮತ್ತು ವಿಜಯ್​ ಮಲ್ಯರಿಂದ ಸುಮಾರು 18 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದು ಬ್ಯಾಂಕ್​ಗೆ ಒಪ್ಪಿಸಲಾಗಿದೆ ಎಂದು ತುಷಾರ್​ ಮೆಹ್ತಾ ಹೇಳಿದ್ದಾರೆ.

    4,700 ಪ್ರಕರಣಗಳ ಕುರಿತು ಜಾರಿ ನಿರ್ದೇಶನಾಲಯ ತನಿಖೆ

    ತುಷಾರ್ ಮೆಹ್ತಾ, ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್​​ ಅವರ ನೇತೃತ್ವದ ಪೀಠದ ಮುಂದೆ ವಿವರಣೆ ನೀಡಿದರು. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣಗಳಲ್ಲಿನ ಅಪರಾಧಗಳ ಒಟ್ಟಾರೆ ಮೌಲ್ಯ 67,000 ಕೋಟಿ ರೂ. ಆಗಿದೆ. ಜಾರಿ ನಿರ್ದೇಶನಾಲಯ ಸುಮಾರು 4,700 ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿದೆ.

    ಇದನ್ನೂ ಓದಿ: ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಕೊಳ್ಳೆ ಹೊಡೆದಿದ್ದ 18,170 ಕೋಟಿ ರೂ. ವಾಪಾಸ್!

    ಪಿಎಂಎಲ್‌ ಕಾಯ್ದೆಯ ಅಡಿಯಲ್ಲಿ ಅಪರಾಧದ ಹುಡುಕಾಟ, ವಶಪಡಿಸಿಕೊಳ್ಳುವಿಕೆ, ತನಿಖೆ ಮತ್ತು ಲಗತ್ತಿಸಲು ಜಾರಿ ನಿರ್ದೇಶನಾಲಯಕ್ಕೆ ಲಭ್ಯವಿರುವ ವ್ಯಾಪಕ ಅಧಿಕಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ.

    ಪ್ರತಿ ವರ್ಷ ಪ್ರಕರಣಗಳನ್ನು ತನಿಖೆ

    ಕಳೆದ 5 ವರ್ಷಗಳಲ್ಲಿ ಪ್ರತಿ ವರ್ಷ ಪ್ರಕರಣಗಳನ್ನು ತನಿಖೆ ನಡೆಸಲಾಗುತ್ತಿದೆ. ತನಿಖೆಗೆ ತೆಗೆದುಕೊಂಡ ಪ್ರಕರಣಗಳ ಸಂಖ್ಯೆಯು 2015-16ರಲ್ಲಿ 111 ಪ್ರಕರಣಗಳಿಂದ 2020-21ರಲ್ಲಿ 981ಕ್ಕೆ ಏರಿಕೆ ಕಂಡಿದೆ ಎಂದು ಅವರು ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ (2016-17 ರಿಂದ 2020-21), ಪೊಲೀಸರು ಮತ್ತು ಇತರ ಸಂಸ್ಥೆಗಳಿಂದ ಪೂರ್ವಭಾವಿ ಅಪರಾಧಗಳಿಗಾಗಿ ಅಂದಾಜು 33 ಲಕ್ಷ ಎಫ್‌ ಐಆರ್‌ ಗಳನ್ನು ದಾಖಲಿಸಲಾಗಿದೆ. ಕೇವಲ 2,086 ಪ್ರಕರಣಗಳನ್ನು ಪಿಎಂಎಲ್‌ಎ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ.

    ಪಿಎಂಎಲ್‌ಎ ನಿಬಂಧನೆಗಳ ದುರುಪಯೋಗದ ಸಾಧ್ಯತೆ

    ಕಳೆದ ಕೆಲವು ವಾರಗಳಲ್ಲಿ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹಟಗಿ, ಸಿದ್ಧಾರ್ಥ್ ಲೂಥ್ರಾ, ಅಮಿತ್ ದೇಸಾಯಿ ಮತ್ತು ಇತರರು ಸೇರಿದಂತೆ ಹಿರಿಯ ವಕೀಲರು, ಪಿಎಂಎಲ್‌ಎ ನಿಬಂಧನೆಗಳ ದುರುಪಯೋಗದ ಸಾಧ್ಯತೆಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಕೆ ಮಾಡಿದ್ದಾರೆ.

    ಇದನ್ನೂ ಓದಿ: ವಿಜಯ್ ಮಲ್ಯ, ನೀರವ್ ಮೋದಿ ಆಸ್ತಿ ಮಾರಾಟದಿಂದ 13,109 ಕೋಟಿ ರೂ. ವಸೂಲಿ ಆಗಿದೆ: ನಿರ್ಮಲಾ ಸೀತಾರಾಮನ್

    ಇನ್ನು 14 ವಿವಿಧ ಬ್ಯಾಂಕ್‌ಗಳಿಗೆ ವಿಜಯ್‌ ಮಲ್ಯ 9 ಸಾವಿರ ಕೋಟಿ ರೂ.ಗಳ ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದರು. 2020ರ ಮೇ 14ರಂದು ಲಂಡನ್‌ ಸುಪ್ರೀಂ ಕೋರ್ಟ್‌ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯವು ಬ್ಯಾಂಕುಗಳಿಗೆ ವಿಜಯ್ ಮಲ್ಯಗೆ ಸೇರಿದ ಕೆಲವು ರಿಯಲ್ ಎಸ್ಟೇಟ್ ಆಸ್ತಿಗಳು ಮತ್ತು ಸೆಕ್ಯೂರಿಟಿಗಳನ್ನು ಮಾರಾಟ ಮಾಡಲು ಜೂನ್​ 5 ರಂದು ಅವಕಾಶ ಮಾಡಿಕೊಟ್ಟಿತ್ತು.
    Published by:renukadariyannavar
    First published: