HOME » NEWS » National-international » 18 YEAR OLD WOMAN TRIED TO ENTER THE HOUSE THROUGH THE CHIMNEY AND GETS STUCK STG AE

ಚಿಮಣಿಯ ಮೂಲಕ ಮನೆ ಪ್ರವೇಶಿಸಲು ಹೋಗಿ ತಗ್ಲಾಕೊಂಡ ಯುವತಿ..!

ಮನೆಯ ಹೊರಗಡೆ ಲಾಕ್​ ಆದ ಯುವತಿ ಚಿಮಣಿ ಮೂಲಕ ಒಳಗೆ ಹೋಗುವ ಪ್ರಯತ್ನ ಮಾಡಿದ್ದಾರೆ. ನಂತರ ಒಳಗೂ ಹೋಗಲಾಗದೆ ಹೊರಗೂ ಬರಲಾರದೆ ತಗ್ಲಾಕೊಂಡು ಪರದಾಡಿದ್ದಾರೆ.

Anitha E | Trending Desk
Updated:June 18, 2021, 3:19 PM IST
ಚಿಮಣಿಯ ಮೂಲಕ ಮನೆ ಪ್ರವೇಶಿಸಲು ಹೋಗಿ ತಗ್ಲಾಕೊಂಡ ಯುವತಿ..!
ಸಾಂದರ್ಭಿಕ ಚಿತ್ರ (qualityfireplaceandchimney- instagram)
  • Share this:
ನಾವು ಒಮ್ಮೊಮ್ಮೆ ನಮ್ಮ ಮನೆ ಬೀಗ ಹಾಕಿ ಎಲ್ಲೋ ಹೊರಗೆ ಹೋಗಿರುತ್ತೀವಿ. ಅದರೆ, ವಾಪಸ್‌ ಮನೆ ಬಳಿ ಬಂದಾಗ ಮನೆಯಲ್ಲಿ ಯಾರೂ ಇರಲ್ಲ. ಮನೆ ಲಾಕ್‌ ಅಗಿರುತ್ತೆ. ಆ ವೇಳೆ ನೀವು ಮನೆಯ ಹೊರಗೇ ಇರಬೇಕಾಗುತ್ತೆ. ಇಂತಹ ಸಂಗತಿಯನ್ನು ಸಾಮಾನ್ಯವಾಗಿ ಎಲ್ಲರೂ ಅನುಭವಿಸಿರುತ್ತೀರಾ..! ಅಲ್ಲದೆ, ಆಟೋಮ್ಯಾಟಿಕ್‌ ಲಾಕ್‌ ಸಿಸ್ಟಮ್‌ ಇದ್ದರೆ, ಮನೆಯವರು ಮರೆತು ಬೀಗ ಬಿಟ್ಟು ಅಲ್ಲೇ ಹೊರಗೆ ಹೋಗಿ ಲಾಕ್‌ ಆಗಿರುವ ಘಟನೆಗಳೂ ಹಲವೆಡೆ ನಡೆದಿರುತ್ತೆ. ಆ ವೇಳೆ ಸ್ಪೇರ್‌ ಕೀಗಾಗಿ ಕೀ ಮೇಕರ್ ಅನ್ನು ಕರೆಸಬೇಕಾಗುತ್ತೆ. ಅಥವಾ ಕೀಯನ್ನು ಬೇರೆಯವರು ತೆಗೆದುಕೊಂಡು ಹೊರಗೆ ಹೋಗಿದ್ದರೆ ಅವರು ಬರುವವರೆಗೆ ಅಲ್ಲೇ ಕಾಯಬೇಕಾಗುತ್ತದೆ. ಇದೇ ರೀತಿ, ಅಮೆರಿಕದ ನೆವಾಡಾದಲ್ಲಿ ಯುವತಿಯೊಬ್ಬಳು ಲಾಕ್‌ ಆಗಿ ಮನೆ ಹೊರಗೆ ಸಿಕ್ಕಿಹಾಕಿಕೊಂಡಾಗ ಘಟನೆ ನಡೆದಿದೆ. ಆದರೆ, ಆ ಯುವತಿ  ಬೀಗ ಮಾಡುವವರನ್ನು ಕರೆಯದೆ ಚಿಮಣಿಯ ಮೂಲಕ ಮನೆಯೊಳಗೆ ಹೋಗುವ ಪ್ರಯತ್ನ ಮಾಡಿದ್ದಾರೆ.

ಈ ರೀತಿ ಮನೆಯೊಳಗೆ ಪ್ರವೇಶ ಮಾಡುವ ಐಡಿಯಾ ಯಾವುದೋ ಮಾಂತ್ರಿಕ ಸರಣಿ ಕಾರ್ಯಕ್ರಮದಿಂದ ಪ್ರೇರಿತರಾಗಿರಬಹುದು ಎಂದು ತೋರುತ್ತದೆ. ಆದರೆ, 18 ವರ್ಷದ ಯುವತಿಗೆ ಆ ಪ್ಲ್ಯಾನ್‌ ವರ್ಕೌಟ್‌ ಆಗಲಿಲ್ಲ. ಚಿಮಣಿಯ ಫ್ಲೂಗಿಂತ ಸ್ವಲ್ಪ ಮೇಲೆ ಆಕೆ ಸಿಲುಕಿಕೊಂಡರು. ಆಮೇಲೇನಾಯ್ತು ಅಂತೀರಾ..? ಆಕೆಯನ್ನು ಅಗ್ನಿಶಾಮಕ ದಳದವರೇ ರಕ್ಷಿಸಬೇಕಾಯಿತು.

ಈ ಘಟನೆಯ ಬಗ್ಗೆ ಹೆಂಡರ್ಸನ್ ಅಗ್ನಿಶಾಮಕ ಇಲಾಖೆ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಹಂಚಿಕೊಂಡಿದೆ. ಅಗ್ನಿಶಾಮಕ ದಳದವರು ಹೊರೈಜನ್‌ ಮತ್ತು ಕಾಲೇಜ್ ಡ್ರೈವ್‌ಗಳ ಬಳಿಯಿರುವ ಒಂದೇ ಅಂತಸ್ತಿನ ಮನೆಯ ಚಿಮಣಿಯಿಂದ 18 ವರ್ಷದ ಯುವತಿಯನ್ನು ರಕ್ಷಿಸಲು ರೋಪ್‌ ವ್ಯವಸ್ಥೆಯನ್ನು ಬಳಸಿದ್ದಾರೆ ಎಂದು ಅಗ್ನಿಶಾಮಕ ಇಲಾಖೆಯವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Tamannaah Bhatia: ಮುಖಕ್ಕೆ ಎಂಜಲು ಹಚ್ಚಿಕೊಳ್ತಾರಂತೆ ತಮನ್ನಾ ಭಾಟಿಯಾ: ತ್ವಚೆಯ ಸೀಕ್ರೆಟ್ ಬಿಚ್ಚಿಟ್ಟ ಮಿಲ್ಕಿ ಬ್ಯೂಟಿ..!

ಇನ್ನು, ಈ ಅಸಾಮಾನ್ಯ ಅಪಘಾತದಲ್ಲಿ ಯುವತಿಗೆ ಗಾಯವಾಗಲಿಲ್ಲ ಎಂದು ಹೇಳಲಾಗಿದೆ. ಹೆಂಡರ್ಸನ್ ಅಗ್ನಿಶಾಮಕ ದಳದವರಿಗೆ ಸೀಮಿತ ಬಾಹ್ಯಾಕಾಶ ಪಾರುಗಾಣಿಕಾ ತರಬೇತಿ ನೀಡಲಾಗುತ್ತದೆ ಮತ್ತು ಗಾಯಗೊಳ್ಳದ ಯುವತಿಯನ್ನು ಸುಮಾರು ಅರ್ಧ ಗಂಟೆಯೊಳಗೆ ರಕ್ಷಿಸಲಾಗಿದೆ ಎಂದು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ಇನ್ನು, ಯುವತಿ ಆ ವೇಳೆ ಅಪಾಯಕಾರಿ ಸ್ಥಿತಿಯಲ್ಲಿದ್ದರೂ, ಈ ಘಟನೆಯ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡ ಫೇಸ್‌ಬುಕ್ ಬಳಕೆದಾರರು ಮಾತ್ರ ಹಾಸ್ಯ ಮಿಶ್ರಿತ ಪ್ರತಿಕ್ರಿಯೆ ನೀಡಿದ್ದಾರೆ.

'ಆ ಪರಿಸ್ಥಿತಿಯ ಮುಜುಗರಕ್ಕಿಂತ ಮನೆಯ ಹೊರಗೆ ಲಾಕ್‌ಔಟ್‌ ಆಗಿದ್ದಕ್ಕಾಗಿ ನಾನು ಶಿಕ್ಷೆಯನ್ನು ಪಡೆಯುತ್ತೇನೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಹೇಳಿದ್ದಾರೆ.ಇದನ್ನೂ ಓದಿ: KGF -Pushpa: ತೆಲುಗು ಸಿನಿಮಾವನ್ನು ಹೊಗಳುವ ಭರದಲ್ಲಿ ಕೆಜಿಎಫ್​ ಚಿತ್ರದ ಬಗ್ಗೆ ಮಾತು ಜಾರಿದ ನಿರ್ದೇಶಕ..!

ಆ ಯುವತಿಯನ್ನು ರಕ್ಷಿಸಿದ ಅಗ್ನಿಶಾಮಕ ಇಲಾಖೆಯ ಕಾರ್ಯಕರ್ತರನ್ನು ಹೊಗಳಿದ ಒಬ್ಬ ಬಳಕೆದಾರರು, ನೀವು ಕೇಳುವ ವಿಷಯಗಳು ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ..?  ನಿಮಗೆ ತಿಳಿದಿರುವ ವಿಷಯಗಳು ನಿಮ್ಮನ್ನು ಶಾಂತಿಯುತವಾಗಿ ನಿದ್ರಿಸುವಂತೆ ಮಾಡುತ್ತದೆ, ಅದು ತಪ್ಪಾದಾಗ ಅದನ್ನು ಸರಿ ಮಾಡಲು ಹೆಂಡರ್ಸನ್ ಅಗ್ನಿಶಾಮಕ ಇಲಾಖೆ ಇದೆ. ಮತ್ತೊಂದು ದೊಡ್ಡ ಕೆಲಸ ಎಂದು ಬರೆದುಕೊಂಡಿದ್ದಾರೆ.

ಅಪಘಾತದಿಂದ ಯುವತಿ ಖಂಡಿತವಾಗಿಯೂ ಬುದ್ಧಿ ಕಲಿತಿರಬಹುದು ಎಂದು ಕೆಲವರು ಹೇಳಿದರೆ, ಅವಳು ಅದನ್ನು ಮತ್ತೆ ಮಾಡುವುದಿಲ್ಲ ಎಂದು ನಾನು ಬೆಟ್‌ ಕಟ್ಟುತ್ತೇನೆ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

ಹೆಚ್ಚಿನ ಜನರು ಕಿಟಕಿಯ ಮೂಲಕ ಏರುತ್ತಾರೆ ಎಂದು ಬಳಕೆದಾರರೊಬ್ಬರು ಕಮೆಂಟ್​ ಮಾಡಿದರೆ, ಇನ್ನೊಂದೆಡೆ ಆ ಯುವತಿ ಚಿಮಣಿಯ ಮಾರ್ಗವನ್ನು ಮೊದಲು ಏಕೆ ಪರಿಗಣಿಸಿದ್ದು ಎಂಬ ಬಗ್ಗೆ ಅನೇಕ ಬಳಕೆದಾರರು ಅನುಮಾನವನ್ನು ಹೊರಹಾಕಿದ್ದಾರೆ.

Published by: Anitha E
First published: June 18, 2021, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories