ಭೋಪಾಲ್: ಮಧ್ಯ ಪ್ರದೇಶದ (Madhya Pradesh) ಭಿಂಡ್ ಜಿಲ್ಲೆಯ ಅಮಯಾನ್ ಪಟ್ಟಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸಹೋದರನೊಂದಿಗೆ (Brother) ಜಗಳ (Quarrel) ಮಾಡಿಕೊಂಡ ಯುವತಿಯೊಬ್ಬಳು ಕೋಪಗೊಂಡು ಚೈನೀಸ್ ಮೊಬೈಲ್ (Chinese Mobile) ನುಂಗಿದ್ದಾಳೆ. ಈ ಘಟನೆಯಿಂದ ಮನೆಯವರು ಆಘಾತಕ್ಕೊಳಗಾಗಿದ್ದು, ತಕ್ಷಣವೇ ಯುವತಿಯನ್ನ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಆದರೆ ವಿಷಯದ ಗಂಭೀರತೆಯನ್ನು ಕಂಡು, ಯುವತಿಯನ್ನ ತಕ್ಷಣವೇ ಗ್ವಾಲಿಯರ್‌ನ (Gwalior) ಜಯಾರೋಗ್ಯ ಆಸ್ಪತ್ರೆಗೆ (Jayarogya Hospital) ಶಿಫಾರಸು ಮಾಡಲಾಗಿದೆ. ಅಲ್ಲಿ ಯುವತಿಗೆ ಶಸ್ತ್ರಚಿಕಿತ್ಸೆಯ (Surgery) ಮೂಲಕ ಆಕೆಯ ಹೊಟ್ಟೆಯಲ್ಲಿ ಸಿಲುಕಿದ್ದ ಮೊಬೈಲ್ ಅನ್ನು ಹೊರತೆಗೆದಿದ್ದಾರೆ. ಸಕಾಲದಲ್ಲಿ ಬಾಲಕಿಯ ಆಪರೇಷನ್ ಮಾಡದಿದ್ದರೆ ಆಕೆಯ ಜೀವಕ್ಕೆ ಅಪಾಯವಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.
ಅಣ್ಣನೊಂದಿಗೆ ಜಗಳದಿಂದ ಮೊಬೈಲ್ ನುಂಗಿದ ಯುವತಿ
ಭಿಂಡ್ ಜಿಲ್ಲೆಯ ಅಮಯಾನ್ ಪಟ್ಟಣದಲ್ಲಿ ವಾಸಿಸುತ್ತಿದ್ದ 18 ವರ್ಷದ ಯುವತಿಯೊಬ್ಬಳು ಅಣ್ಣನೊಂದಿಗೆ ಜಗಳ ಮಾಡಿಕೊಂಡು, ಕೋಪಗೊಂಡು ಕೀಪ್ಯಾಡ್ ಇರುವ ಚೈನೀಸ್ ಮೊಬೈಲ್ ಫೋನ್ ನುಂಗಿದ್ದಾಳೆ. ಸ್ವಲ್ಪ ಹೊತ್ತಿನಲ್ಲೇ ಯುವತಿಗೆ ಹೊಟ್ಟೆ ನೋವು, ವಾಂತಿ ಶುರುವಾಗಿದೆ. ಇದರಿಂದ ಆಕೆಯ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಹಾಗಾಗಿ ಸಮಯ ವ್ಯರ್ಥ ಮಾಡದೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಯುವತಿಯನ್ನು ಕೂಡಲೇ ಗ್ವಾಲಿಯರ್‌ಗೆ ಕರೆದೊಯ್ಯುವಂತೆ ಹೇಳಿದ್ದಾರೆ.
ಹೊಟ್ಟೆಗೆ ಸಿಲುಕಿದ್ದ ಮೊಬೈಲ್
ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ ವೈದ್ಯರ ತಂಡ ತಪಾಸಣೆ ನಡೆಸಿದಾಗ ಬಾಲಕಿಯ ಹೊಟ್ಟೆಯಲ್ಲಿ ಮೊಬೈಲ್ ಸಿಕ್ಕಿಹಾಕಿಕೊಂಡಿತ್ತು. ಮೊಬೈಲ್ ತೆಗೆಯಲು ಓಪನ್ ಸರ್ಜರಿ ಒಂದೇ ಮಾರ್ಗವಾಗಿತ್ತು. ಕೊನೆಗೆ ಓಪನ್ ಸರ್ಜರಿ ಮಾಡಿ ಮೊಬೈಲ್ ತೆಗೆಯಲು ವೈದ್ಯರು ನಿರ್ಧರಿಸಿದ್ದಾರೆ. ಸುಮಾರು ಅರ್ಧ ಡಜನ್ ವೈದ್ಯರ ತಂಡ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ, ಸುಮಾರು ಒಂದೂವರೆ ಗಂಟೆಗಳ ಕಾಲ ಆಪರೇಷನ್ ಮಾಡಿ ಯುವತಿಯ ಹೊಟ್ಟೆಯಲ್ಲಿದ್ದ ಮೊಬೈಲ್ ಹೊರತೆಗೆದಿದ್ದಾರೆ.
ಇದನ್ನೂ ಓದಿ: Crime News: ತಮ್ಮನ ಅಕ್ರಮ ಸಂಬಂಧಕ್ಕೆ ಅಣ್ಣನ ಬಲಿ, ಪಂಚಾಯಿತಿಗೆಂದು ಕರೆದು ಸಜೀವ ದಹನ ಮಾಡಿದ ದುಷ್ಟರು!
ಇದೇ ಮೊದಲ ಪ್ರಕರಣ
ಅಲ್ಲದೆ JAH ನಲ್ಲಿ ಇಂತಹ ಆಪರೇಷನ್ ನಡೆದಿರುವುದು ಇದೇ ಮೊದಲು. ಸಕಾಲದಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ಕರೆತರದಿದ್ದರೆ, ಆಕೆಯ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು ಎಂದು ಜಯಾರೋಗ್ಯ ಆಸ್ಪತ್ರೆಯ ಅಧೀಕ್ಷಕ ಡಾ.ಆರ್.ಕೆ.ಎಸ್.ಧಕಡ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ