Rat poison: ನಿದ್ದೆಗಣ್ಣಿನಲ್ಲಿ ಎದ್ದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು!

ಬೆಳಗ್ಗೆ ನಿದ್ದೆಗಣ್ಣಿನಲ್ಲಿ ಎದ್ದ ಅಫ್ಸಾನಾ ಖಾನ್​, ಹಲ್ಲುಜ್ಜಲು ತೆರಳಿದ್ದಾಳೆ. ಈ ವೇಳೆ ಕೈಗೆ ಸಿಕ್ಕ ಇಲಿ ಪಾಷಾಣವನ್ನು ಟೂತ್​ ಪೇಸ್ಟ್​​ ಎಂದು ಭಾವಿಸಿ ಟೂತ್​ ಬ್ರಶ್​ಗೆ ಹಾಕಿ ಅದರಲ್ಲಿ ಹಲ್ಲು ತೊಳೆದಿದ್ದಾಳೆ. ತಕ್ಷಣವೇ ಆಕೆಗೆ ಏನೋ ವ್ಯತ್ಯಾಸ ಅರಿತಂತಾಗಿದೆ. ನೋಡಿದಾಗ ಇಲಿ ಪಾಷಾಣವೆಂದು ಗೊತ್ತಾಗಿದೆ. ಕೂಡಲೆ ಉಗುಳಿ ಬಾಯಿ ತೊಳೆದಳು

ಪ್ರಾತಿನಿಧಿಕ ಚಿತ್ರ (ಫೊಟೋ: ಗೂಗಲ್​)

ಪ್ರಾತಿನಿಧಿಕ ಚಿತ್ರ (ಫೊಟೋ: ಗೂಗಲ್​)

  • Share this:
    ಟೂತ್​ ಪೇಸ್ಟ್​​ ಎಂದು ತಪ್ಪಾಗಿ ಭಾವಿಸಿ ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. 18  ವರ್ಷದ ಅಫ್ಸಾನಾ ಖಾನ್​ ಎಂಬ ಯುವತಿ ಮೃತ ದುರ್ದೈವಿ. ಮುಂಬೈನ ಧಾರವಿ ಪ್ರದೇಶದಲ್ಲಿ ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಈಕೆ ಬೆಳಗ್ಗೆ ಟೂತ್​ ಪೇಸಟ್​ ಎಂದು ಇಲಿ ಪಾಷಾಣವನ್ನು ಹಲ್ಲುಜ್ಜಲು ಬಳಸಿದ್ದಾಳೆ. ಪರಿಣಾಮ ಸಾವನ್ನಪ್ಪಿದ್ದಾಳೆ.

    ಬೆಳಗ್ಗೆ ನಿದ್ದೆಗಣ್ಣಿನಲ್ಲಿ ಎದ್ದ ಅಫ್ಸಾನಾ ಖಾನ್​, ಹಲ್ಲುಜ್ಜಲು ತೆರಳಿದ್ದಾಳೆ. ಈ ವೇಳೆ ಕೈಗೆ ಸಿಕ್ಕ ಇಲಿ ಪಾಷಾಣವನ್ನು ಟೂತ್​ ಪೇಸ್ಟ್​​ ಎಂದು ಭಾವಿಸಿ ಟೂತ್​ ಬ್ರಶ್​ಗೆ ಹಾಕಿ ಅದರಲ್ಲಿ ಹಲ್ಲು ತೊಳೆದಿದ್ದಾಳೆ. ತಕ್ಷಣವೇ ಆಕೆಗೆ ಏನೋ ವ್ಯತ್ಯಾಸ ಅರಿತಂತಾಗಿದೆ. ನೋಡಿದಾಗ ಇಲಿ ಪಾಷಾಣವೆಂದು ಗೊತ್ತಾಗಿದೆ. ಕೂಡಲೆ ಉಗುಳಿ ಬಾಯಿ ತೊಳೆದಳು. ಅಷ್ಟರಲ್ಲಾಗಲೇ ಆಕೆಗೆ ತಲೆ ಸುತ್ತು ಬಂದು ಕೆಳಕ್ಕೆ ಬಿದ್ದಿದ್ದಾಳೆ.

    ಕೆಳಕ್ಕೆ ಬಿದ್ದ ಅಫ್ಸಾನಾ ಖಾನ್​ ಕಂಡು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ತಡವಾಗಿದ್ದರಿಂದ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ವೈದ್ಯರು ಆಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದರಾದರು ಎರಡು ದಿನಗಳ ನಂತರ (ಭಾನುವಾರದಂದು) ಅಫ್ಸಾನಾ ಖಾನ್​ ನಿಧನರಾದರು.

    ಅಫ್ಸಾನಾ ಖಾನ್​ ಕಲಿಕೆಯಲ್ಲಿ ಮುಂದಿದ್ದಳು. ಆಕೆಯ ಮೇಲೆ ಮನೆಯವರಿಗೆ ಭರವಸೆಯಿತ್ತು. ಮುಂದೊಂದು ದಿನ ನಮ್ಮನ್ನು ಆಕೆ ಚೆನ್ನಾಗಿ ನೋಡಿಕೊಳ್ಳಲಿದ್ದಾಳೆ ಎಂಬುದು ಅವರಲ್ಲಿತ್ತು. ಆದರೆ ಸಣ್ಣ ಎಡವಟ್ಟಿನಿಂದಾಗಿ ಅಫ್ಸಾನಾ ಖಾನ್​ ಸಾವನ್ನಪ್ಪಿದ್ದಾಳೆ.

    Read Also: Marriage: ನವೆಂಬರ್ ತಿಂಗಳಲ್ಲಿ ಜನ ಯಾಕೆ ಮದ್ವೆ ಆಗಲ್ಲ? ಇದೇ ಕಾರಣ!

    ಅಫ್ಸಾನಾ ಖಾನ್​ ತಾಯಿ ಹಣ್ಣು ಮಾರಿ ಕುಟುಂಬದ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರು. ತಾಯಿಗೆ ಅಫ್ಸಾನಾ ಸಹಾಯ ಮಾಡುತ್ತಿದ್ದಳು ಇದರ ಜೊತೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆಗೆ ಉದ್ಯೋಗಕ್ಕೆ ಸೇರಿ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆಯಿತ್ತು. ಆದರೀಗ ಮಗಳ ಸಾವು ಕುಟುಂಬದವರಿಗೆ ಬರಿಸಲಾಗದ ನೋವುಂಟು ಮಾಡಿದೆ.

    ಇತ್ತೀಚೆನ ದಿನಗಳಲ್ಲಿ ಇಂತಹ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ. ಕಳೆದ 2 ವಾರಗಳ ಹಿಂದೆ ಕಾರ್ಕಳ, ಮೂಡಬಿದಿರೆಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿತ್ತು. ವೃದ್ಧೆಯೊಬ್ಬರು ಟೂತ್​ಪೇಸ್​ ಅನ್ನು ತಪ್ಪಾಗಿ ಭಾವಿಸಿ ಇಲಿ ಪಾಷಾಣದಲ್ಲಿ ಹಲ್ಲು ಉಜ್ಜಿದ್ದರು. ಕೊನೆಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
    Published by:Harshith AS
    First published: