ಆಂಧ್ರಪ್ರದೇಶ: ದೇಶದಲ್ಲಿ ನಾಯಿಗಳ ದಾಳಿ (Dog Attcak) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಮಕ್ಕಳ ಪಾಲಿಗೆ ಬೀದಿ ನಾಯಿಗಳು ಯಮಭಟ್ಟರಂತೆ ತಯಾರಾಗುತ್ತಿವೆ. ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಳಂ ಜಿಲ್ಲೆಯಲ್ಲಿ ಬೀದಿ ನಾಯಿಗಳ ದಾಳಿಯಿಂದ 18 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ. ಜಿ.ಸಿಗಡಂ ತಾಲೂಕಿನ ಮೆಟ್ಟವಲಸ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದ ಸಾತ್ವಿಕಾ (Sathwik) ಎಂಬ ಮಗು ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ರಾಜಮ್ ಸರ್ಕಾರಿ ಆಸ್ಪತ್ರೆಗೆ (Government Hospital) ರವಾನಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಕಾಕುಳಂ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ 18 ತಿಂಗಳ ಮಗು ಸಾವನ್ನಪ್ಪಿದೆ. ಕಣ್ಣೆದುರೇ ಬೀದಿ ನಾಯಿಗಳ ದಾಳಿಗೆ ತನ್ನ ಮುದ್ದಾದ ಮಗು ಸಾವನ್ನಪ್ಪಿದ್ದನ್ನ ನೋಡಿ ಕಣ್ಣೀರಿಡುತ್ತಿದ್ದಾರೆ.
ಕೆಲವು ದಿನಗಳಿಂದ ತೆಲುಗು ರಾಜ್ಯಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಳ್ಳಿ, ಪಟ್ಟಣ, ನಗರಗಳಲ್ಲಿ ರಸ್ತೆಯಲ್ಲಿ ನಾಯಿಗಳ ಹಿಂಡು ಹೆಚ್ಚಾಗುತ್ತಿದೆ. ಇದರಿಂದ ಹಸುಳೆಗಳು, ಮುದುಕರು, ಹೆಂಗಸರು ಮಾತ್ರವಲ್ಲ, ವಾಹನಗಳಲ್ಲಿ ಹೋಗುವವರನ್ನೂ ಬೀದಿ ನಾಯಿಗಳು ಬಿಟ್ಟಿಲ್ಲ. ಇದೀಗ ಮನೆ ಮುಂದೆ ಆಟವಾಡುತ್ತಿದ್ದ ಸಾತ್ವಿಕಾ ಎಂಬ 18 ತಿಂಗಳ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಬೀದಿ ನಾಯಿಗಳು ಮಗುವಿನ ತಲೆ, ಕುತ್ತಿಗೆ ಮತ್ತು ಮುಖಕ್ಕೆ ತೀವ್ರವಾಗಿ ಕಚ್ಚಿವೆ. ಮಗುವಿನ ಕಿರುಚಾಟ ಕೇಳಿ ಸ್ಥಳೀಯರು ಬಂದು ಅವುಗಳನ್ನು ಓಡಿಸಿದ್ದಾರೆ.
ಇದನ್ನೂ ಓದಿ: Dog Attack: 11 ವರ್ಷದ ಬಾಲಕನನ್ನು ಕಚ್ಚಿ ತಿಂದ ಬೀದಿ ನಾಯಿಗಳು! ತಲೆ-ಬಲಗೈ ಮಾತ್ರ ಪತ್ತೆ
ಗಾಯಗೊಂಡ 18 ತಿಂಗಳ ಸಾತ್ವಿಕಾಳನ್ನು ತಕ್ಷಣವೇ ರಾಜಮ್ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡಿ ಶ್ರೀಕಾಕುಳಂ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಶ್ರೀಕಾಕುಳಂ ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಗಂಭೀರ ಗಾಯವಾಗಿದ್ದರಿಂದ ಮಗು ಸಾತ್ವಿಕ ಸಾವನ್ನಪ್ಪಿದೆ. ಈ ಮಗುವಿನ ಸಾವಿನ ಬಗ್ಗೆ ನಿರ್ದೇಶಕ ರಾಮಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ. ಮಗುವಿನ ಸಾವಿನ ಸುದ್ದಿಯನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಗದ್ವಾಲ್ ಮೇಯರ್ ವಿಜಯಲಕ್ಷ್ಮಿ ಅವರಿಗೆ ಟ್ಯಾಗ್ ಮಾಡಿ, ಮೇಡಂ ಎಂದು ಕಮೆಂಟ್ ಮಾಡಿದ್ದಾರೆ. ಕುಟುಂಬಸ್ಥರು ಕೂಡ ನಾಯಿಗಳ ದಾಳಿಯನ್ನು ತಡೆಗಟ್ಟಿ ಎಂದು ನೋವು ತೋಡಿಕೊಂಡಿದ್ದಾರೆ.
ದಾಳಿಮಾಡಿ ತೋಟಕ್ಕೆ ಎಳೆದೊಯ್ದಿದ್ದವು
ಮೆಟ್ಟವಲಸ ಗ್ರಾಮದ ಪೈಲಾ ರಾಂಬಾಬು, ರಾಮಲಕ್ಷ್ಮಿ ಅವರ ಎರಡನೇ ಪುತ್ರಿ ಸಾತ್ವಿಕಾ ನಾಯಿ ಮನೆಯ ಮುಂದೆ ಆಟವಾಡುತ್ತಿದ್ದಾಗ ಸುಮಾರು 6 ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿ ಪಕ್ಕದ ತೋಟಕ್ಕೆ ಎಳೆದೊಯ್ದಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಮನೆ ಮುಂದೆ ಆಟವಾಡುತ್ತಿದ್ದ ಮಗು ಅರ್ಧ ಗಂಟೆಯಾದರೂ ಕಾಣದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಹುಡುಕಿದಾಗ ಮನೆ ಪಕ್ಕದ ತೋಟದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ತಲೆ, ಕುತ್ತಿಗೆ ಮತ್ತು ಮುಖದ ಮೇಲೆ ಈಗಾಗಲೇ ತೀವ್ರವಾಗಿ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Stray Dogs: ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ- ಇದು ಪಕ್ಕಾ ವರ್ಕ್ ಆಗುತ್ತೆ!
ಪನ್ಶಾವಲಿ ಪೇಟೆ ಸಮೀಪದ ಕೈಗಾರಿಕೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಇದೇ ತಿಂಗಳ 4ರಂದು ಕಾರ್ಖಾನೆಯ ಬಳಿ ಬೀದಿ ನಾಯಿಯೊಂದು ದಾಳಿ ನಡೆಸಿದ್ದು, ಕುಟುಂಬಸ್ಥರು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹಬ್ಬದ ದಿನವೇ ಸಾವನ್ನಪ್ಪಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ