Maharashtra Cabinet: ಶಿಂಧೆ ಸಂಪುಟ ಸೇರಿದ 18 ಶಾಸಕರು, 50:50 ಸೂತ್ರದಲ್ಲಿ ಕ್ಯಾಬಿನೆಟ್ ವಿಸ್ತರಣೆ

ನೂತನ ಸಚಿವರ ಜೊತೆ ಸಿಎಂ ಏಕನಾಥ್ ಶಿಂಧೆ

ನೂತನ ಸಚಿವರ ಜೊತೆ ಸಿಎಂ ಏಕನಾಥ್ ಶಿಂಧೆ

ಶಿವಸೇನೆ ಹಾಗೂ ಬಿಜೆಪಿ ಸರ್ಕಾರದಲ್ಲಿ 50:50ರಷ್ಟು ಸೂತ್ರದಂತೆ ಸಂಪುಟ ವಿಸ್ತರಣೆ ಮಾಡಲಾಗಿದ್ದು, 18 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಪೈಕಿ ಶಿವಸೇನೆಯ 9 ಹಾಗೂ ಬಿಜೆಪಿಯ 9 ಶಾಸಕರು ಸಂಪುಟ ಸೇರಿದರು. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Maharashtra
  • Share this:

ಮುಂಬೈ, ಮಹಾರಾಷ್ಟ್ರ: ಇತ್ತೀಗಷ್ಟೇ ಅಧಿಕಾರದ ಗದ್ದುಗೆ ಹಿಡಿದಿರುವ ಮಹಾರಾಷ್ಟ್ರದ (Maharashtra) ನೂತನ ಸರ್ಕಾರದ ಸಚಿವ ಸಂಪುಟ (Cabinet) ಇಂದು ವಿಸ್ತರಣೆಯಾಗಿದೆ (Expansion). ಶಿವಸೇನೆ ಬಂಡಾಯ ಶಾಸಕರು (Shiv Sena Rebel MLA’s) ಹಾಗೂ ಬಿಜೆಪಿ (BJP) ಸೇರಿ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚಿಸಿತ್ತು. ಜೂನ್ 30ರಂದು ಸಿಎಂ (CM) ಆಗಿ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ (Eknath Shinde) ಹಾಗೂ ಡಿಸಿಎಂ (DCM) ಆಗಿ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ (Devendra Fadnavis) ಪ್ರಮಾಣವಚನ ಸ್ವೀಕರಿಸಿದ್ದರು. ನೂತನ ಸರ್ಕಾರ ಅಸ್ಥಿತ್ವಕ್ಕೆ ಬಂದು ಸುಮಾರು ಒಂದೂವರೆ ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಶಿವಸೇನೆ ಹಾಗೂ ಬಿಜೆಪಿ ಸರ್ಕಾರದಲ್ಲಿ 50:50ರಷ್ಟು ಸೂತ್ರದಂತೆ ಸಂಪುಟ ವಿಸ್ತರಣೆ ಮಾಡಲಾಗಿದ್ದು, 18 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಪೈಕಿ ಶಿವಸೇನೆಯ 9 ಹಾಗೂ ಬಿಜೆಪಿಯ 9 ಶಾಸಕರು ಸಂಪುಟ ಸೇರಿದರು. ಮಹಾರಾಷ್ಟ್ರ ರಾಜ್ಯಪಾಲ (Governer) ಭಗತ್ ಸಿಂಗ್ ಕೋಶ್ಯಾರಿ (Bhagat Singh Koshyari) ನೂತನ ಸಚಿವರಿಗೆ ಪ್ರಮಾಣವಚನ (oath) ಬೋಧಿಸಿದರು.


50:50 ಸೂತ್ರದಂತೆ ಸಂಪುಟ ವಿಸ್ತರಣೆ


ಇಂದು ಬೆಳಗ್ಗೆ ಮುಂಬೈನಲ್ಲಿರುವ ಮಹಾರಾಷ್ಟ್ರ ರಾಜಭವನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಿತು. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಈ ಹಿಂದೆ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರದಲ್ಲಿ ಸಚಿವರಾಗಿದ್ದ ಶಿವಸೇನೆಯ ಶಾಸಕರಿಗೂ ಕೂಡ ಈ ಬಾರಿ ಸ್ಥಾನ ನೀಡಲಾಗಿದೆ.ಸಂಪುಟ ಸೇರಿದ ಶಾಸಕರು ಯಾರು?


ಬಿಜೆಪಿ ಶಾಸಕರಾದ ಚಂದ್ರಕಾಂತ್ ಪಾಟೀಲ್, ಸುಧೀರ್ ಮಂಗಟಿವಾರ್, ಗಿರೀಶ್ ಮಹಾಜನ್, ಸುರೇಶ್ ಖಾಂಡೆ, ರಾಧಾಕೃಷ್ಣ ಪಾಟೀಲ್, ರವೀಂದ್ರ ಚೌಹಾಣ್, ಮಂಗಲ್ ಪ್ರಭಾತ್ ಲೋಧಾ, ವಿಜಯಕುಮಾರ್ ಗವಿತ್ ಹಾಗೂ ಅತುಲ್ ಸಾವೆ ಸೇರಿದಂತೆ 9 ಮಂದಿ ಶಾಸಕರು ಸಂಪುಟ ಸೇರಿದ್ದಾರೆ.


ಇದನ್ನೂ ಓದಿ: Bihar Politics: ಎನ್​ಡಿಎ ಮೈತ್ರಿಕೂಟಕ್ಕೆ ಟಾಟಾ, ಆರ್​ಜೆಡಿ ಜೊತೆ ದೋಸ್ತಿ? ಬಿಹಾರ ಸಿಎಂ ನಿತೀಶ್ ಕುಮಾರ್ ನಡೆಯೇನು?


9 ಶಿವಸೇನೆ ಶಾಸಕರು ಸೇರ್ಪಡೆ


ಇನ್ನು ಶಿವಸೇನೆಯಿಂದ ಶಾಸಕರಾದ ದಾದಾ ಭೂಸೆ, ಶಂಭುರಾಜೇ ದೇಸಾಯಿ, ಸಂದೀಪನ್ ಭೂಮ್ರೇ, ಉದಯ್ ಸಮಂತ್, ತಾನಾಜೀ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸರ್‌ಕರ್, ಗುಲಾಬ್‌ರಾವ್ ಪಾಟೀಲ್ ಹಾಗೂ ಸಂಜಯ್ ರಾಥೋಡ್ ಸೇರಿ 9 ಮಂದಿ ಸಂಪುಟ ಸೇರ್ಪಡೆಯಾಗಿದ್ದಾರೆ.


ಎಲ್ಲಾ ವರ್ಗದ ನಾಯಕರಿಗೂ ಮಣೆ


ಇನ್ನು ಅಳೆದು ತೂಗಿ ಶಾಸಕರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಮರಾಠ, ಶಿಂಧೆ, ಚೌಹಾಣ್, ಪಾಟೀಲ್ ಸೇರಿದಂತೆ ಮಹಾರಾಷ್ಟ್ರದಲ್ಲಿ ಪ್ರಬಲವಾಗಿರುವ ಸಮುದಾಯದ ಶಾಸಕರಿಗೆ ಆದ್ಯತೆ ನೀಡಲಾಗಿದೆ. ಇನ್ನು ಮುಸ್ಲಿಂ  ಸಮುದಾಯದ ಓರ್ವ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.


ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಬೇಸರ


ಇನ್ನು ಉದ್ಧವ್ ಠಾಕ್ರೆ ಬಣದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಮಹಾ ಅಘಾಡಿ ಸರ್ಕಾರದಲ್ಲಿ ಸಚಿವರಾಗಿದ್ದ ಹಲವು ನಾಯಕರು ಈ ಬಾರಿ ಸಂಪುಟ ಸೇರುವ ಪ್ರಯತ್ನದಲ್ಲಿ ಇದ್ದರು. ಆದರೆ ಬಹುತೇಕರಿಗೆ ಈ ಬಾರಿ ಸಂಪುಟ ಸೇರಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರೆಲ್ಲರೂ ಅಸಮಾಧಾನಗೊಂಡಿದ್ದಾರೆ.


ಇದನ್ನೂ ಓದಿ: Explained: ಸ್ವಾತಂತ್ರ್ಯ ಸಂಗ್ರಾಮದ ನೆನಪು; ಭಾರತ ಬಿಟ್ಟು ತೊಲಗಿ ಕ್ರಾಂತಿ ಹೇಗಿತ್ತು?


ಅಸಮಾಧಾನಿತರ ಜೊತೆ ಏಕನಾಥ್ ಶಿಂಧೆ ಸಭೆ


ಇನ್ನು ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಸಿಎಂ ಏಕನಾಥ್ ಶಿಂಧೆ ಇಂದು ಅಸಮಾಧಾನಿತರನ್ನು ಸಮಾಧಾನಪಡಿಸುವ ಯತ್ನ ನಡೆಸಿದರು. ದಕ್ಷಿಣ ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಶಿವಸೇನೆ ಶಾಸಕರನ್ನು ಭೇಟಿ ಮಾಡಿದರು. ಎರಡು-ಮೂರು ವಾರಗಳಲ್ಲಿ ಎರಡನೇ ಸುತ್ತಿನ ವಿಸ್ತರಣೆ ನಡೆಯಲಿದೆ. ಆಗ ಮತ್ತಷ್ಟು ಶಾಸಕರಿಗೆ ಅವಕಾಶ ನೀಡುವ ಭರವಸೆ ನೀಡಿದ್ರು.

top videos
    First published: