HOME » NEWS » National-international » 18 KILLED AS POWERFUL EARTHQUAKE A DOZEN AFTERSHOCKS JOLT EASTERN TURKEY LG

ಟರ್ಕಿಯಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ; 18 ಮಂದಿ ಸಾವು, 500 ಜನರಿಗೆ ಗಾಯ

ಇಸ್ತಾಂಬುಲ್​ನ ಇಜ್ಮಿಟ್​​​ ನಗರದಲ್ಲಿ 1999ರ ಆಗಸ್ಟ್​​ನಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ ಸುಮಾರು 17 ಸಾವಿರ ಮಂದಿ ಸಾವನ್ನಪ್ಪಿದ್ದರು.  5 ಲಕ್ಷ ಮಂದಿ ನಿರಾಶ್ರಿತರಾಗಿದ್ದರು. 2011ರಲ್ಲಿ ವಾನ್​ ಮತ್ತು ಎರಿಕ್ಸ್​​ ನಗರಗಳಲ್ಲಿ ಭೂಕಂಪನವಾಗಿ ಸುಮಾರು 523 ಮಂದಿ ಸಾವಿಗೀಡಾಗಿದ್ದರು.

news18-kannada
Updated:January 25, 2020, 9:05 AM IST
ಟರ್ಕಿಯಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ; 18 ಮಂದಿ ಸಾವು, 500 ಜನರಿಗೆ ಗಾಯ
ಟರ್ಕಿಯಲ್ಲಿ ಪ್ರಬಲ ಭೂಕಂಪ
  • Share this:
ಪೂರ್ವ ಟರ್ಕಿಯಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ ಸುಮಾರು 18 ಮಂದಿ ಮೃತಪಟ್ಟಿದ್ದಾರೆ. ಕಟ್ಟಡಗಳು ಕುಸಿದಿದ್ದು, ಸುಮಾರು 500 ಜನರು ಗಾಯಗೊಂಡಿದ್ಧಾರೆ ಎಂದು ವರದಿಯಾಗಿದೆ.

ಟರ್ಕಿಯ ಎಲಾಜಿಗ್​ ಪ್ರಾಂತ್ಯದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಿಕ್ಟರ್​ ಮಾಪನದಲ್ಲಿ ಅಂದಾಜಿಸಲಾಗಿದೆ. ರಾಜಧಾನಿ ಅಂಕರಾದಲ್ಲಿ 550 ಕಿ.ಮೀವರೆಗೂ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ.

ಎಲಾಜಿಗ್​ನಲ್ಲಿ 13 ಮಂದಿ ಮೃತಪಟ್ಟರೆ, ಪಕ್ಕದ ಮಲಾತ್ಯದಲ್ಲಿ 5 ಜನ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವರು ತಿಳಿಸಿದ್ದಾರೆ. ಭೂಕಂಪ ಸಂಭವಿಸಿದ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗುತ್ತದೆ.

ಚೀನಾದಲ್ಲಿ ಭಯಾನಕ ಕೊರೊನಾ ವೈರಸ್​​: ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆ

ಕಟ್ಟಡಗಳ ಅವಶೇಷಗಳಡಿ ಸುಮಾರು 30 ಮಂದಿ ಸಿಲುಕಿದ್ದು, ರಕ್ಷಣಾ ಸಿಬ್ಬಂದಿ ಅವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು, 500 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.

ಎಲಾಜಿಗ್​ನಲ್ಲಿ ಭಾಗಶಃ ಕುಸಿದಿರುವ ಕಟ್ಟಡಗಳಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲಾಗುತ್ತಿದೆ. ಸ್ಥಳದಲ್ಲಿ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅವಶೇಷಗಳಿಂದ ಹೊರತೆಗೆದ ಗಾಯಾಳುಗಳನ್ನು ಕೂಡಲೇ ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ.

ಗಣರಾಜ್ಯೋತ್ಸವಕ್ಕೆ ಭರದ ಸಿದ್ಧತೆ; ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಭದ್ರತೆ, ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಟರ್ಕಿಯಲ್ಲಿ ಸಂಭವಿಸಿರುವ ಪ್ರಬಲ ಭೂಕಂಪ 3ನೇ ಹಂತದ್ದಾಗಿದೆ ಎಂದು ಹೇಳಲಾಗಿದೆ. ಟರ್ಕಿಯು ಪ್ರಬಲ ಭೂಕಂಪಗಳ ಇತಿಹಾಸವನ್ನೇ ಹೊಂದಿದೆ. ಇಸ್ತಾಂಬುಲ್​ನ ಇಜ್ಮಿಟ್​​​ ನಗರದಲ್ಲಿ 1999ರ ಆಗಸ್ಟ್​​ನಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ ಸುಮಾರು 17 ಸಾವಿರ ಮಂದಿ ಸಾವನ್ನಪ್ಪಿದ್ದರು.  5 ಲಕ್ಷ ಮಂದಿ ನಿರಾಶ್ರಿತರಾಗಿದ್ದರು. 2011ರಲ್ಲಿ ವಾನ್​ ಮತ್ತು ಎರಿಕ್ಸ್​​ ನಗರಗಳಲ್ಲಿ ಭೂಕಂಪನವಾಗಿ ಸುಮಾರು 523 ಮಂದಿ ಸಾವಿಗೀಡಾಗಿದ್ದರು.

 
First published: January 25, 2020, 8:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading