18 Foetuses Found: ತ್ಯಾಜ್ಯ ಎಸೆಯುವ ಮೈದಾನದಲ್ಲಿ 18 ಭ್ರೂಣ ಪತ್ತೆ!

ಕಠಿಣ ಕಾನೂನುಗಳ ಹೊರತಾಗಿಯೂ ಶಿಶು ಮರಣ ಪ್ರಮಾಣ, ಭ್ರೂಣ ಹತ್ಯೆಯಂತಹ ಘಟನೆಗಳು ಹೆಚ್ಚುತ್ತಿದೆ. ಇದೀಗ ಪಶ್ಚಿಮ ಬಂಗಾಳದ ತ್ಯಾಜ್ಯ ಎಸೆಯುವ ಮೈದಾನದಲ್ಲಿ 18 ಭ್ರೂಣ ಪತ್ತೆಯಾಗಿರುವುದು ನಿಜಕ್ಕೂ ಜನರಲ್ಲಿ ಆತಂಕ ಸೃಷ್ಟಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಲ್ಕತ್ತಾ(ಆ.17): ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಕೊಲ್ಕತ್ತಾದಿಂದ (Kolkatta) ಪಶ್ಚಿಮಕ್ಕೆ 40 ಕಿಮೀ ದೂರದಲ್ಲಿರುವ ಪುರಸಭೆಯ ತ್ಯಾಜ್ಯ ಎಸೆಯುವ ಮೈದಾನದಲ್ಲಿ ಕನಿಷ್ಠ 18 ಭ್ರೂಣಗಳು (Fetus) ಪತ್ತೆಯಾಗಿವೆ ಎಂದು ಪೊಲೀಸರು  (Police) ಮಂಗಳವಾರ ತಿಳಿಸಿದ್ದಾರೆ. ಉಲುಬೇರಿಯಾದ ಡಂಪಿಂಗ್ ಯಾರ್ಡ್‌ನಲ್ಲಿ ಪುರಸಭೆಯ ತ್ಯಾಜ್ಯದ ಮಧ್ಯೆ ಚಿಂದಿ ಆಯುವವರು ಭ್ರೂಣಗಳನ್ನು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಜಿಲ್ಲೆಯ ಪೌರಕಾರ್ಮಿಕರು ಹಾಗೂ ಆರೋಗ್ಯಾಧಿಕಾರಿಗಳೂ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ತ್ಯಾಜ್ಯ ಎಸೆಯುವ ಮೈದಾನ ವ್ಯಾಪ್ತಿಯಲ್ಲಿ 30 ಆಸ್ಪತ್ರೆ

ಭ್ರೂಣಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಂಪಿಂಗ್ ಗ್ರೌಂಡ್‌ನ 2 ಕಿಮೀ ವ್ಯಾಪ್ತಿಯಲ್ಲಿ ಕನಿಷ್ಠ 30 ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಿವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಶೀಘ್ರ ತನಿಖೆ

ಹೌರಾದ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ನಿತೈಚಂದ್ರ ಮೊಂಡೋಲ್ ಅವರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಇದು ಗಂಭೀರ ವಿಷಯವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವುದೇ ಆಸ್ಪತ್ರೆ ಅಥವಾ ನರ್ಸಿಂಗ್ ಹೋಮ್‌ನಲ್ಲಿ ದಂಧೆ ನಡೆಯುತ್ತಿದೆಯೇ ಎಂಬುದನ್ನು ಕಂಡುಹಿಡಿಯಬೇಕು ಎಂದಿದ್ದಾರೆ.

ಇದನ್ನೂ ಓದಿ: Kashmiri Pandit: ಕಾಶ್ಮೀರಿ ಪಂಡಿತ್ ಸಹೋದರರ ಮೇಲೆ ಭಯೋತ್ಪಾದಕರ ದಾಳಿ! ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಉಲುಬೇರಿಯಾ ಪುರಸಭೆ ಉಪಾಧ್ಯಕ್ಷ ಎನಮುರ್ ರೆಹಮಾನ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ಪರಿಶೀಲಿಸಲು ಸಮಿತಿಯನ್ನು ರಚಿಸಲಾಗುವುದು. ಮುಂದಿನ ವಾರ ಈ ವಿಷಯವನ್ನು ಚರ್ಚಿಸಲು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳೊಂದಿಗೆ ಸಭೆಯನ್ನು ಕರೆಯಲಾಗಿದೆ ಎಂದು ಅವರು ಹೇಳಿದರು.

ಜೂನ್‌ನಲ್ಲಿ ಇದೇ ರೀತಿಯ ಘಟನೆಯೊಂದರಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ನಡೆದಿತ್ತು. ಏಳು ಭ್ರೂಣಗಳನ್ನು ಪೆಟ್ಟಿಗೆಗಳಲ್ಲಿ ತುಂಬಿಸಲ್ಪಟ್ಟು ಗಟಾರದಲ್ಲಿ ತೇಲುತ್ತಿದ್ದವು.

ಇದನ್ನೂ ಓದಿ: Explainer: ಇಡೀ ಕುಟುಂಬದ ಹತ್ಯೆ ಬಳಿಕ ಗ್ಯಾಂಗ್​ರೇಪ್, ದೀರ್ಘಕಾಲದ ಹೋರಾಡಿದ್ರೂ ದೋಷಿಗಳ ಬಿಡುಗಡೆ: ಯಾರು ಈ ಬಿಲ್ಕಿಸ್​ ಬಾನೊ?

ಐದು ಬಾಕ್ಸ್‌ಗಳಲ್ಲಿ ಭ್ರೂಣಗಳನ್ನು ತುಂಬಿ ಹರಿಯುವ ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಘಟನೆಯನ್ನು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಮಹೇಶ್ ಕೋಣಿ ಖಚಿತಪಡಿಸಿದ್ದಾರೆ. ಪುರಾವೆಗಳ ಆಧಾರದ ಮೇಲೆ ಇದು ಲಿಂಗ ಪತ್ತೆ ಮತ್ತು ಹೆಣ್ಣು ಶಿಶುಹತ್ಯೆಯ ಪ್ರಕರಣವೆಂದು ತೋರುತ್ತದೆ. ಎಲ್ಲಾ ಭ್ರೂಣಗಳು ಐದು ತಿಂಗಳಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಮೂಲಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಕೋಣಿ ತಿಳಿಸಿದ್ದಾರೆ.

MTP ಕಾಯಿದೆಯು ಗರ್ಭಧಾರಣೆಯ 20 ವಾರಗಳವರೆಗೆ ಅಬಾರ್ಷನ್ ಮಾಡಲು  ಅನುಮತಿಸುತ್ತದೆ. ಮಹಿಳೆಯ ಜೀವವನ್ನು ಉಳಿಸಲು ಅಬಾರ್ಷನ್ ತಕ್ಷಣವೇ ಅಗತ್ಯವಿದ್ದರೆ, ಈ ಮಿತಿಯು ಅನ್ವಯಿಸುವುದಿಲ್ಲ. ಆದಾಗ್ಯೂ ರೋಗನಿರ್ಣಯದ ಭ್ರೂಣದ ಅಸಹಜತೆಗಳ ಪ್ರಕರಣಗಳು ಮತ್ತು ಲೈಂಗಿಕ ದೌರ್ಜನ್ಯಸಂತ್ರಸ್ತ ಮಹಿಳೆಯರ ಪ್ರಕರಣಗಳಲ್ಲಿ 20 ವಾರಗಳ ನಂತರ ಗರ್ಭಾವಸ್ಥೆ ಅಬಾರ್ಷನ್​ಗಾಗಿ ಕೋರ್ಟಿಗೆ ಮನವಿ ಸಲ್ಲಿಸಿವೆ. ಸಂತಾನೋತ್ಪತ್ತಿ ಹಕ್ಕುಗಳ ಕೇಂದ್ರದ ವರದಿಯು ಸಮಗ್ರ ವರದಿಯಲ್ಲಿ ನ್ಯಾಯಾಲಯಕ್ಕೆ ಬಂದಿರುವ ಈ ಕೆಲವು ಪ್ರಕರಣಗಳನ್ನು ವಿಶ್ಲೇಷಿಸಿದೆ.

ಭಾರತದಲ್ಲಿ ಗರ್ಭಪಾತವು 1971 ರಲ್ಲಿ MTP ಕಾಯಿದೆಯ ಪರಿಚಯದೊಂದಿಗೆ ಕಳೆದ 50 ವರ್ಷಗಳಿಂದ ವಿವಿಧ ಸಂದರ್ಭಗಳಲ್ಲಿ ಕಾನೂನುಬದ್ಧವಾಗಿದೆ. ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತ ಸೇವೆಗಳಿಗೆ ಮಹಿಳೆಯರ ಪ್ರವೇಶವನ್ನು ಸಕ್ರಿಯಗೊಳಿಸಲು ಕಾಯಿದೆಯನ್ನು 2003 ರಲ್ಲಿ ತಿದ್ದುಪಡಿ ಮಾಡಲಾಯಿತು. ಆದರೆ ಅಕ್ರಮವಾಗಿ ನಡೆಯುವ ಅಬಾರ್ಷನ್​ಗೆ ತಡೆ ನಿಜಕ್ಕೂ ಸವಾಲಾಗಿ ಪರಿಣಮಿಸುತ್ತಿದೆ.
Published by:Divya D
First published: