ಹೊಲದಲ್ಲಿದ್ದ ಬೆಳೆ ಕಾಪಾಡಲು 18 ಗೋವುಗಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ರು, ಉಸಿರುಗಟ್ಟಿ ಸತ್ತ ಹಸುಗಳು!


Updated:August 6, 2018, 3:46 PM IST
ಹೊಲದಲ್ಲಿದ್ದ ಬೆಳೆ ಕಾಪಾಡಲು 18 ಗೋವುಗಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ರು, ಉಸಿರುಗಟ್ಟಿ ಸತ್ತ ಹಸುಗಳು!

Updated: August 6, 2018, 3:46 PM IST
ನ್ಯೂಸ್​ 18 ಕನ್ನಡ

ಛತ್ತೀಸ್​ಗಡ್(ಆ.06): ಛತ್ತೀಸ್​ಗಡ್​ನ ಬಲೌದಾಬಾಜಾರ್​ ಜಿಲ್ಲೆಯಲ್ಲಿ ಗ್ರಾಮವೊಂದರ ಪಂಚಾಯತ್​ನ ಗೋಶಾಲೆಯಲ್ಲಿ ಕಳೆದ ಕೆಲ ದಿನಗಳಲ್ಲಿ ಕನಿಷ್ಟವೆಂದರೂ 18 ಗೋವುಗಳು ಉಸಿರುಗಟ್ಟಿ ಸಾವನ್ನಪ್ಪಿವೆ. ಇಲ್ಲಿನ ಜಿಲ್ಲಾಧಿಕಾರಿ ಜನಕ್​ ಪ್ರಸಾದ್​ ಪಾಠಕ್​ ಈ ಕುರಿತಅಗಿ ಮಾತನಾಡುತ್ತಾ ಆಗಸ್ಟ್​ 3 ರಂದು ರೋಹಾಸಿ ಹಳ್ಳಿಯಲ್ಲಿ 18 ಮೃತ ಗೋವುಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಇನ್ನು ಮೃತ ಗೋವುಗಳನ್ನು ಸಮಾಧಿ ಮಾಡಲು ಕೊಂಡೊಯ್ಯುತ್ತಿರುವ ಕುರಿತಾಗಿ ಸ್ಥಲೀಯ ಅಧಿಕಾರಿಗೆ ಸೂಚನೆ ಸಿಕ್ಕಾಗ ಈ ವಿಚಾರ ಬಯಲಾಗಿದೆ ಎಂದು ತಿಳಿದು ಬಂದಿದೆ.

ಡಿಎಂ ಅನುಸಾರ ಇಲ್ಲಿನ ಗ್ರಾಮಸ್ಥರು ತಾವು ಬೆಳೆದ ಫಸಲನ್ನು ಅಲೆಮಾರಿ ಜಾನುವಾರುಗಳು ನಾಶ ಮಾಡುತ್ತಿರುವುದರಿಂದ ಚಿಂತಿತರಾಗಿದ್ದರು. ಪರಸ್ಪರ ಚರ್ಚಿಸಿದ ಬಳಿಕ ಅವರು ಹಸು, ಎತ್ತುಗಳು ಸೇರಿದಂತೆ ಎಲ್ಲಾ ಅಲೆಮಾರಿ ಜಾನುವಾರುಗಳನ್ನು ಗ್ರಾಮದ ಗೋಶಾಲೆಯ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಈ ವೇಳೆ ಉಳಿದ ಕೆಲ ಜಾನುವಾರುಗಳನ್ನು ತೆರೆದ ಪ್ರದೇಶದಲ್ಲಿ ಗೂಟಗಳಿಗೆ ಕಟ್ಟಿ ಹಾಕಿದ್ದರು.
ಇಷ್ಟಾದರೂ ಯಾವೊಬ್ಬ ವ್ಯಕ್ತಿಯೂ ಈ ಅಲೆಮಾರಿ ಜಾನುವಾರುಗಳ ಕುರಿತು ವಿಚಾರಿಸಲು ಬರದೇ ಇದ್ದಾಗ, ಅವುಗಳಿಗೆ ಮೇವು ಹಾಗೂ ಕುಡಿಯಲು ನೀರು ನೀಡುವುದು ಗ್ರಾಮಸ್ಥರಿಗೆ ಕಷ್ಟಕರವಾಯಿತು. ಹೀಗಿರುವಾಗ ಅವರು ಹೊರಗೆ ಕಟ್ಟಿ ಹಾಕಿದ್ದ ಹಸುಗಳನ್ನು ಬಿಟ್ಟಡು ಆದರೆ ಕೋಣೆಯೊಳಗೆ ಕಟ್ಟಿ ಹಾಕಿದ್ದ ಜಾನುವಾರುಗಳ ಬಗ್ಗೆ ಯಾರೊಬ್ಬರಿಗೂ ಹೊಳೆಯಲಿಲ್ಲ. ಆದರೆ ಆಗಸ್ಟ್​ 3 ರಂದು ಕೆಟ್ಟ ವಾಸನೆ ಬರಲಅರಂಭಿಸಿದ್ದು, ಕೋಣೆ ತೆರೆದು ನೋಡಿದಾಗ ಹಸುಗಳು ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಇನ್ನು ಈ ಹಸುಗಳನ್ನು ಸಮಾಧಿ ಮಾಡಲು ಗ್ರಾಮಸ್ಥರು ಹೊರಟಾಗ ಈ ವಿಚಾರವನ್ನು ಅದ್ಯಾರೋ ಮೂರನೇ ವ್ಯಕ್ತಿ ಸ್ಥಳೀಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ. ಹೀಗಾಗಿ ಹಸುಗಳ ಮರಣೋತ್ತರ ಪರೀಕಗ್ಷೆ ಮಾಡಿದ ಬಳಿಕ ಅವುಗಳನ್ನು ಮಣ್ಣು ಮಾಡಲಾಗಿದೆ. ಇವುಗಳ ಸಾವಿನಿಂದಾಗಿ ಯಾವುದೇ ರೋಗ ಹರಡದಿರುವಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಡಿಎಂ ಪಾಠಕ್​ ಮಾತನಾಡುತ್ತಾ "ಅಲೆಮಾರಿ ಹಸುಗಳು ಬನಾಲ್ಕು ದಿನಗಳವರೆಗೆ ಕೋಣೆಯಲ್ಲಿದ್ದವು. ಇವುಗಳಲ್ಲಿ 18 ಹಸುಗಳನ್ನಿಡಲು ಪರ್ಯಾಯ ಸ್ಥಳವೂ ಇರಲಿಲ್ಲ. ಹೀಗಾಗಿ ಅವುಗಳು ಉಡಿರುಗಟ್ಟಿ ಸಾವನ್ನಪ್ಪಿವೆ. ಹೀಗಿದ್ದರೂ ಘಟನೆಯ ತನಿಖೆ ನಡೆಸಲು ಆದೇಶ ನೀಡಿದ್ದು, ತನಿಖಾ ವರದಿಯನ್ವಯ ಮುಂದಿನ ವಿಚಾರಣೆ ನಡೆಸಲಾಗುತ್ತದೆ" ಎಂದಿದ್ದಾರೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...