ಬ್ರಿಟನ್​ನ 19ನೇ ಶತಮಾನದ ಥಾಮಸ್ ಕುಕ್ ಸಂಸ್ಥೆ ದಿವಾಳಿ; 22 ಸಾವಿರ ಉದ್ಯೋಗನಷ್ಟ

ಥಾಮಸ್ ಕುಕ್ ಅವಸಾನದೊಂದಿಗೆ 16 ದೇಶಗಳಲ್ಲಿ 22 ಸಾವಿರಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಂಡಿದ್ದಾರೆ. ಬ್ರಿಟನ್ ದೇಶವೊಂದರಲ್ಲೇ 9 ಸಾವಿರ ಮಂದಿ ನಿರುದ್ಯೋಗಿಗಳಾಗಿದ್ದಾರೆ.

Vijayasarthy SN | news18
Updated:September 23, 2019, 12:55 PM IST
ಬ್ರಿಟನ್​ನ 19ನೇ ಶತಮಾನದ ಥಾಮಸ್ ಕುಕ್ ಸಂಸ್ಥೆ ದಿವಾಳಿ; 22 ಸಾವಿರ ಉದ್ಯೋಗನಷ್ಟ
ಥಾಮಸ್ ಕುಕ್
  • News18
  • Last Updated: September 23, 2019, 12:55 PM IST
  • Share this:
ಲಂಡನ್(ಸೆ. 23): ಆರ್ಥಿಕ ಹಿಂಜರಿತಕ್ಕೆ ಭಾರತದ ಅನೇಕ ಕಂಪನಿಗಳು ತೀವ್ರ ಹಿನ್ನಡೆ ಅನುಭವಿಸುತ್ತಿರುವ ಸುದ್ದಿ ದಿನನಿತ್ಯ ಕೇಳುತ್ತಿರುತ್ತೇವೆ. ಈಗ ಬ್ರಿಟನ್ ದೇಶದ ಥಾಮಸ್ ಕುಕ್ ಎಂಬ ಟ್ರಾವೆಲ್ ಏಜನ್ಸಿ ಸಂಸ್ಥೆಯು ದಿವಾಳಿ ಎದ್ದಿದೆ. ಹಲವು ದಿನಗಳಿಂದ ಸಂಸ್ಥೆಗೆ ಪುನಶ್ಚೇತನ ನೀಡುವ ಪ್ರಯತ್ನಗಳು ವಿಫಲಗೊಂಡಿವೆ. ಇಂದು ಸೋಮವಾರ ಥಾಮಸ್ ಕುಕ್ ಸಂಸ್ಥೆ ತನ್ನನ್ನು ದಿವಾಳಿ ಎಂದು ಘೋಷಿಸಿಕೊಂಡಿದೆ. ಇದರೊಂದಿಗೆ ವಿಶ್ವಾದ್ಯಂತ 16 ದೇಶಗಳ 22 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ಧಾರೆ. ಭಾರತದ ಮಟ್ಟಿಗೆ ಇದರ ಪರಿಣಾಮ ಬಿದ್ದಿಲ್ಲ.

ಈ ದಿವಾಳಿ ಬೆಳವಣಿಗೆಯ ಬೆನ್ನಲ್ಲೇ ಥಾಮಸ್ ಕುಕ್ ಮೂಲಕ ಪ್ರವಾಸ ಪ್ಯಾಕೇಜ್​ಗಳನ್ನು ಬುಕ್ ಮಾಡಿದ್ದ 6 ಲಕ್ಷ ಗ್ರಾಹಕರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಇವರ ಪೈಕಿ 1.5 ಲಕ್ಷ ಬ್ರಿಟನ್ ಗ್ರಾಹಕರಿದ್ದಾರೆ. ಬ್ರಿಟನ್ ವಿಭಾಗದ ಥಾಮಸ್ ಕುಕ್​ನ ಗ್ರಾಹಕರಿಗೆ ಸರಕಾರದ ವಿಮೆ ಯೋಜನೆ ಅನ್ವಯವಾಗುವ ಹಿನ್ನೆಲೆಯಲ್ಲಿ ಈ 1.5 ಲಕ್ಷ ಮಂದಿಯನ್ನು ಬ್ರಿಟನ್ ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ಇಲ್ಲಿನ ಸರ್ಕಾರ ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ: Howdy Modi: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನ ತೋರಿದ ಭಾರತ ಪ್ರಧಾನಿ

ಥಾಮಸ್ ಕುಕ್ ಎಂಬುವರು 1841ರಲ್ಲಿ ಸ್ಥಾಪನೆ ಮಾಡಿದ ಈ ಸಂಸ್ಥೆ ಅತ್ಯಂತ ಹಳೆಯ ಟ್ರಾವೆಲ್ ಏಜೆನ್ಸಿಗಳಲ್ಲೊಂದೆನಿಸಿದೆ. ಕೆಲವಾರು ವರ್ಷಗಳಿಂದ ಈ ಸಂಸ್ಥೆ ಆರ್ಥಿಕ ಹಿಂಜರಿತಕ್ಕೊಳಗಾಗಿತ್ತೆನ್ನಲಾಗಿದೆ. ಇದೇ ಮೇ ತಿಂಗಳಲ್ಲಿ 1.25 ಬಿಲಿಯನ್ ಪೌಂಡ್ (ಸುಮಾರು 11 ಸಾವಿರ ಕೋಟಿ ರೂಪಾಯಿ) ಸಾಲ ಇದೆ ಎಂದು ಕಂಪನಿ ಹೇಳಿಕೊಂಡಿತ್ತು. ಇತ್ತೀಚೆಗಷ್ಟೇ ಫೋಸನ್ ಎಂಬ ಚೀನಾ ಷೇರುದಾರರಿಂದ 900 ಮಿಲಿಯನ್ ಪೌಂಡ್ (ಸುಮಾರು 8 ಸಾವಿರ ಕೋಟಿ ರೂಪಾಯಿ) ಬಂಡವಾಳ ಹೂಡಿಕೆ ಪಡೆದುಕೊಂಡಿತ್ತು. ಇನ್ನೂ 200 ಮಿಲಿಯನ್ ಪೌಂಡ್ (ಸುಮಾರು 1,760 ಕೋಟಿ ರೂಪಾಯಿ) ಹೊಸ ಬಂಡವಾಳ ತರಲು ಯೋಜಿಸಿತ್ತು. ಅದಕ್ಕಾಗಿ ಷೇರುದಾರರೊಂದಿಗೆ ಮಾತುಕತೆ ಕೂಡ ನಡೆಸುತ್ತಿತ್ತು. ಇದು ಫಲಪ್ರದವಾಗದ ಹಿನ್ನೆಲೆಯಲ್ಲಿ ಇವತ್ತು ಅನಿವಾರ್ಯವಾಗಿ ದಿವಾಳಿತನ ಘೋಷಿಸಿಕೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ ಎಲ್ಲವೂ ಬದಲಾಗುತ್ತಿದೆ, ಬಲಿಷ್ಠವಾಗುತ್ತಿದೆ ಇಡೀ ದೇಶ ವಿಶ್ವನಾಯಕನಾಗುವತ್ತ ಹೆಜ್ಜೆ ಇಟ್ಟಿದೆ; ಪ್ರಧಾನಿ ನರೇಂದ್ರ ಮೋದಿ

ಥಾಮಸ್ ಕುಕ್​ನ ಈ ಬ್ಯಾಂಕ್ರಪ್ಟ್ಸಿ ಘೋಷಣೆಯಿಂದ 16 ದೇಶಗಳ ಗ್ರಾಹಕರಿಗೆ ಮತ್ತು ಉದ್ಯೋಗಿಗಳಿಗೆ ಪರಿಣಾಮ ಬೀರಿದೆ. 22 ಸಾವಿರಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಂಡಿದ್ದಾರೆ. ಆದರೆ, ಭಾರತದ ಮಟ್ಟಿಗೆ ಇದು ಪರಿಣಾಮ ಬಿದ್ದಿಲ್ಲ. 2012ರಲ್ಲಿ ಕೆನಡಾ ಮೂಲದ ಫೇರ್​ಫ್ಯಾಕ್ಸ್ ಎಂಬ ಸಂಸ್ಥೆಯು ಥಾಮಸ್ ಕುಕ್​ನ ಭಾರತದ ವಿಭಾಗವನ್ನು ಖರೀದಿ ಮಾಡಿತ್ತು. ಹೀಗಾಗಿ, ಭಾರತದಲ್ಲಿ ಯಾವುದೇ ಉದ್ಯೋಗ ನಷ್ಟವಾಗಿಲ್ಲ ಎಂದು ಥಾಮಸ್ ಕುಕ್ ಇಂಡಿಯಾ ಗ್ರೂಪ್ ಹೇಳಿಕೊಂಡಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading