ಕೋವಿಡ್​ ನಿಯಮ ಉಲ್ಲಂಘನೆ: ಪೊಲೀಸರ ಲಾಠಿ ಥಳಿತಕ್ಕೆ ಸಾವನ್ನಪ್ಪಿದ 17 ವರ್ಷದ ಬಾಲಕ

ಅನಾರೋಗ್ಯಗೊಂಡ ಆತನನ್ನು ತಕ್ಷಣಕ್ಕೆ ಅಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಬಳಿಕ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಲಕ್ನೋ (ಮೇ. 22): ಕೊರೋನಾ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯಗಳು ಕಟ್ಟುನಿಟ್ಟಿನ ಲಾಕ್​ಡೌನ್​ ಘೋಷಣೆ ಮಾಡಿವೆ. ಅನಗತ್ಯ ಸಂಚಾರಕ್ಕೆ ತಡೆ ನೀಡಿರುವ ಪೊಲೀಸ್​ ಇಲಾಖೆ, ಈಗಾಗಲೇ ಬಿಗಿ ನಿಯಂತ್ರಣ ನಡೆಸಿದೆ. ಈ ನಡುವೆ ಕೊರೋನಾ ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಪೊಲೀಸ್​ ಇಲಾಖೆ ಸಿಬ್ಬಂದಿ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ರಾಜ್ಯ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವರದಿಯಾಗಿದೆ. ಇದೇ ರೀತಿ ಲಾಕ್​ಡೌನ್​ ಉಲ್ಲಂಘಿಸಿದ 17 ವರ್ಷದ ಯುವಕನನ್ನು ಪೊಲೀಸರು ಲಾಠಿಯಿಂದ ಥಳಿಸಿದ ಹಿನ್ನಲೆ ಆತ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂದಿಸಿದಂತೆ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ ಮತ್ತು ಒಬ್ಬರು ಹೋಮ್​ಗಾರ್ಡ್​ ಅನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

  ಉತ್ತರ ಪ್ರದೇಶದ ಲಕ್ನೋದ ಬಟ್​ಪುರಿ ಪ್ರದೇಶದ ಬಂಗರ್ಮನ್​ ನಲ್ಲಿ ಈತ ಮನೆ ಮುಂದೆ ತರಕಾರಿ ಮಾರಾಟ ಮಾಡುತ್ತಿದ್ದ. ಈ ವೇಳೆ ಕೊರೋನಾ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿದ ಎಂದು ಆತನ ವಿರುದ್ಧ ಪೊಲೀಸರು ಹಲ್ಲೆ ನಡೆಸಿದ್ದರು. ಈ ವೇಳೆ ಲಾಠಿಯಿಂದ ಆತನ್ನು ತಳ್ಳಲಾಗಿದೆ. ಬಳಿಕ ಆತನನ್ನು ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲಿ ಮತ್ತೆ ಆತನ ಮೇಲೆ ಹಲ್ಲೆ ನಡೆಸಿ ತಳ್ಳಲಾಗಿದೆ. ಈ ವೇಳೆ ಆತನ ಆರೋಗ್ಯ ಗಂಭೀರಗೊಂಡಿದೆ.

  ಅನಾರೋಗ್ಯಗೊಂಡ ಆತನನ್ನು ತಕ್ಷಣಕ್ಕೆ ಅಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಬಳಿಕ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.

  ಇದನ್ನು ಓದಿ: ತಾರತಮ್ಯ ಮಾಡುವ ಕೇಂದ್ರದ ನಿರೀಕ್ಷೆ ಬಿಟ್ಟು, ಬ್ಲಾಕ್​ ಫಂಗಸ್​ ಔಷಧ ನೇರ ಖರೀದಿಗೆ ರಾಜ್ಯ ಸರ್ಕಾರ ಮುಂದಾಗಲಿ; ಎಚ್​ಡಿಕೆ

  ಪೊಲೀಸರ ಈ ದುರ್ವತನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಲಕ್ನೋದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಅಲ್ಲದೇ, ಸಂತ್ರಸ್ತನ ಕುಟುಂಬಕ್ಕೆ ಸರ್ಕಾರಿ ನೌಕರಿ ಮತ್ತು ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.
  ಘಟನೆ ಕುರಿತು ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಕಾನ್ಸಟೇಬಲ್​ ವಿಜಯ್​ ಚೌಧರಿಯನ್ನು ತಕ್ಷಣಕ್ಕೆ ಅಮಾನತು ಮಾಡಲಾಗಿದೆ, ಹೋಂ ಗಾರ್ಡ್​ ಸತ್ಯಪ್ರಕಾಶ್​ ವಿರುದ್ಧವೂ ಕ್ರಮಕ್ಕೆ ಮುಂದಾಗಲಾಗಿದೆ. ಪೊಲೀಸರ ವಿರುದ್ಧವೇ ಎಫ್​ಐಆರ್​ ದಾಖಲಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನು ಓದಿ: ಮಾಸ್ಕ್​ ಹಾಕಿಲ್ಲ ಎಂದು ನಡುರಸ್ತೆಯಲ್ಲಿ ಅಮಾನುಷವಾಗಿ ಮಹಿಳೆಯನ್ನು ಎಳೆದಾಡಿದ ಪೊಲೀಸರು

  ಕಳೆದೆರಡು ದಿನಗಳ ಹಿಂದೆ ಮಧ್ಯ ಪ್ರದೇಶದಲ್ಲಿ ಕೂಡ ಮಾಸ್ಕ್​ ಹಾಕಿಲ್ಲ ಎಂಬ ಒಂದೇ ಕಾರಣಕ್ಕೆ ಮಹಿಳೆಯ ಮೇಲೆ ಅಮಾನುಷವಾಗಿ ನಡುರಸ್ತೆಯಲ್ಲಿ ಪೊಲೀಸರು ಎಳೆದಾಡಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕೋವಿಡ್​ ನಿರ್ಬಂಧದ ನಡುವೆಯೇ ತಾಯಿ ಮತ್ತು ಮಗಳು ತರಕಾರಿ ತಲು ಹೋಗುತ್ತಿದ್ದರು. ಈ ವೇಳೆ ಮಾಸ್ಕ್​ ಧರಿಸಿಲ್ಲ ಎಂದು ಆಕೆಯನ್ನು ಪೊಲೀಸರು ನಡುರಸ್ತೆಯಲ್ಲಿ ಎಳೆದಾಡಿದ್ದರು.

  ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಿಗೆ ಅರಿವು ಮೂಡಿಸಬೇಕಾದ ಪೊಲೀಸರು ಈ ರೀತಿ ದುರ್ವತನೆ ತೋರುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಮಧ್ಯಪ್ರದೇಶದ ಇಂದೋರ್​ನಲ್ಲಿ ಏಪ್ರಿಲ್​ 6ರಂದು ಕೂಡ ವ್ಯಕ್ತಿಯೊಬ್ಬನನ್ನು ಪೊಲೀಸರು ಥಳಿಸಿದ್ದ ಘಟನೆ ನಡೆದಿತ್ತು. ಮಾಸ್ಕ್​ ಸರಿಯಾಗಿ ಧರಿಸಿಲ್ಲ ಎಂಬ ಒಂದೇ ಕಾರಣಕ್ಕೆ ಆತನ ಮೇಲೆ ಅಮಾನುಷ ವರ್ತನೆ ತೋರಿಸಲಾಗಿತ್ತು.
  Published by:Seema R
  First published: