• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Shocking News: ಸೋಲೊ ಟ್ರಿಪ್​ಗೆ ಹೊರಟ ಬಾಲಕಿ ಕಿಡ್ನಾಪ್​! 4 ತಿಂಗಳಲ್ಲಿ 2 ಬಾರಿ ಮಾರಾಟ, ತಪ್ಪಿಸಿಕೊಂಡು ಬಂದದ್ದೇ ರೋಚಕ

Shocking News: ಸೋಲೊ ಟ್ರಿಪ್​ಗೆ ಹೊರಟ ಬಾಲಕಿ ಕಿಡ್ನಾಪ್​! 4 ತಿಂಗಳಲ್ಲಿ 2 ಬಾರಿ ಮಾರಾಟ, ತಪ್ಪಿಸಿಕೊಂಡು ಬಂದದ್ದೇ ರೋಚಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ರಾಜಸ್ಥಾನ : ಈಗಿನ ಕಾಲದ ಮಕ್ಕಳಿಗೆ (Children) ಪರೀಕ್ಷೆ (Exam) ಎಂಬುದು ದೊಡ್ಡ ಯುದ್ದದಂತೆ (War) ಭಾವಿಸುತ್ತಾರೆ. ಪರೀಕ್ಷೆ ಮುಗಿಯುತ್ತಿದ್ದಂತೆ ಮನೆಯಿಂದ ಹೊರ ಹೋಗಿ ಎಂಜಾಯ್​ ಮಾಡಬೇಕೆಂದು ಕೊಳ್ಳುತ್ತಾರೆ. ಇದೇ ನಿರ್ಧಾರ ಇಲ್ಲೊಬ್ಬ ಬಾಲಕಿಯ ಜೀವನವನ್ನೇ ನಾಶ ಮಾಡಿದೆ. 10ನೇ ತರಗತಿ ಪರೀಕ್ಷೆ (10th Exam) ಮುಗಿದ ಕೂಡಲೇ ಮನೆಯವರಿಗೆ ಹೇಳದೆ ಒಂಟಿಯಾಗಿ ಪ್ರವಾಸ (Solo Trip) ಕೈಗೊಂಡಿದ್ದ ಬಾಲಕಿ ಅಪಹರಣಕ್ಕೆ (Kidnap) ಒಳಗಾಗಿ 4 ತಿಂಗಳಲ್ಲಿ 2 ಬಾರಿ ವಧುವಾಗಿ (Bride) ಮಾರಾಟ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ (Rajastan) ಬೆಳಕಿಗೆ ಬಂದಿದೆ.


ಮನೆ ಬಿಟ್ಟು ಬಂದಿದ್ದ 17 ವರ್ಷದ ಬಾಲಕಿ ಕಳೆದ 4 ತಿಂಗಳಲ್ಲಿ ಇಬ್ಬರಿಗೆ ವಧುವಾಗಿ ಮಾರಾಟ ಮಾಡಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಬಾಲಕಿಯನ್ನು ರೈಲ್ವೆ ಪೊಲೀಸರು ವಿಚಾರಿಸಿದ ನಂತರ ಈ ದಾರುಣ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ರಾಜಸ್ಥಾನದ ಕೋಟಾದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಕನೀಜ್​ ಫಾತಿಮಾ ತಿಳಿಸಿದ್ದಾರೆ.


ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ


ಕಿಡ್ನಾಪ್​ ಆದ ನಂತರ ಕೆಲವು ತಿಂಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಮನೆಯೊಂದರಲ್ಲಿ ಇದ್ದಿದ್ದರಿಂದ ಆ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಯತ್ನಿಸಿದ್ದಳು. ಆದರೆ 2ನೇ ಬಾರಿಗೆ ಮಾರಾಟವಾದಾಗ ಆ ಮನೆಯಿಂದ ಹೇಗೋ ತಪ್ಪಿಸಿಕೊಂಡು ರೈಲ್ವೆ ನಿಲ್ದಾಣ ತಲುಪಿದ್ದಳು. ಬಾಲಕಿ ಸ್ಥಿತಿ ಕಂಡು ರೈಲ್ವೆ ಪೊಲೀಸರು ವಿಚಾರಿಸಿದಾಗ ಈ ಅಪಹರಣ ಮತ್ತು ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಫಾತಿಮಾ ಹೇಳಿದ್ದಾರೆ.


ಇದನ್ನೂ ಓದಿ: Love Story: ಬ್ರಹ್ಮಚಾರಿಯೊಂದಿಗೆ 10 ಮಕ್ಕಳ ತಾಯಿ ಪರಾರಿ! ಮಕ್ಕಳ ಮೇಲಿನ ಪ್ರೀತಿಯಿಂದ ವಾಪಸ್ ಬಂದಾಗ ನಡೆದಿದ್ದೇನು?​


ರೈಲ್ವೆ ನಿಲ್ದಾಣದಿಂದ ಕಿಡ್ನಾಪ್​


ಮಧ್ಯಪ್ರದೇಶದ ಕಾಟ್ನಿ ನಿವಾಸಿಯಾಗಿರುವ ಬಾಲಕಿ ಐದು ತಿಂಗಳ ಹಿಂದೆ ತನ್ನ 10 ನೇ ತರಗತಿ ಪರೀಕ್ಷೆ ಬರೆದ ನಂತರ ಮನೆಬಿಟ್ಟು ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಆಕೆ ಕಾಟ್ನಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಕೆಲವು ಯುವಕರು ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾರೆ. ನಂತರ ಆಕೆಯನ್ನು ಹತ್ತಿರದ ಪಾರ್ಕ್​ಗೆ ಕರೆದುಕೊಂಡು ಹೋಗಿ ತಿನ್ನಲು ಆಹಾರ ಮತ್ತು ಪಾನೀಯಗಳನ್ನು ನೀಡಿದ್ದಾರೆ. ಅದನ್ನು ಸೇವಿಸಿದ ನಂತರ ಆಕೆ ಪ್ರಜ್ಞೆ ತಪ್ಪಿದ್ದಾಳೆ ಎಂದು ಫಾತಿಮಾ ಕಿಡ್ನಾಪ್​ ಆದ ಬಗ್ಗೆ ವಿವರ ನೀಡಿದ್ದಾರೆ.
2 ಲಕ್ಷಕ್ಕೆ ಮಾರಾಟ


ಕಾಟ್ನಿಯಲ್ಲಿ ಪ್ರಜ್ಞೆ ತಪ್ಪಿದ್ದ ಬಾಲಕಿಗೆ ಪ್ರಜ್ಞೆ ಬಂದಾಗ ಆಕೆ ಉಜ್ಜಯಿನಿಯ ಹೋಟೆಲ್ ಕೊಠಡಿಯಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯೊಂದಿಗೆ ಇದ್ದದ್ದು ಬೆಳೆಕಿಗೆ ಬಂದಿದೆ. ಅವರು ಆಕೆಗೆ ಬೆದರಿಕೆ ಹಾಕಿ 27 ವರ್ಷದ ಯುವಕನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಆದರೆ ಮದುವೆಯಾದ ನಂತರ ಆ ವ್ಯಕ್ತಿ ತಾನು 2 ಲಕ್ಷ ರೂಪಾಯಿಗಳಿಗೆ ಖರೀದಿಸಿರುವುದಾಗಿ ಸಂತ್ರಸ್ತೆಗೆ ತಿಳಿಸಿದ್ದಾನೆ.


ಇದನ್ನೂ ಓದಿ:  Brother-Sister: ಪ್ರೀತಿಸಿ ಮದುವೆಯಾದ ಅಣ್ಣ-ತಂಗಿ! 5 ವರ್ಷದ ಪ್ರೀತಿ ಬಳಿಕ ಹಸೆಮಣೆ ಏರಿದ ಜೋಡಿ


ಮತ್ತೊಮ್ಮೆ 3 ಲಕ್ಷಕ್ಕೆ ಮಾರಾಟ


ದುರಂತವೆಂದರೆ ಆಕೆಯನ್ನು ಮದುವೆಯಾಗಿದ್ದ ಯುವಕ ನಾಲ್ಕೇ ತಿಂಗಳಲ್ಲಿ ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾನೆ. ನಂತರ ಆತನ ಕುಟುಂಬಸ್ಥರು ಬಾಲಕಿಯನ್ನು ರಾಜಸ್ಥಾನದ ಕೋಟಾ ಜಿಲ್ಲೆಯ ಕನ್ವಾಸ್ ಪ್ರದೇಶದಲ್ಲಿ ಮದುವೆಯ ನೆಪದಲ್ಲಿ ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ.


ಆಕೆಯನ್ನು ಮದುವೆಯಾಗಿದ್ದ ಎರಡನೇ ಪತಿ ದೈಹಿಕ ಸುಖಕ್ಕಾಗಿ 3 ಲಕ್ಷ ರೂಪಾಯಿಗೆ ಖರೀದಿಸಿದ್ದಾನೆ ಎಂಬುದು ತಿಳಿದುಬಂದಿದೆ. ಇದೆಲ್ಲಾ ತಿಳಿದಾಗ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದಳಾದರರೂ ಆಕೆ ಅದು ಸಾಧ್ಯವಾಗಲಿಲ್ಲ. ಆದರೆ ಆ ಮನೆಯಿಂದ ತಪ್ಪಿಸಿಕೊಂಡು ಬರುವುದರಲ್ಲಿ ಆಕೆ ಯಶಸ್ವಿಯಾಗಿದ್ದಾಳೆ ಎಂದ ಫಾತಿಮಾ ತಿಳಿಸಿದ್ದಾರೆ.


ಸ್ಥಳೀಯ ರೈಲು ನಿಲ್ದಾಣವನ್ನು ತಲುಪಿದ ಬಾಲಕಿ ಕೋಟಾ ನಗರದ ರೈಲು ಹತ್ತಿದ್ದಾಳೆ. ಬಾಲಕಿ ಸ್ಥಿತಿಯನ್ನು ಗಮನಿಸಿದ ರೈಲ್ವೆ ಪೊಲೀಸ್ ಸಿಬ್ಬಂದಿ ಆಕೆಯ ಬಳಿ ಬಂದು ವಿಚಾರಿಸಿದ್ದಾರೆ. ನಂತರ ಬಾಲಕಿ ನಡೆದ ಎಲ್ಲಾ ಘಟನೆಯನ್ನು ಅವರಿಗೆ ವಿವರಿಸಿದ್ದಾಳೆ. ತಕ್ಷಣ ಅಧಿಕಾರಿಗಳು ಮಕ್ಕಳ ಸಹಾಯವಾಣಿ ಮತ್ತು ಸಿಡಬ್ಲ್ಯೂಸಿಗೆ ಮಾಹಿತಿ ನೀಡಿದರು ಎಂದು ಫಾತಿಮಾ ತಿಳಿಸಿದ್ದಾರೆ.


ಬಾಲಕಿಯ ಪೋಷಕರಿಂದ ನಾಪತ್ತೆ ದೂರು


ವಿಚಾರಣೆಯ ನಂತರ ಬಾಲಕಿಯ ಪೋಷಕರನ್ನು ಸಂಪರ್ಕಿಸಲಾಗಿದೆ. ಅತ್ತ ಬಾಲಕಿ ಪೋಷಕರು ಮಗಳು ಕಾಣದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಇದೀಗ ಬಾಲಕಿ ಸಿಕ್ಕಿರುವ ವಿಷಯ ಅವರ ಗಮನಕ್ಕೆ ಬಂದಿದ್ದು, ಆಕೆಯನ್ನು ಕರೆದುಕೊಂಡು ಹೋಗಲು ಕೋಟಾಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ನಿಜಕ್ಕೂ ಆಘಾತಕಾರಿಯಾಗಿದ್ದು, ಕೆಲವು ಯುವ ಪೀಳಿಗೆಯವರು ಮೋಜು ಮಾಡಲು ಹೋಗಿ ಎಂತಹ ಸಮಸ್ಯೆಗೆ ಸಿಲುಕುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

First published: