ರೈಲಿನಲ್ಲಿ ಪ್ರಯಾಣಿಸುವಾಗ ಹುಷಾರ್​..! ತಲೆ ಹೊರಗೆ ಹಾಕಿ ಸಾಹಸ ಮಾಡಲು ಹೋದವನು ಯಮಲೋಕ ಸೇರಿದ..!

ರೈಲು ಡಾಕಿಯಾರ್ಡ್​​ ರೋಡ್​​ ಸ್ಟೇಷನ್​​ ತಲುಪಿದಾಗ, ಶೈಕ್​ ತಲೆ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಆತ ರೈಲಿನಿಂದ ಕೆಳಗೆ ಬಿದ್ದು ಅಸುನೀಗಿದ್ದಾನೆ.

Latha CG | news18
Updated:March 23, 2019, 12:29 PM IST
ರೈಲಿನಲ್ಲಿ ಪ್ರಯಾಣಿಸುವಾಗ ಹುಷಾರ್​..! ತಲೆ ಹೊರಗೆ ಹಾಕಿ ಸಾಹಸ ಮಾಡಲು ಹೋದವನು ಯಮಲೋಕ ಸೇರಿದ..!
ಸಾಂದರ್ಭಿಕ ಚಿತ್ರ
Latha CG | news18
Updated: March 23, 2019, 12:29 PM IST
ಮುಂಬೈ,(ಮಾ.23): ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಹುಡುಗಾಟ ಆಡಲು ಹೋಗಿ ಅನಾಹುತ ಮಾಡಿಕೊಂಡಿದ್ದಾನೆ. ಚಲಿಸುತ್ತಿದ್ದ ರೈಲಿನಿಂದ ತಲೆಯನ್ನು ಹೊರಗೆ ಹಾಕಿ ಸಾಹಸ​ ಮಾಡುತ್ತಿದ್ದಾತ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಹೌದು, ಮುಂಬೈನ ರೈಲ್ವೆ ನಿಲ್ದಾಣವೊಂದರಲ್ಲಿ ಈ ಘಟನೆ ನಡೆದಿದೆ. ಜುಬರ್​​ ಸಿದ್ದಿಕಿ ಶೈಕ್(17) ಪರೀಕ್ಷೆ ಮುಗಿಸಿ ರೈಲಿನಲ್ಲಿ ಮನೆಗೆ ತೆರಳುವಾಗ ರೈಲಿನ ಬಾಗಿಲ ಬಳಿ ನಿಂತು ಹೊರಗೆ ತಲೆ ಹಾಕಿ ಸಾಹಸ ಮಾಡಲು ಹೋಗಿದ್ದಾನೆ. ಆಗ ಆತನ ತಲೆಯು ವಿದ್ಯುತ್​ ಕಂಬಕ್ಕೆ ಡಿಕ್ಕಿಹೊಡೆದು ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.

ಈತ ಶುಕ್ರವಾರ ಎಸ್​​ಎಸ್​​ಸಿ ಪರೀಕ್ಷೆ ಮುಗಿಸಿ 2.30 ಕ್ಕೆ ಹೊರಡುವ ಪಾನ್ವೆಲ್​​ ಬೌಂಡ್​ ರೈಲಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ. ಡಾಕಿಯಾರ್ಡ್​​ ರೋಡ್​ ಸ್ಟೇಷನ್​ ಬಳಿ ಶೈಕ್​ ಚಲಿಸುತ್ತಿದ್ದ ರೈಲಿನಿಂದ ತನ್ನ ತಲೆಯನ್ನು ಹೊರಹಾಕಿದ್ದಾನೆ. ಆಗ ಅಲ್ಲೇ ಇದ್ದ ವಿದ್ಯುತ್​ ಕಂಬಕ್ಕೆ ತಲೆ ಡಿಕ್ಕಿ ಹೊಡೆದಿದೆ. ತಕ್ಷಣ ಆತ ರೈಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

ಒತ್ತೆಯಾಳು ಅಪ್ರಾಪ್ತನ ಕತ್ತು ಸೀಳಿ ಕೊಂದ ಉಗ್ರರು; ಭದ್ರತಾ ಪಡೆಗಳ ದಾಳಿಯಲ್ಲಿ ಇಬ್ಬರು ಉಗ್ರರು ಹತ್ಯೆ

ರೈಲ್ವೆ ಪೊಲೀಸ್​ ಅಧಿಕಾರಿಗಳ ಪ್ರಕಾರ, ಶೈಕ್​ ಶುಕ್ರವಾರ ಭೂಗೋಳಶಾಸ್ತ್ರ ಪರೀಕ್ಷೆ ಮುಗಿಸಿ, 1 ಗಂಟೆಗೆ ಪರೀಕ್ಷಾ ಕೇಂದ್ರದಿಂದ ಹೊರಟಿದ್ದ. ಶುಕ್ರವಾರವಾದ್ದರಿಂದ ಮಸೀದಿಗೆ ತೆರಳಿ ನಮಾಜ್​ ಮುಗಿಸಿ ತನ್ನ ನಾಲ್ವರು ಗೆಳೆಯರೊಂದಿಗೆ ಮನೆಗೆ ವಾಪಸ್ಸಾಗುತ್ತಿದ್ದ. 2.30 ಕ್ಕೆ ಹೊರಡುವ ಪಾನ್ವೆಲ್​ ಬೌಂಡ್​​ ರೈಲಿನ ಜನರಲ್​ ಬೋಗಿಯಲ್ಲಿ ತನ್ನ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದ.

ಈ ವೇಳೆ ರೈಲಿನಲ್ಲಿ ಚಲಿಸುತ್ತಿದ್ದ 5 ಜನ ಹುಡುಗರು ತಲೆಯನ್ನು ಹೊರಗೆ ಹಾಕಿ ಎಂಜಾಯ್​ ಮಾಡುತ್ತಿದ್ದರು. ರೈಲು ಡಾಕಿಯಾರ್ಡ್​​ ರೋಡ್​​ ಸ್ಟೇಷನ್​​ ತಲುಪಿದಾಗ, ಶೈಕ್​ ತಲೆ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಆತ ರೈಲಿನಿಂದ ಕೆಳಗೆ ಬಿದ್ದು ಅಸುನೀಗಿದ್ದಾನೆ. ರೈಲಿನ ಕೆಳಗೆ ಕೆಳಗೆ ಬಿದ್ದಾಗ ಆತನ ಬಲಗೈ ಸಂಪೂರ್ಣ ಪುಡಿಪುಡಿಯಾಗಿತ್ತು.

ಶೈಕ್​ ಗೆಳೆಯರು ತಕ್ಷಣ ರೈಲಿನ ಚೈನ್​ ಎಳೆದು ರೈಲ್ವೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಶೈಕ್​ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆತನ ಬಲಗೈ ಸಂಪೂರ್ಣ ಕತ್ತರಿಸಿತ್ತು. ತೀವ್ರ ಗಾಯಗಳಿಂದ ತತ್ತರಿಸಿಹೋಗಿದ್ದ. ರೈಲಿಗೆ ಸಿಕ್ಕ ಆತನ ದೇಹ ಸಂಪೂರ್ಣ ನಜ್ಜುಗುಜ್ಜಾಗಿತ್ತು ಎಂದು ರೈಲ್ವೆ ಪೊಲೀಸ್​ ಅಧಿಕಾರಿ ರಾಜೇಂದ್ರ ಪಾಲ್​ ತಿಳಿಸಿದ್ದಾರೆ.
Loading...

First published:March 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...