Love Triangle: ತನ್ನ ಹುಡುಗಿಯನ್ನೇ ಪ್ರೀತಿಸಿದ್ದಕ್ಕೆ ಗೆಳೆಯನನ್ನು ಕೊಚ್ಚಿ ಕೊಂದ ಯುವಕ

ತಮಿಳುನಾಡಿನ ಟ್ಯುಟಿಕೋರಿನ್‌ನಲ್ಲಿ 17 ವರ್ಷದ ಹುಡುಗ ಹುಡುಗಿಗಾಗಿ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಜುಲೈ 29 ರಂದು ಆರೋಪಿ ತನ್ನ ಸ್ನೇಹಿತನ ತಲೆ ಕತ್ತರಿಸಿ ಆತನ ದೇಹ ಬಿಸಾಡಿದ್ದಾನೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಇತ್ತೀಚಿನ ಯುವಕರಲ್ಲಿ ಮೊಬೈಲ್‌ ಫೋನ್‌ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಹುಡುಗಿಯರನ್ನು ಲವ್‌ ಮಾಡಲು ತನಗೆ ಇಷ್ಟವಾಗುವ ಹುಡುಗಿಯರಿಗೆ ಮೆಸೇಜ್‌ ಮಾಡುವುದು ಹೆಚ್ಚು ಯುವಕರ ಆಕರ್ಷಣೆಯೂ ಆಗಿರುತ್ತದೆ. ಇನ್ನು, ಒಂದೇ ಹುಡುಗಿಯನ್ನು ಇಬ್ಬರು ಪ್ರೀತಿಸುತ್ತಿದ್ದರೆ ಏನಾಗುತ್ತದೆ.. ಅವರಿಬ್ಬರ ಮೇಲೂ ಸ್ವಲ್ಪವಾದರೂ ದ್ವೇಷ ಹುಟ್ಟಿಕೊಳ್ಳುತ್ತದೆ. ಇದೇ ರೀತಿ, ಇಬ್ಬರು ಗೆಳೆಯರು ಒಂದೇ ಹುಡುಗಿಯನ್ನು ಲವ್‌ ಮಾಡಿ ಒಬ್ಬ ಯುವಕನನ್ನು ಇನ್ನೊಬ್ಬ ಕೊಲೆ ಮಾಡಿರುವ ಆರೋಪ ತಮಿಳುನಾಡಿನಲ್ಲಿ ಕೇಳಿಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿರುವುದು 17 ವರ್ಷದ ಹುಡುಗ ಎನ್ನುವುದು ಅಚ್ಚರಿಯೇ ಸರಿ.


ತಮಿಳುನಾಡಿನ ಟ್ಯುಟಿಕೋರಿನ್‌ನಲ್ಲಿ 17 ವರ್ಷದ ಹುಡುಗ ಹುಡುಗಿಗಾಗಿ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಜುಲೈ 29 ರಂದು ಆರೋಪಿ ತನ್ನ ಸ್ನೇಹಿತನ ತಲೆ ಕತ್ತರಿಸಿ ಆತನ ದೇಹ ಬಿಸಾಡಿದ್ದಾನೆ ಎನ್ನಲಾಗಿದೆ. ಇಬ್ಬರು ಹುಡುಗರು ಒಟ್ಟಿಗೆ ಪೇಂಟರ್‌ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಸ್ನೇಹಿತರಾಗಿದ್ದರು ಎಂದು ವರದಿಗಳು ತಿಳಿಸಿವೆ. ಮೃತನನ್ನು ಪಿ ಮದನಕುಮಾರ ಎಂದು ಗುರುತಿಸಲಾಗಿದೆ. ಕೋವಿಲಪಟ್ಟಿಯ ಸ್ಟಾಲಿನ್ ಕಾಲೋನಿಯ ಪೇಂಟರ್, 22 ವರ್ಷದ ಯುವಕ ಜುಲೈ 29ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದನು. ಮರುದಿನ ಮಂಥಿತೂಪುದಲ್ಲಿ ಆತ ಕೊಲೆಯಾಗಿರುವುದು ಪತ್ತೆಯಾಗಿದೆ.


ಸ್ನೇಹಿತರಿಬ್ಬರಿಗೂ ಸಂದೇಶ ಕಳುಹಿಸುತ್ತಿದ್ದ ಹುಡುಗಿ
ಮದನಕುಮಾರ ಮತ್ತು ಆರೋಪಿ ಯುವಕ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಮತ್ತು ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದ್ದು, ಇವರಿಬ್ಬರೂ ಒಂದೇ ಹುಡುಗಿಯನ್ನು ಇಷ್ಟಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿ 8ನೇ ತರಗತಿಯ ನಂತರ ಶಾಲೆ ತೊರೆದಿದ್ದಳು. ಆದರೆ ಮದನಕುಮಾರನಿಗೆ ಹತ್ತಿರವಾಗಿದ್ದಳು ಎನ್ನಲಾಗಿದೆ.


ಇದನ್ನೂ ಓದಿ: Fridge Essentials: ನಿಮ್ಮ ಮನೆಯ ಫ್ರಿಡ್ಜ್​ನಲ್ಲಿ ಈ 10 ವಸ್ತುಗಳನ್ನ ಮಾತ್ರ ತಪ್ಪದೇ ಇಡಿ..!

ಈ ಹಿನ್ನೆಲೆ ತನ್ನ ಹುಡುಗಿಯೊಂದಿಗೆ ಮದನ ಕುಮಾರ್‌ ಹತ್ತಿರವಾಗುತ್ತಿರುವ ಹಿನ್ನೆಲೆ ತನ್ನಿಂದ ಹುಡುಗಿ ದೂರವಾಗಬಹುದೆಂಬ ಆತಂಕ ಆರೋಪಿ ಯುವಕನಿಗೆ ಇತ್ತು. ಇದರ ಪರಿಣಾಮವಾಗಿ ಆತನನ್ನು ಮುಗಿಸುವ ನಿರ್ಧಾರ ಮಾಡಿದ ಯುವಕ ಜುಲೈ 29ರಂದು ಹುಡುಗ 22 ವರ್ಷದ ಯುವಕನನ್ನು ಕುಡಿಯಲು ಆಹ್ವಾನಿಸಿದನು. ಮಂಥಿತೂಪುದಲ್ಲಿ ಅವರು ಕುಡಿಯುತ್ತಿದ್ದರು ಹಾಗೂ ಹತ್ತಿರದ ಪೊದೆಯ ಬಳಿ ಮಚ್ಚನ್ನು ಆರೋಪಿ ಬಚ್ಚಿಟ್ಟಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


ಘಟನೆ ನಡೆದ ದಿನ ಇಬ್ಬರು ಸ್ನೇಹಿತರು ಕುಡಿಯಲು ಆರಂಭಿಸಿದರು ಮತ್ತು ಮದನ ಕುಮಾರ್‌ ಕುಡಿದು ಟೈಟಾಗುವವರೆಗೆ ಆರೋಪಿ ಯುವಕ ಕಾಯುತ್ತಿದ್ದ. ಆತ ಟೈಟಾದ ಬಳಿಕ ಮದನಕುಮಾರನನ್ನು ಹಿಂದಿನಿಂದ ತಲೆ ಕಡಿದು ಮಚ್ಚನ್ನು ಕೆರೆಗೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.


ಈ ಮಧ್ಯೆ, ಪ್ರಕರಣದ ಬಗ್ಗೆ ಪೊಲೀಸರಿಗೆ ಅರಿವು ಬಂದಾಗ ಪೊಲೀಸರು ಮದನಕುಮಾರನನ್ನು ಹುಡುಕಲು ಆರಂಭಿಸಿದರು ಮತ್ತು ತನಿಖೆ ವೇಳೆ ಆರೋಪಿ ಯುವಕನ ಮೇಲೆ ಅನುಮಾನಗೊಂಡು ಆತನನ್ನು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಪೊಲೀಸರು ಸೋಮವಾರ, ಮಾರಕಾಸ್ತ್ರವನ್ನು ವಶಪಡಿಸಿಕೊಂಡರು ಮತ್ತು ಹದಿಹರೆಯದ ಯುವಕನನ್ನು ಬಾಲಾಪರಾಧಿ ತಿದ್ದುಪಡಿ ಕೇಂದ್ರಕ್ಕೆ ಕಳುಹಿಸಿದರು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: