Love Failure: ಪ್ರೀತಿ ನಿರಾಕರಣೆ ಕಾಲುವೆಗೆ ಹಾರಿದ ಅಪ್ರಾಪ್ತೆ; ಪ್ರಿಯಕರನ ಬಂಧನ

ಪ್ರೀತೇಶ್​ ಯುವತಿ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಅಲ್ಲದೇ, ಇಬ್ಬರು ಮದುವೆಯಾಗಲು ಬಯಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಡೋದರ (ಅ. 14): ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ ಪ್ರಿಯಕರ ಕಡೆ ಕ್ಷಣದಲ್ಲಿ ಕೈ ಬಿಟ್ಟ ಕಾರಣ ಮಾನಸಿಕವಾಗಿ ನೊಂದ ಅಪ್ತಾಪ್ತ ಬಾಲಕಿಯೊಬ್ಬಳು  ಕಾಲುವೆಗೆ ಹಾರಿ (Love Failure) ಪ್ರಾಣ ಕಳೆದುಕೊಂಡಿರುವ ಘಟನೆ ಗುಜರಾತ್​ನ ವಡೋದರದಲ್ಲಿ (Gujarat vadodara) ನಡೆದಿದೆ. 17 ವರ್ಷದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆ ಪ್ರೀತಿಸುತ್ತಿದ್ದ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಅಕ್ಟೋಬರ್​ 7ರಂದು ಯುವತಿ ಸಂಜೆ ಮನೆಯಿಂದ ನೀರು ತರುವುದಾಗಿ ಹೇಳಿ ಬಂದಿದ್ದಳು. ಆದರೆ, ತಡರಾತ್ರಿ ಕಳೆದರೂ ಆಕೆ ಮನೆಗೆ ಮರಳಲಿಲ್ಲ. ಬಳಿಕ ಮಾರನೇ ದಿನ ಆಕೆ ಶವವಾಗಿ ಪತ್ತೆಯಾಗಿದ್ದಳು. ಈ ಸಂಬಂಧ ಪೋಷಕರು ದೂರು ದಾಖಲಿಸಿದ್ದರು. ಈ ವೇಳೆ ಆಕೆಯ ಆತ್ಮಹತ್ಯೆ ನಿರ್ಧಾರದ ಹಿಂದೆ ಪ್ರೀತಿ ವಂಚನೆ ಇರುವುದು ಬೆಳಕಿಗೆ ಬಂದಿದೆ. 

  ಪ್ರಿಯಕರನೊಂದಿಗೆ ಮದುವೆಯಾಗಲು ಮುಂದಾಗಿದ್ದ ಯುವತಿ

  ಈ ಪ್ರಕರಣ ಕುರಿತು ತನಿಖೆ ನಡೆಸಿದಾಗ ಯುವತಿ 24 ವರ್ಷದ ಪ್ರೀತೇಶ್​ ಪರ್ಮಾರ್​ ಎಂಬಾಂತನನ್ನು ಪ್ರೀತಿಸುತ್ತಿದ್ದಳು ಎಂಬುದು ತಿಳಿದು ಬಂದಿದೆ. ಪ್ರೀತೇಶ್​ ಯುವತಿ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಅಲ್ಲದೇ, ಇಬ್ಬರು ಮದುವೆಯಾಗಲು ಬಯಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.

  ಕಡೆಕ್ಷಣದಲ್ಲಿ ಆಗಿದ್ದು ಬೇರೆ

  ಆದರೆ, ಇವರಿಬ್ಬರ ಸಂಬಂಧದಲ್ಲಿ ಅದೇನಾಯಿತೋ ತಿಳಿಯದು. ಇಬ್ಬರ ನಡುವೆ ಪ್ರೀತಿ ಕಮರಿದೆ. ಇದೇ ಕಾರಣಕ್ಕೆ ಪ್ರೀತೇಶ್​ ಆಕೆಯನ್ನು ತೊರೆಯಲು ಮುಂದಾಗಿದ್ದ. ಈ ಸಂಬಂಧ ಯುವತಿ ಆತನಿಗೆ ಪ್ರಶ್ನಿಸಿದ್ದಾಳೆ. ಅಲ್ಲದೇ ಜಗಳ ಕೂಡ ಆಡಿದ್ದು, ತನ್ನ ಕೈ ಬಿಡದಂತೆ ಮನವಿ ಮಾಡಿದ್ದಾಳೆ. ಆದರೆ  ಯುವಕ ಮಾತ್ರ ಇದ್ಯಾವುದಕ್ಕೂ ಜಗ್ಗಿಲ್ಲ. ಆತನ ಪ್ರೀತಿ ಕಳೆದುಕೊಂಡ ಯುವತಿ ಕಡೆಗೆ ದಿಕ್ಕು ಕಾಣದೇ ಮಾನಸಿಕವಾಗಿ ಬಳಲಿದ್ದಾಳೆ.  ಇದರಿಂದ ಖಿನ್ನತೆಗೆ ಜಾರಿ ಆತ್ಮಹತ್ಯೆ ನಿರ್ಧಾರಕ್ಕೆ ಮುಂದಾಗಿದ್ದಾಳೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

  ಇದನ್ನು ಓದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕ್ರಿಯಾಶೀಲರಾದ ಶ್ರದ್ಧಾ ಶೆಟ್ಟರ್​; ಹೆಬ್ಬಾಳ್ಕರ್​ ವಿರುದ್ಧ ಪೈಪೋಟಿಗೆ ಸಿದ್ದತೆ?

  ಪ್ರಕರಣ ದಾಖಲಿಸಿದ ತಂದೆ

  ಮಗಳ ಸಾವಿಗೆ ಪ್ರೀತೇಶ್​ ಕಾರಣ ಎಂದು ಅಪ್ರಾಪ್ತೆ ತಂದೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳನ್ನು ಅಪಹರಿಸಿ, ಮದುವೆಯಾಗುವುದಾಗಿ ನಂಬಿಸಿ, ಕಡೆಗೆ ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆತನ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದಾರೆ

  ಇದನ್ನು ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಾಸಕ ಹ್ಯಾರಿಸ್‌ ಸಂಬಂಧಿ ಬ್ಯಾಗ್‌ನಲ್ಲಿ 2 ಜೀವಂತ ಬುಲೆಟ್‌ ಪತ್ತೆ

  ಗನ್​ ಪಾಯಿಂಟ್​ನಲ್ಲಿ ಅತ್ಯಾಚಾರ
  ಮತ್ತೊಂದು ಘಟನೆಯಲ್ಲಿ ಉತ್ತರ ಪ್ರದೇಶದ ಮುಜಫರ್​ ನಗರದಲ್ಲಿ ಹಳ್ಳಿಯಲ್ಲಿ17 ವರ್ಷದ ಯುವತಿಯನ್ನು ಗನ್​ ಪಾಯಿಂಟ್​ನಲ್ಲಿಟ್ಟು ಮೂವರು ಅತ್ಯಾಚಾರ ನಡೆಸಿರುವ ಪ್ರಕರಣ ನಡೆದಿದೆ, ಯುವತಿಯ ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

  ಅಪ್ರಾಪ್ತ ವಯಸ್ಸಿನ 17 ಮತ್ತು 16 ವರ್ಷ ವಯಸ್ಸಿನ ಇಬ್ಬರು ಸಹೋದರರು ಸೇರಿದಂತೆ ಮೂವರು ಯುವಕರು ಈ ಕೃತ್ಯ ಎಸಗಿದ್ದಾರೆ. ಮಗಳು ಕಸ ಎಸೆಯಲು ಹೋದಾಗ ಆಕೆಗೆ ಗನ್​ ತೋರಿಸಿ ಅಪಹರಿಸಿದ್ದಾರೆ. ಬಳಿಕ ಆಕೆಯನನು ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ
  Published by:Seema R
  First published: