• Home
  • »
  • News
  • »
  • national-international
  • »
  • ಆಂಧ್ರ ವಿಧಾನಸಭೆಯಲ್ಲಿ ಸಿಎಂ ಜಗನ್ ಮೂರು ರಾಜಧಾನಿ ಪ್ರಸ್ತಾವ ಮಂಡನೆ ವೇಳೆ ಅಡಚಣೆ; ಟಿಡಿಪಿಯ 17 ಶಾಸಕರು ಅಮಾನತು

ಆಂಧ್ರ ವಿಧಾನಸಭೆಯಲ್ಲಿ ಸಿಎಂ ಜಗನ್ ಮೂರು ರಾಜಧಾನಿ ಪ್ರಸ್ತಾವ ಮಂಡನೆ ವೇಳೆ ಅಡಚಣೆ; ಟಿಡಿಪಿಯ 17 ಶಾಸಕರು ಅಮಾನತು

ಸಿಎಂ ಜಗನ್​​ ಮೋಹನ್​​ ರೆಡ್ಡಿ

ಸಿಎಂ ಜಗನ್​​ ಮೋಹನ್​​ ರೆಡ್ಡಿ

ಅಧಿಕಾರ ವೀಕೇಂದ್ರಿಕರಣ ದೃಷ್ಟಿಯಿಂದ ಆಂಧ್ರಕ್ಕೆ ಮೂರು ರಾಜಧಾನಿಗಳನ್ನು ಮಾಡುವ ಪ್ರಸ್ತಾವವನ್ನು ಈ ಮಸೂದೆ ಒಳಗೊಂಡಿದೆ. ಮಸೂದೆ ಪ್ರಕಾರ, ಅಮರಾವತಿ, ವಿಶಾಖಪಟ್ಟಣಂ ಮತ್ತು ಕರ್ನೂಲ್ ಮೂರು ರಾಜಧಾನಿಗಳನ್ನು ಮಾಡಲು ಚಿಂತನೆ ಇದೆ.

  • Share this:

ಹೈದರಾಬಾದ್​: ವಿರೋಧ ಪಕ್ಷ ಟಿಡಿಪಿಯ 17 ಶಾಸಕರನ್ನು ಸೋಮವಾರ ಆಂಧ್ರಪ್ರದೇಶ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ಅವರು ಆಂಧ್ರಪ್ರದೇಶ ವೀಕೇಂದ್ರಿಕರಣ ಮತ್ತು ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆ ಮಂಡನೆ ವೇಳೆ ಅಡ್ಡಿಪಡಿಸಿದ ಕಾರಣದ ಮೇಲೆ ಶಾಸಕರನ್ನು ಅಮಾನತುಗೊಳಿಸಲಾಗಿದೆ.


ಘಟನೆಗೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಪಕ್ಷದ ಇತರೆ ನಾಯಕರು, ವಿಧಾನಸಭೆ ಮುಂಭಾಗ ಕುಳಿತು ಮೌನ ಪ್ರತಿಭಟನೆ ನಡೆಸಿದರು. ಜಗನ್ ಸರ್ಕಾರ ಮಸೂದೆಯನ್ನು ಹಿಂಪಡೆಯುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.


ಅಧಿಕಾರ ವೀಕೇಂದ್ರಿಕರಣ ದೃಷ್ಟಿಯಿಂದ ಆಂಧ್ರಕ್ಕೆ ಮೂರು ರಾಜಧಾನಿಗಳನ್ನು ಮಾಡುವ ಪ್ರಸ್ತಾವವನ್ನು ಈ ಮಸೂದೆ ಒಳಗೊಂಡಿದೆ. ಮಸೂದೆ ಪ್ರಕಾರ, ಅಮರಾವತಿ, ವಿಶಾಖಪಟ್ಟಣಂ ಮತ್ತು ಕರ್ನೂಲ್ ಮೂರು ರಾಜಧಾನಿಗಳನ್ನು ಮಾಡಲು ಚಿಂತನೆ ಇದೆ.


ಇದನ್ನು ಓದಿ: ‘ಚುನಾವಣೆಯಲ್ಲಿ ಸೋತವರು ಈಗ ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ‘: ಪ್ರಧಾನಿ ನರೇಂದ್ರ ಮೋದಿ


ಅಮರಾವತಿ ಶಾಸಕಾಂಗ ರಾಜಧಾನಿಯಾಗಲಿದೆ ಮತ್ತು ಇಲ್ಲಿನ ರಾಜಭವನದಲ್ಲಿ ಶಾಸಕರು ಇರಲಿದ್ದಾರೆ. ಸಚಿವಾಲಯ, ಕಾರ್ಯದರ್ಶಿಗಳು ಮತ್ತು ಸರ್ಕಾರದ ಎಲ್ಲ ಇಲಾಖೆಗಳು ವಿಶಾಖಪಟ್ಟಣಂನಲ್ಲಿ ಕಾರ್ಯನಿರ್ವಹಿಸಲಿವೆ. ಇದು ಕಾರ್ಯಾಂಗ ರಾಜಧಾನಿಯಾಗಲಿದೆ. ಮೂರನೆಯದು ಕರ್ನೂಲ್ ನ್ಯಾಯಾಂಗ ರಾಜಧಾನಿಯಾಗಲಿದ್ದು, ಹೈಕೋರ್ಟ್​ ಇಲ್ಲಿ ಕಾರ್ಯನಿರ್ವಹಿಸಲಿದೆ.

Published by:HR Ramesh
First published: