ಹಾಡಹಗಲೇ ಮಾಲ್​ ಒಂದರಲ್ಲಿ 17 ಜನರನ್ನು ಗುಂಡು ಹಾರಿಸಿ ಕೊಂದ ಥಾಯ್ಲೆಂಡ್ ಸೈನಿಕ

ಗುಂಡಿನ ದಾಳಿ ನಡೆಯುತ್ತಿದ್ದಂತೆ ಮಾಲ್ ಅನ್ನು ಮುಚ್ಚಲಾಗಿದೆ. ಮಾಲ್ ಹೊರಗೆ ಈತ ನಡೆಸಿರುವ ಗುಂಡಿನ ದಾಳಿ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬ್ಯಾಂಕಾಕ್ (ಫೆಬ್ರವರಿ 08); ಇಲ್ಲಿನ ಈಶಾನ್ಯ ನಗರ ಕೋರತ್ ಎಂಬಲ್ಲಿ ಥಾಯ್ಲೆಂಡ್ ದೇಶದ ಸೈನಿಕ ನಡೆಸಿರುವ ನೇರ ಪ್ರಸಾರದ ಗುಂಡಿನ ದಾಳಿಯಲ್ಲಿ ಕನಿಷ್ಟ 17 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಗುಂಡು ಹಾರಿಸಿರುವ ವ್ಯಕ್ತಿಯನ್ನು ಜಕ್ರಪಂತ್ ಥೋಮ್ಮ ಎಂದು ಗುರುತಿಸಲಾಗಿದೆ.
ನಗರದ ಹೊರಗೆ ಬೀಡು ಬಿಟ್ಟದ ಸೈನಿಕರ ಕ್ಯಾಂಪ್​ನಿಂದ ಬಂದೂಕಿನ ಜೊತೆಗೆ ಪರಾರಿಯಾಗಿರುವ ಸೈನಿಕ ಮೊದಲು ಕ್ಯಾಂಪ್​ನಲ್ಲೇ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾನೆ. ಅಲ್ಲದೆ, ಬಂದೂಕಿನ ಜೊತೆಗೆ ಟರ್ಮಿನ್ ಮಾಲ್ 21ರ ಒಳಗೆ ನುಗ್ಗಿರುವ ವ್ಯಕ್ತಿ ಮನಸ್ಸೋ ಇಚ್ಛೆ ಗುಂಡು ಹಾರಿಸಿದ್ದಾನೆ. ಪರಿಣಾಮ 15ಕ್ಕೂ ಹೆಚ್ಚು ಜನ ಈ ಗುಂಡಿನ ದಾಳಿಯಲ್ಲಿ ಮೃತರಾಗಿದ್ದಾರೆ.

ಗುಂಡಿನ ದಾಳಿ ನಡೆಯುತ್ತಿದ್ದಂತೆ ಮಾಲ್ ಅನ್ನು ಮುಚ್ಚಲಾಗಿದೆ. ಮಾಲ್ ಹೊರಗೆ ಈತ ನಡೆಸಿರುವ ಗುಂಡಿನ ದಾಳಿ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಮಾಲ್ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಗುಂಡು ಹಾರಿಸಿರುವ ವ್ಯಕ್ತಿಯನ್ನು ಶೀಘ್ರದಲ್ಲಿ ಬಂದಿಸಲಾಗುವುದು ಎಂದು ರಕ್ಷಣಾ ಸಚಿವಾಲಯದ ಲೆಫ್ಟಿನೆಂಟ್ ಜನರಲ್ ಕೊಂಗ್ಚೀಪ್ ತಂತ್ರವಾನಿಚ್ ತಿಳಿಸಿದ್ದಾರೆ.

ಇದನ್ನೂ ಓದಿ : Exit Poll Result 2020: ದೆಹಲಿ ಮತಗಟ್ಟೆ ಸಮೀಕ್ಷೆ; ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆಯತ್ತ ಅರವಿಂದ ಕೇಜ್ರಿವಾಲ್?
First published: