• Home
 • »
 • News
 • »
 • national-international
 • »
 • ಪ್ರಾಯೋಗಿಕ ಪರೀಕ್ಷೆ ನೆಪದಲ್ಲಿ 17 ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿ ದೌರ್ಜನ್ಯ ನಡೆಸಿದ ಶಾಲಾ ಸಿಬ್ಬಂದಿ

ಪ್ರಾಯೋಗಿಕ ಪರೀಕ್ಷೆ ನೆಪದಲ್ಲಿ 17 ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿ ದೌರ್ಜನ್ಯ ನಡೆಸಿದ ಶಾಲಾ ಸಿಬ್ಬಂದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Muzaffarnagar Molested Case: ರಾತ್ರಿ ಇಡೀ ಶಾಲೆಯಲ್ಲಿ ಮಕ್ಕಳನ್ನು ಉಳಿಸಿಕೊಂಡು ಅವರಿಗೆ ದೌರ್ಜನ್ಯ ಎಸಗಿದ್ದಾರೆ. ಬೆಳಗ್ಗೆ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸುವಾಗ ಈ ವಿಷಯವನ್ನು ಮನೆಯಲ್ಲೂ ಯಾರ ಮುಂದೆ ಬಾಯಿ ಬಿಡದಂತೆ ಎಚ್ಚರಿಕೆ ನೀಡಿದ್ದಾರೆ.

 • Share this:

  ಲಕ್ನೋ (ಡಿ. 7): ಪ್ರಾಯೋಗಿಕ ಪರೀಕ್ಷೆಯ ನೆಪದಲ್ಲಿ 10ನೇ ತರಗತಿಯ 17 ಬಾಲಕಿಯರನ್ನು ಶಾಲೆಗೆ ಕರೆಸಿಕೊಂಡ ಶಾಲೆಯ ಮ್ಯಾನೇಜರ್​​​ ಅವರಿಗೆ ಮತ್ತು ಬರುವ ಆಹಾರ ​ ನೀಡಿ ದೌರ್ಜನ್ಯ (Molested) ಎಸಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ (Muzaffarnagar) ನಡೆದಿದೆ. ಇಲ್ಲಿನ ಪುರ್ಕಾಜಿ ಪಟ್ಟಣದ ಜಿಜಿಎಸ್​ ಇಂಟರ್​ನ್ಯಾಷನಲ್​ ಶಾಲೆಯಲ್ಲಿ ಓದುತ್ತಿದ್ದ 17 ವಿದ್ಯಾರ್ಥಿಗಳನ್ನು (Students) ನವೆಂಬರ್ 18 ರಂದು ಇಬ್ಬರು ಶಾಲಾ ಮ್ಯಾನೇಜರ್‌ಗಳು ಭೋಪಾದಿಂದ ಕರೆಸಿಕೊಂಡು ಕಿರುಕುಳ ನೀಡಿದ್ದಾರೆ. ರಾತ್ರಿ ಇಡೀ ಶಾಲೆಯಲ್ಲಿ ಮಕ್ಕಳನ್ನು ಉಳಿಸಿಕೊಂಡು ಅವರಿಗೆ ದೌರ್ಜನ್ಯ ಎಸಗಿದ್ದಾರೆ. ಬೆಳಗ್ಗೆ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸುವಾಗ ಈ ವಿಷಯವನ್ನು ಮನೆಯಲ್ಲೂ ಯಾರ ಮುಂದೆ ಬಾಯಿ ಬಿಡದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಈ ವಿಚಾರ ಹೊರ ಬಂದರೆ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ.


  ಬಡ ಕುಟುಂಬದ ಬಾಲಕಿಯರ ಮೇಲೆ ದೌರ್ಜನ್ಯ


  ಬಾಲಕಿಯರೆಲ್ಲಾ ಬಡ ಕುಟುಂಬದಿಂದ ಬಂದವರಾಗಿದ್ದು, ಈ ಬಗ್ಗೆ ಅಂಜಿಕೊಂಡು ಸುಮ್ಮನಾಗಿದ್ದಾರೆ. ಇಬ್ಬರು ಬಾಲಕಿಯರು ಈ ವಿಷಯ ತಿಳಿಸಿದಾಗ ಈ ಸಂಬಂಧ ಅವರ ಪೋಷಕರು ದೂರು ನೀಡಲು ಮುಂದಾಗಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ನಂತರವೂ ಕ್ರಮ ಕೈಗೊಳ್ಳದ  ಪೊಲೀಸರು ಶಾಲಾ ವ್ಯವಸ್ಥಾಪಕರನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ. ಅಲ್ಲದೇ ಈ ಘಟನೆ ನಡೆದ ಸಂದರ್ಭದಲ್ಲಿ ಹುಡುಗಿಯರೊಂದಿಗೆ ಯಾವುದೇ ಮಹಿಳಾ ಶಿಕ್ಷಕಿಯರು ಇರಲಿಲ್ಲ ಎಂದು ಕುಟುಂಬದ ವರು ಆರೋಪಿಸಿದ್ದಾರೆ. ವದಂತಿಗಳನ್ನು ಹರಡಲು ಮತ್ತು ಬ್ಲ್ಯಾಕ್‌ಮೇಲಿಂಗ್ ಮಾಡಿದ್ದಕ್ಕಾಗಿ ಶಾಲೆಯ ವ್ಯವಸ್ಥಾಪಕ ರಿಂದ ಸ್ಥಳೀಯ ಪತ್ರಕರ್ತನ ವಿರುದ್ಧ ದೂರು ದಾಖಲಿಸುವ ಮೂಲಕ ಅವರು ಒತ್ತಡ ಹೇರಲು ಪ್ರಯತ್ನಿಸಿದರು.


  17 ದಿನಗಳ ನಂತರ ಪ್ರಕರಣ ಬಯಲಿಗೆ


  ಇದಾದ ಬಳಿಕ ವಿದ್ಯಾರ್ಥಿನಿಯೊಬ್ಬರ ತಂದೆ ಅಲ್ಲಿನ ಶಾಸಕರಿಗೆ ಈ ಘಟನೆ ಕುರಿತು ತಿಳಿಸಿದ್ದಾರೆ.  17 ದಿನಗಳ ನಂತರ ಸ್ಥಳೀಯ ಬಿಜೆಪಿ ಶಾಸಕ ಪ್ರಮೋದ್ ಉತ್ವಾಲ್ ಅವರಿಗೆ ಈ ವಿಷಯ ತಿಳಿದು ಬಂದ ತಕ್ಷಣ, ಅವರು ಮಧ್ಯಪ್ರವೇಶಿಸಿ ತನಿಖೆಗೆ ಆದೇಶಿಸಿದಾಗ ಈ ಸಂಪೂರ್ಣ ಪ್ರಕರಣ ಬೆಳಕಿಗೆ ಬಂದಿದೆ.


  ಇದನ್ನು ಓದಿ: ಮನೆಯವರ ವಿರೋಧಿಸಿ ಮದುವೆಯಾದ ಅಕ್ಕನ ಕತ್ತು ಸೀಳಿ ಸೆಲ್ಪಿ ತೆಗೆದುಕೊಂಡ ತಮ್ಮ; ಮಹಾರಾಷ್ಟ್ರದಲ್ಲೊಂದು ಮರ್ಯಾದಾ ಹತ್ಯೆ


  ಈ ಘಟನೆಯನ್ನು ಯಾರಿಗಾದರೂ ಹೇಳಿದರೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುತ್ತೇವೆ ಅಲ್ಲದೇ, ಕುಟುಂಬದವರನ್ನು ಕೊಲ್ಲುತ್ತೇವೆ ಎಂದು ಹುಡುಗಿಯರಿಗೆ ಬೆದರಿಕೆ ಹಾಕಲಾಗಿದೆ. ಇದರಿಂದ ಭಯಗೊಂಡ ವಿದ್ಯಾರ್ಥಿಗಳು ಮರುದಿನ ದಿಂದ ಶಾಲೆಗೆ ಹೋಗುವುದನ್ನು ನಿಲ್ಲಿಸಿದಾಗ ಅನುಮಾನಗೊಂಡ ಕುಟುಂಬಸ್ಥರು ಈ ಕುರಿತು ವಿಚಾರಿಸಿದ್ದಾರೆ


  ಪೋಕ್ಸೋ ಕಾಯ್ದೆ ಅಡಿ ಪ್ರಕರಣ
  ಘಟನೆ ಸಂಬಂಧಭೋಪಾದಲ್ಲಿರುವ ಸೂರ್ಯ ದೇವ್ ಪಬ್ಲಿಕ್ ಸ್ಕೂಲ್‌ನ ಸಂಚಾಲಕ ಯೋಗೇಶ್ ಕುಮಾರ್, ಜಿಜಿಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಪುರ್ಕಾಜಿಯ ನಿರ್ವಾಹಕ ಅರ್ಜುನ್ ಸಿಂಗ್ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಪಿಸಿಯ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯ ಸಂಬಂಧ ದೂರುಗಳನ್ನು ನಿರ್ಲಕ್ಷಿಸಿದ ಎಸ್‌ಎಚ್‌ಒ ಅವರ ವಿರುದ್ಧ ಕ್ರಮಕ್ಕೆ ಮುಂದಾಗಲಾಗಿದೆ.


  ಇದನ್ನು ಓದಿ: ಫೆಬ್ರವರಿ ವೇಳೆಗೆ ಭಾರತಕ್ಕೆ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ: IIT ವಿಜ್ಞಾನಿ ಎಚ್ಚರಿಕೆ


  ಕ್ರಮಕ್ಕೆ ಮುಂದಾದ ಪೊಲೀಸರು
  ಘಟನೆ ಕುರಿತು ಮಾತನಾಡಿರುವ ಮುಜಾಫರ್‌ನಗರದ ಎಸ್‌ಎಸ್‌ಪಿ ಅಭಿಷೇಕ್ ಯಾದವ್ , ಪುರ್ಕಾಜಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯಲ್ಲಿ ಓದುತ್ತಿರುವ ಬಾಲಕಿಯ ತಂದೆಯಿಂದ ದೂರನ್ನು ಸ್ವೀಕರಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಎಸ್‌ಒಜಿ ಮತ್ತು ಅಪರಾಧ ವಿಭಾಗ ಸೇರಿದಂತೆ ಐದು ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗುವುದು. ಅಲ್ಲದೆ, ಎಸ್‌ಎಚ್‌ಒ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಈ ಪ್ರಕರಣದಲ್ಲಿ ಇತರ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದಿದ್ದಾರೆ.

  Published by:Seema R
  First published: