news18 Updated:October 24, 2020, 4:22 PM IST
ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳ ವಿರುದ್ಧ ಪ್ರತಿಭಟನೆಯ ಸಾಂದರ್ಭಿಕ ಚಿತ್ರ
- News18
- Last Updated:
October 24, 2020, 4:22 PM IST
ಲಕ್ನೋ(ಅ. 24): ಲೈಂಗಿಕ ಕಿರುಕುಳ ವಿರೋಧಿಸಿದ 16 ವರ್ಷದ ಬಾಲಕಿಯನ್ನು ಹತ್ಯೆಗೈದಿರುವ ದಾರುಣ ಘಟನೆ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದಿರುವುದು ವರದಿಯಾಗಿದೆ. ಫಿರೋಜಾಬಾದ್ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಈ ಯುವತಿಯ ಮನೆಗೆ ಶುಕ್ರವಾರ ರಾತ್ರಿ ನುಗ್ಗಿದ ಮೂವರು ದುಷ್ಕರ್ಮಿಗಳು ಗುಂಡು ಹೊಡೆದು ಸಾಯಿಸಿದ್ದಾರೆ. ಹತ್ಯೆಯಾದ ಹುಡುಗಿಯ ತಂದೆ ಅವರು ನೀಡಿದ ಮಾಹಿತಿ ಮೇರೆಗೆ ಮೂವರು ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ. ಇದೇ ವೇಳೆ, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಹುಡುಗಿ ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಕೆಲ ಕಿಡಿಗೇಡಿಗಳು ಅಶ್ಲೀಲವಾಗಿ ರೇಗಿಸಿದ್ಧಾರೆ. ಈಕೆ ಇದನ್ನು ಬಲವಾಗಿ ಪ್ರತಿರೋಧಿಸಿದ್ದಾಳೆ. ಅದಕ್ಕಾಗಿ ಈಕೆಯನ್ನು ಹತ್ಯೆಗೈಯ್ಯಲಾಗಿದೆ ಎಂದು ಈಕೆಯ ತಂದೆ ಹೇಳಿದ್ದಾರೆ.
ಇದನ್ನೂ ಓದಿ: ದಸರಾ ಉಡುಗೊರೆ: ಕೇಂದ್ರ ಸರ್ಕಾರದಿಂದ 6,500 ಕೋಟಿ ಮೊತ್ತದ ಚಕ್ರಬಡ್ಡಿ ಮನ್ನಾ
“ಕೆಲ ಜನರು ನನ್ನ ಮನೆಗೆ ನುಗ್ಗಿ ಜಗಳ ಪ್ರಾರಂಭಿಸಿದರು. ಬಳಿಕ ನನ್ನ ಮಗಳ ತಲೆಗೆ ಗುಂಡು ಹೊಡೆದರು. ಮನೀಶ್ ಯಾದವ್, ಶಿವಪಾಲಿ ಯ ಆದವ್ ಮತ್ತು ಗೌರವ್ ಚಾಕ್ ಅವರು ನನ್ನ ಮಗಳನ್ನ ಕೊಂದಿದ್ದಾರೆ” ಎಂದು ಹತ್ಯೆಯಾದ ಯುವತಿಯ ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ಧಾರೆ.
ಈ ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್ಎಸ್ಪಿ ಸಚಿಂದ್ ಕುಮಾರ್ ಪಟೇಲ್, ಆರೋಪಿಗಳನ್ನ ಹಿಡಿಯಲು ಮೂರು ತಂಡಗಳನ್ನ ರಚಿಸಲಾಗಿದೆ ಎಂದಿದ್ದಾರೆ.
Published by:
Vijayasarthy SN
First published:
October 24, 2020, 4:22 PM IST