ನೊಬೆಲ್​ ಶಾಂತಿ ಪುರಸ್ಕಾರಕ್ಕೆ 16 ವರ್ಷದ ಪರಿಸರ ಕಾರ್ಯಕರ್ತೆ ಥನ್ಬರ್ಗ್​ ಹೆಸರು ನಾಮನಿರ್ದೇಶನ

ಒಂದು ವೇಳೆ ಥುನ್ಬರ್ಗ್​ ಈ ಪ್ರಶಸ್ತಿಯನ್ನು ಗೆದ್ದರೆ ನೊಬೆಲ್​ ಶಾಂತಿ ಪುರಸ್ಕಾರ ಗೆದ್ದ ಜಗತ್ತಿನ ಅತಿ ಕಿರಿಯವರಾಗಲಿದ್ದಾರೆ. ಈವರೆಗೂ ಈ ಕೀರ್ತಿ ಪಾಕಿಸ್ತಾನದ ಮಲಾಲಾ ಯೂಸೂಫಾಜಿ ಹೆಸರಿನಲ್ಲಿ ಇದೆ. ಈಕೆ 17 ವರ್ಷದವಳಾಗಿದ್ದಾಗ ಪ್ರಶಸ್ತಿ ಗೆದ್ದಿದ್ದಳು.

HR Ramesh | news18
Updated:March 15, 2019, 11:59 AM IST
ನೊಬೆಲ್​ ಶಾಂತಿ ಪುರಸ್ಕಾರಕ್ಕೆ 16 ವರ್ಷದ ಪರಿಸರ ಕಾರ್ಯಕರ್ತೆ ಥನ್ಬರ್ಗ್​ ಹೆಸರು ನಾಮನಿರ್ದೇಶನ
ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಮತ್ತು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಥನ್ಬರ್ಗ್​
  • News18
  • Last Updated: March 15, 2019, 11:59 AM IST
  • Share this:
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೆಸರನ್ನು ಈ ಬಾರಿಗೆ ನೊಬೆಲ್ ಶಾಂತಿ​ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ ಎಂಬ ಊಹಾಪೋಹ ಎಲ್ಲೆಡೆ ಹಬ್ಬಿತ್ತು.  ಭಾವಿಸಲಾಗಿತ್ತು. ಈ ಇಮ್ರಾನ್ ಖಾನ್ ಅವರಿಗೆ ಮತ್ತೊಬ್ಬ ಸ್ಪರ್ಧಿಯನ್ನು ಊಹಿಸುವಲ್ಲಿ ಜಗತ್ತು ವಿಫಲವಾಯಿತು.

16 ವರ್ಷದ ಸ್ವಿಡೀಶ್​ನ ಪರಿಸರವಾದಿ ಗ್ರೇಟಾ ಥುನ್ಬರ್ಗ್​ ಈ ಬಾರಿಯ ನೊಬೆಲ್ ಶಾಂತಿ​ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದಾರೆ. ಹವಾಮಾನ ಬದಲಾವಣೆ ಕುರಿತು ಈ ಬಾಲಕಿ ಮಾಡಿರುವ ಕೆಲಸ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ಗುರುತಿಸಿ, ಇವರನ್ನು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಒಂದು ವೇಳೆ ಥುನ್ಬರ್ಗ್​ ಈ ಪ್ರಶಸ್ತಿಯನ್ನು ಗೆದ್ದರೆ ನೊಬೆಲ್​ ಶಾಂತಿ ಪುರಸ್ಕಾರ ಗೆದ್ದ ಜಗತ್ತಿನ ಅತಿ ಕಿರಿಯವರಾಗಲಿದ್ದಾರೆ. ಈವರೆಗೂ ಈ ಕೀರ್ತಿ ಪಾಕಿಸ್ತಾನದ ಮಲಾಲಾ ಯೂಸೂಫಾಜಿ ಹೆಸರಿನಲ್ಲಿ ಇದೆ. ಈಕೆ 17 ವರ್ಷದವಳಾಗಿದ್ದಾಗ ಪ್ರಶಸ್ತಿ ಗೆದ್ದಿದ್ದಳು.

16 ವರ್ಷದ ಪರಿಸರವಾದಿ ಥನ್ಬರ್ಗ್ ಹವಾಮಾನ ಬದಲಾವಣೆ ಕುರಿತು ಸಾಕಷ್ಟು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಪರಿಸರದ ಮೇಲಾಗುತ್ತಿರುವ ಹಾನಿ ತಡೆಗಟ್ಟುವಂತೆ ಆಗ್ರಹಿಸಿ, 2018ರ ಆಗಸ್ಟ್​ನಲ್ಲಿ ಸ್ವಿಡೀಶ್​​ ಸಂಸತ್​ ಭವನದ ಮುಂದೆ ಪ್ರತಿಭಟನೆ ನಡೆಸಿದ್ದರು. ಕಳೆದ ಡಿಸೆಂಬರ್​ನಲ್ಲಿ ಪೋಲೆಂಡ್​ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಕುರಿತು ಮಾತನಾಡಿದ್ದಳು. ಕಳೆದ ವರ್ಷದ ಜನವರಿಯಲ್ಲಿ ದಾವೋಸ್​ನಲ್ಲಿ ವರ್ಲ್ಡ್​ ಎಕನಾಮಿಕ್​ ಫೋರಂನಲ್ಲಿ ಇದೇ ವಿಚಾರವಾಗಿ ವಿಷಯ ಮಂಡನೆ ಮಾಡಿದ್ದರು.

First published:March 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading