Suicide Note: ತನ್ನ ಕೊನೆಯಾಸೆ ತೀರಿಸುವಂತೆ ಮೋದಿಗೆ ಪತ್ರ ಬರೆದು ಬಾಲಕ ಆತ್ಮಹತ್ಯೆ

Suicide: ಹದಿಹರೆಯದ ಹುಡುಗ ಈ ಹಿಂದೆ ತನ್ನ ಕುಟುಂಬದೊಂದಿಗೆ ಜಗಳವಾಡಿದ್ದ. ಅವನು ಡ್ಯಾನ್ಸರ್​ ಆಗಲು ಬಯಸಿದ್ದಾಗ, ಅವನ ಹೆತ್ತವರು ಅವನನ್ನ ಅಧ್ಯಯನದ ಮೇಲೆ ಕೇಂದ್ರೀಕರಿಸಬೇಕೆಂದು ಒತ್ತಾಯಿಸಿದರು. ಒಳ್ಳೆಯ ನೃತ್ಯಗಾರನಾಗುವ ಕನಸನ್ನು ನನಸಾಗಿಸಲು ವಿಫಲನಾದ ಕಾರಣ ಹುಡುಗ ಅಸಮಾಧಾನಗೊಂಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹದಿಹರೆಯದ ಯುವಕನೋರ್ವ ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿದ್ದು, ಸಾಯುವುದಕ್ಕೂ ಮುನ್ನ ಯುವಕ ಪತ್ರವೊಂದನ್ನು ಬರೆದಿದ್ದಾನೆ. ಪತ್ರದಲ್ಲಿ ಖ್ಯಾತ ಹಾಡುಗಾರ ಅರ್ಜಿತ್​ ಸಿಂಗ್​ ಮತ್ತು ನೃತ್ಯಗಾರ ಸುಶಾಂತ್​ ಖಾತ್ರಿ ಅವರ ಹೆಸರನ್ನು ಬರೆಯುವ ಮೂಲಕ ತನ್ನ ಆಸೆಯೊಂದನ್ನು ಈಡೇರಿಸಿಕೊಡಬೇಕಾಗಿ ವಿನಂತಿಸಿಕೊಂಡಿದ್ದಾನೆ.

    ಗ್ವಾಲಿಯರ್​​ ಮೂಲದ ಅಜಿತ್​​ ವಂಶಕರ್​ ಎಂಬಾತ ಭಾನುವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಲಿಸುತ್ತಿದ್ದ ರೈಲಿಗೆ ಅಡ್ಡಲಾಗಿ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಬರೆದ ಪತ್ರದಲ್ಲಿ ರಾಜ್ಯ ಸರ್ಕಾರ ತನ್ನ ಆಸೆ ಈಡೇರಿಸಿಕೊಡಬೇಕಾಗಿ ವಿನಂತಿಸಿಕೊಂಡಿದ್ದಾನೆ.

    16 ವರ್ಷದ ಬಾಲಕ ಅಜಿತ್ ವಂಶಕರ್ ಅತ್ಮಹತ್ಯೆಗೂ ಮುನ್ನ​ ಮಧ್ಯಪ್ರದೇಶ ಸರ್ಕಾರದೊಂದಿಗೆ ವಿನಂತಿ ಮಾಡಿಕೊಂಡಿದ್ದಾನೆ. ಪತ್ರದಲ್ಲಿರುವಂತೆ ಬಾಲಿವುಡ್​ನ ಖ್ಯಾತ  ಹಾಡುಗಾರ ಅರ್ಜಿತ್​ ಸಿಂಗ್​ ತನ್ನ ಜೀವನದ ಮೇಲೆ ಒಂದು ಹಾಡನ್ನು ಬರೆದು ಹಾಡಬೇಕು. ಅದಕ್ಕೆ ನೇಪಾಳದ ಖ್ಯಾತ ನೃತ್ಯಗಾರ ಸುಶಾಂತ್​ ಖತ್ರಿ ಹಾಡಿಗೆ ತಕ್ಕಂತೆ ನೃತ್ಯ ಮಾಡುವ ಕಾರ್ಯಕ್ರವನ್ನು ಆಯೋಜಿಸುವಂತೆ ಸರ್ಕಾರದ ಕೇಳುತ್ತಿದ್ದೇನೆ ಎಂದು ಬರೆದಿದ್ದಾನೆ. ಮಾತ್ರವಲ್ಲದೆ, ತನ್ನ ಕೊನೆಯ ಆಸೆಯನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪತ್ರದಲ್ಲಿ ಉಲ್ಲೇಖಿಸುವ ಮೂಲಕ ಒತ್ತಾಯಿಸಿದ್ದಾನೆ.

    ‘‘ಆಗ ನನ್ನ ಆತ್ಮ ಮಾತ್ರ ಶಾಂತಿಯಿಂದ ವಿಶ್ರಾಂತಿ ಪಡೆಯುತ್ತದೆ ಮತ್ತು ನನ್ನ ಶೆಯನ್ನು ಈಡೇರಿಸುವಂತೆ ಪ್ರಧಾನಿ ಬಳಿ ಹೇಳಲು ಬಯಸುತ್ತೇನೆ’’ ಎಂದು ಅಜಿತ್​ ಆತ್ಮಹತ್ಯೆಗೂ ಮುನ್ನ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

    Read Also: Sundar Pichai | ನನ್ನ ದಿನಚರಿ ಎಲ್ಲ ಸಾಂಪ್ರದಾಯಿಕ ಮನೆಗಳಲ್ಲಿ ಇರುವಂತೆಯೇ ಇತ್ತು; ಗೂಗಲ್ ಸಿಇಒ ಸುಂದರ್ ಪಿಚೈ

    ಅಜಿತ್​ ತನ್ನ ಹೆತ್ತವರ ಆಸೆಯನ್ನು ಪೂರೈಸದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿಸುಬಂದಿದೆ. ತಂದೆ-ತಾಯಿಯ ಆಸೆ ಈಡೇರಿಸದೇ ಇದ್ದದ್ದಕ್ಕೆ ಕ್ಷಮಯಾಚಿಸುವ ಮೂಲಕ ‘‘ ನಾನು ಉತ್ತಮ ನೃತ್ಯಗಾರನಾಗಬೇಕೆಂದು ಬಯಸಿದ್ದೆ. ಆದರೆ ಯಾರೂ ನನ್ನನ್ನು ಬೆಂಬಲಿಸಲಿಲ್ಲ. ನನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ನನ್ನ ಕೇಶ ವಿನ್ಯಾಸ ಇಷ್ಟವಾಗಲಿಲ್ಲ. ನಾನು ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ಈ ಸಾವಿಗೆ ಯಾರೂ ಜವಾಬ್ದಾರರಲ್ಲ‘‘ ಎಂದು ಬರೆದಿದ್ದಾನೆ.

    Read Also: Digital age: ಈ ಡಿಜಿಟಲ್‌ ಯುಗದಲ್ಲಿ ನಾವು ನಮ್ಮ ಮಕ್ಕಳನ್ನು ರಕ್ಷಿಸುವುದು ಹೇಗೆ..?

    ಮಾಹಿತಿಯ ಪ್ರಕಾರ, ಹದಿಹರೆಯದ ಹುಡುಗ ಈ ಹಿಂದೆ ತನ್ನ ಕುಟುಂಬದೊಂದಿಗೆ ಜಗಳವಾಡಿದ್ದ. ಅವನು ಡ್ಯಾನ್ಸರ್​ ಆಗಲು ಬಯಸಿದ್ದಾಗ, ಅವನ ಹೆತ್ತವರು ಅವನನ್ನ ಅಧ್ಯಯನದ ಮೇಲೆ ಕೇಂದ್ರೀಕರಿಸಬೇಕೆಂದು ಒತ್ತಾಯಿಸಿದರು. ಒಳ್ಳೆಯ ನೃತ್ಯಗಾರನಾಗುವ ಕನಸನ್ನು ನನಸಾಗಿಸಲು ವಿಫಲನಾದ ಕಾರಣ ಹುಡುಗ ಅಸಮಾಧಾನಗೊಂಡಿದ್ದಾನೆ. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸ್ ಅಧಿಕಾರಿ ಸಂಜೀವ್ ನಯನ ಶರ್ಮಾ ಎಂದು ಹೇಳಿದರು.
    Published by:Harshith AS
    First published: