Hindu Girl Abducted: ಹಿಂದೂ ಬಾಲಕಿ ಅಪಹರಣ, ಮುಸ್ಲಿಂ ವ್ಯಕ್ತಿ ಜೊತೆ ಬಲವಂತದ ಮದುವೆ!

ಪಾಕಿಸ್ತಾನದ ಸಿಂಧ್‍ನಲ್ಲಿ 16 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ, ಮುಸ್ಲಿಂ ವ್ಯಕ್ತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಿಸಿದ್ದಾರೆ. ಅಲ್ಲದೇ ಆಕೆಯನ್ನುಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ನಂತರ ಬಲವಂತವಾಗಿ ಮದುವೆ ಮಾಡಿಸಿದ್ದಾರೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಪಾಕಿಸ್ತಾನದವರು ಪದೇ ಪದೇ ತಮ್ಮ ನರಿ (Fox) ಬುದ್ದಿಯನ್ನು ತೋರಿಸುತ್ತಲೇ ಬರುತ್ತಿದ್ದಾರೆ. ಭಾರತೀಯರು (Indians) ಸುಮ್ಮನಿದ್ದರೂ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾರೆ. ಪಾಕಿಸ್ತಾನದಲ್ಲಿರುವರ ಭಾರತೀಯರಿಗೆ ಪ್ರತಿ ದಿನ ನರಕ ದರ್ಶನ ಮಾಡಿಸುತ್ತಾ ಇರುತ್ತಾರೆ. ಅಲ್ಲದೇ ಅವರನ್ನು ಅವರ ಪಾಡಿಗೆ ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ. ಭಾರತೀಯರನ್ನು ಅದರಲ್ಲೂ ಹಿಂದೂಗಳನ್ನು ಟಾರ್ಗೆಟ್ (Target) ಮಾಡಿ ಹಲ್ಲೆ ಮಾಡುವುದು, ಚಿತ್ರಹಿಂಸೆ ನೀಡುವುದನ್ನು ಮಾಡುತ್ತಾರೆ. ಪಾಕಿಸ್ತಾನದ ಸಿಂಧ್‍ನಲ್ಲಿ 16 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ (Abducted), ಮುಸ್ಲಿಂ ವ್ಯಕ್ತಿಯೊಂದಿಗೆ ಬಲವಂತವಾಗಿ ವಿವಾಹ (Marriage) ಮಾಡಿಸಿದ್ದಾರೆ. ಅಲ್ಲದೇ ಆಕೆಯನ್ನು ಅಪಹರಿಸಿ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ನಂತರ ಬಲವಂತವಾಗಿ ಮದುವೆ ಮಾಡಿಸಿದ್ದಾರೆ.

16 ವರ್ಷದ ಹಿಂದೂ ಬಾಲಕಿ ಅಪಹರಣ

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮುಸ್ಲಿಮರಿಂದ ಪದೇ ಪದೇ ದಾಳಿ ನಡೆಯುತ್ತಲೇ ಇರುತ್ತದೆ. ಅದ್ರಲ್ಲೂ ಹಿಂದೂ ಯುವತಿಯರು ಅಲ್ಲಿ ನೆಮ್ಮದಿಯಾಗಿ ಬದುಕುವಂತೆ ಇಲ್ಲ. ಆ ಉಗ್ರರ ಕಣ್ಣಿಗೆ ಹಿಂದೂ ಯುವತಿಯರು ಬಿದ್ರೆ ಮುಗೀತು. ಅವರನ್ನು ಅಪರಿಸಿಯೇ ಬಿಡುತ್ತಾರೆ. ಪಾಕಿಸ್ತಾನದ ಸಿಂಧ್‍ನಲ್ಲಿ 16 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ, ಮುಸ್ಲಿಂ ವ್ಯಕ್ತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಿಸಿದ್ದಾರೆ. ಅಲ್ಲದೇ ಆಕೆಯನ್ನು ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ.

ಘಟನೆ ಖಂಡಿಸಿ ಹಿಂದೂ ಸಮುದಾಯದಿಂದ ಪ್ರತಿಭಟನೆ
16 ವರ್ಷದ ಬಾಲಕಿ ಅಪಹರಣ ಮತ್ತು ಮದುವೆ ಖಂಡಿಸಿ ಪಾಕಿಸ್ತಾನದಲ್ಲಿ ಹಿಂದೂ ಸಮುದಾಯವು ಪ್ರತಿಭಟನೆ ನಡೆಸಿದೆ. ನವಾಬ್‍ಶಾಹ್‍ನಲ್ಲಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮನೆ ಮುಂದೆ ಧರಣಿ ನಡೆಸಿದ್ದಾರೆ. ಆಸಿಫ್ ಅಲಿ ಜರ್ದಾರಿ ಅವರು ಹಿಂದೂ ಸಮುದಾಯದ ಪರ ನಿಲ್ಲಬೇಕು. ಬೆಂಬಲ ನೀಡಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Pakistani Journalist: ಬಾಲಕನ ಕಪಾಳಕ್ಕೆ ಹೊಡೆದ ಪಾಕಿಸ್ತಾನದ ಪತ್ರಕರ್ತೆ!

ಹಿಂದೂಗಳ ಅಪಹರಣ, ಬಲವಂತವಾಗಿ ಮತಾಂತರ!
ಪಾಕಿಸ್ತಾನಲ್ಲಿ ಬದುಕುತ್ತಿರುವ ಹಿಂದೂಗಳ ಪರಿಸ್ಥಿತಿ ಹೇಳತೀರದ್ದಾಗಿದೆ. ಪಾಕ್ ನೀಚ ಬುದ್ದಿಯ ಮುಸ್ಲಿಂರು ಹಿಂದೂ ಯುವತಿಯರನ್ನು ನಿರಂತರವಾಗಿ ಅಪಹರಣ ಮಾಡುತ್ತಲೇ ಇದ್ದಾರೆ. ಅಲ್ಲದೇ ಅವರಿಗೆ ಇಷ್ಟ ಇಲ್ಲದಿದ್ದರೂ ಜೀವ ಬೆದರಿಕೆ ಹಾಕಿ ಮತಾಂತರ ಮಾಡಿಸಿಕೊಳ್ಳುತ್ತಾರೆ. ನಂತರ ಅವರದೇ ಸಮುದಾಯದ ವ್ಯಕ್ತಿಗೆ ಮದುವೆ ಮಾಡಿಸಿ ಬಿಡುತ್ತಾರೆ.Áಗ ಆಕೆ ಮನಸ್ಸಿಲ್ಲದಿದ್ದರೂ ಮುಸ್ಲಿಂ ಆಗಿ ಜೀವನ ನಡೆಸಬೇಕು ಇಲ್ಲದಿದ್ದರೆ ಅವರು ಕೊಂದು ಬಿಡುತ್ತಾರೆ.

ಪದೇ-ಪದೇ ಹಿಂದೂಗಳ ಮೇಲೆ ದಾಳಿ
ಪಾಪಿಗಳು ಅಂದ್ರೆ ಪಾಕಿಸ್ತಾನದವರು ಅಲ್ಲಿರುವ ಭಾರತೀಯರು ನೆಮ್ಮದಿಯಾಗಿ ಉಸಿರಾಡುವಂತಿಲ್ಲ. ಯಾವುದೋ ಒಂದು ಕಾರಣಕ್ಕೆ ಅವರ ಮೇಲೆ ಹಲ್ಲೆ ಮಾಡುವುದು. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಲೇ ಇರುತ್ತಾರೆ. ಹಿಂದೂ ದೇವರುಗಳನ್ನು ಧ್ವಂಸ ಮಾಡುವುದು. ಅಲ್ಲಿರುವ ಅರ್ಚಕರ ಮೇಲೆ ಹಲ್ಲೆ ನಡೆಸುವುದನ್ನು ಮಾಡುತ್ತಲೇ ಇದ್ದಾರೆ. ಪಾಕ್‍ನಲ್ಲಿ ಹಿಂದೂಗಳ ಜೀವನ ಸ್ಥಿತಿ ಶೋಚನೀಯವಾಗಿದೆ.

ಇದನ್ನೂ ಓದಿ: Explained: 26/11ರ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಪಾಕಿಸ್ತಾನದಲ್ಲಿ ಅರೆಸ್ಟ್ ಆಗಿದ್ದು ಹೇಗೆ? ಈ ಮೋಸ್ಟ್ ವಾಂಟೆಡ್ ಉಗ್ರ ಯಾರು?

ಐದೇ ವರ್ಷದಲ್ಲಿ ಅರ್ಧಕ್ಕೆ ಕುಸಿದ ಹಿಂದೂಗಳ ಸಂಖ್ಯೆ!
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತ್ತಿದೆ. ಪಾಕ್‍ನಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಸಂಖ್ಯೆ ಐದೇ ವರ್ಷದಲ್ಲಿ ಅರ್ಧಕ್ಕರ್ಧ ಕುಸಿದಿದೆ. 2017ರಲ್ಲಿ ನಡೆದ ಜನಗಣತಿಯಲ್ಲಿ 44.4 ಲಕ್ಷ ಇದ್ದ ಜನಸಂಖ್ಯೆ ಈಗ 22 ಲಕ್ಷಕ್ಕೆ ಕುಸಿದಿದೆ. 18,68,90,601 ಜನಸಂಖ್ಯೆ ಇರುವ ದೇಶದಲ್ಲಿ ಹಿಂದೂಗಳ ಪ್ರಮಾಣ ಶೇ 1.18ರಷ್ಟು ಮಾತ್ರವಿದೆ. ಇದ್ರಲ್ಲೇ ಗೊತ್ತಾಗುತ್ತದೆ ಹಿಂದೂಗಳು ಅಲ್ಲಿ ಎಷ್ಟು ತುಳಿತಕ್ಕೆ ಒಳಗಾಗಿದ್ದಾರೆ ಎಂದು. ಪಾಪಿಗಳ ನಿರಂತರ ದಾಳಿಯಿಂದು ಹಿಂದೂಗಳು ಪ್ರಾಣ ಕಳೆದುಕೊಳ್ಳತ್ತಿದ್ದಾರೆ.
Published by:Savitha Savitha
First published: