• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಒಂದು ಹೊತ್ತು ಊಟಕ್ಕೂ ಪರಿತಪಿಸುತ್ತಿದ್ದ ಉತ್ತರ ಪ್ರದೇಶ ಬಾಲಕಿ ಖಾತೆಗೆ ಬಿತ್ತು 10 ಕೋಟಿ ರೂಪಾಯಿ!

ಒಂದು ಹೊತ್ತು ಊಟಕ್ಕೂ ಪರಿತಪಿಸುತ್ತಿದ್ದ ಉತ್ತರ ಪ್ರದೇಶ ಬಾಲಕಿ ಖಾತೆಗೆ ಬಿತ್ತು 10 ಕೋಟಿ ರೂಪಾಯಿ!

ಉತ್ತರ ಪ್ರದೇಶ ಬಾಲಕಿ

ಉತ್ತರ ಪ್ರದೇಶ ಬಾಲಕಿ

ನೀಲೇಶ್​ ಹೇಳಿದ ಆಧಾರದ ಮೇಲೆ ನಾನು ಬ್ಯಾಂಕ್​ ಖಾತೆ ಮಾಡಿದ್ದೆ. ಈ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬಾಲಕಿ ಹೇಳಿದ್ದಾಳೆ.

  • Share this:

ಲಖನೌ (ಸೆಪ್ಟೆಂಬರ್ 24): ಒಮ್ಮೊಮ್ಮೆ ನಮ್​ ಬ್ಯಾಂಕ್ ಖಾತೆಗೆ ಸಾವಿರಾರು ರೂಪಾಯಿ ಮಿಸ್​ ಆಗಿ ಬಂದು ಬೀಳುತ್ತದೆ. ಆಗ ಖುಷಿಯ ಜೊತೆಗೆ ಈ ಹಣವನ್ನು ಯಾರು ಹಾಕಿದರಪ್ಪ ಎನ್ನುವ ಪ್ರಶ್ನೆ ಕೂಡ ಕಾಡುತ್ತದೆ. ಅದೇ ರೀತಿ ಒಂದು ಹೊತ್ತು ಊಟಕ್ಕೂ ಪರಿತಪಿಸುತ್ತಿದ್ದ  ಉತ್ತರ ಪ್ರದೇಶ ಬಾಲಕಿ ಖಾತೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಕೋಟಿ ರೂಪಾಯಿ ಬಂದು ಬಿದ್ದಿದೆ. ಬ್ಯಾಂಕ್​ಗೆ ಜಮೆ ಆದ ಹಣವನ್ನು ನೋಡಿ ಬಾಲಕಿ ಅಕ್ಷರಶಃ ಶಾಕ್​ಗೆ ಒಳಗಾಗಿದ್ದಾಳೆ. ಈ ವಿಚಾರಕ್ಕೆ ಸಂಬಂಧಿಸಿ ಬಾಲಕಿ ದೂರನ್ನು ಕೂಡ ದಾಖಲು ಮಾಡಿದ್ದಾಳೆ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಬಾಲಕಿ ಖಾತೆಗೆ ಹಣ ಜಮೆ ಆದ ಬಗ್ಗೆ ಮೆಸೇಜ್​ ಒಂದು ಬಂದಿತ್ತು. ಇದನ್ನು ನೋಡಿದ ಬಾಲಕಿ ಹೌಹಾರಿದ್ದಳು. ಏಕೆಂದರೆ, ಅಲ್ಲಿ ಜಮೆ ಆಗಿದ್ದ ಹಣ ಬರೋಬ್ಬರಿ 10 ಕೋಟಿ ರೂಪಾಯಿ ಆಗಿತ್ತು. ಅನುಮಾನಗೊಂಡು ಬ್ಯಾಂಕ್​ನಲ್ಲಿ ಪರಿಶೀಲನೆ ಮಾಡಿದಗ ಈ ವಿಚಾರ ನಿಜ ಎಂಬುದು ಗೊತ್ತಾಗಿತ್ತು.


ನಂತರ ಪೊಲೀಸ್​ ಠಾಣೆಗೆ ತೆರಳಿ ಬಾಲಕಿ ದೂರು ನೀಡಿದ್ದಾಳೆ. ನಿಲೇಶ್​ ಕುಮಾರ್ ಎಂಬಾತನ ವಿರುದ್ಧ ಹಣ ಜಮೆ ಮಾಡಿರುವ ಆರೋಪವನ್ನು ಬಾಲಕಿ ಮಾಡಿದ್ದಾಳೆ. ಎರಡು ವರ್ಷಗಳ ಹಿಂದೆ ನೀಲೇಶ್​ ಬಾಲಕಿಯ ಆಧಾರ್​ ಕಾರ್ಡ್​ ಕ್ಸೆರಾಕ್ಸ್​ ಪಡೆದು ಹೋಗಿದ್ದ. ಅಲ್ಲದೆ, ಪ್ರಧಾನ ಮಂತ್ರಿ ಆವಾಸ್​ ಯೋಜನೆ ಅಡಿಯಲ್ಲಿ ಹಣ ಸಿಗಲಿದೆ ಎಂದು ಆತ ಹೇಳಿದ್ದ. ಹೀಗಾಗಿ, ಆಕೆ ಆಧಾರ್​ ಕಾರ್ಡ್​ ಕ್ಸೆರಾಕ್ಸ್ ನೀಡಿದ್ದಳು. ಅಲ್ಲದೆ, ಬ್ಯಾಂಕ್​ ಅಕೌಂಟ್ ಕೂಡ ಮಾಡಿಕೊಂಡಿದ್ದಳು.


ಇದನ್ನೂ ಓದಿ: ದೆಹಲಿಯಲ್ಲಿ ಇಂದು ಸಂಜೆ ಸುರೇಶ್ ಅಂಗಡಿ ಅಂತ್ಯಕ್ರಿಯೆ


ನೀಲೇಶ್​ ಹೇಳಿದ ಆಧಾರದ ಮೇಲೆ ನಾನು ಬ್ಯಾಂಕ್​ ಖಾತೆ ಮಾಡಿದ್ದೆ. ಈ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬಾಲಕಿ ಹೇಳಿದ್ದಾಳೆ. ಆದರೆ, ಬ್ಯಾಂಕ್​ನವರು ಹೇಳುವುದೇ ಬೇರೆ. ಈ ಬಾಲಕಿ ಖಾತೆಗೆ ಚಿಕ್ಕ ಮೊತ್ತದ ಹಣ ಸಾಕಷ್ಟು ಬಾರಿ ಡಿಪೋಸಿಟ್​ ಆಗಿದ್ದು, ಆಕೆ ಪ್ರತಿ ತಿಂಗಳು 10-20 ಸಾವಿರ ರೂಪಾಯಿ ಹಣ ವಿತ್​ ಡ್ರಾ ಮಾಡುತ್ತಾಳೆ ಎಂದಿದ್ದಾರೆ. ಸದ್ಯ, ಈ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

top videos
    First published: