ಲಕ್ನೋ: ಹೆತ್ತು ಹೊತ್ತು ಸಾಕಿದ ತಂದೆ ತಾಯಿಯನ್ನೇ (Parents) 16 ವರ್ಷದ ಬಾಲಕಿಯೊಬ್ಬಳು ( 16-year-old girl) ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಬುಲಂದ್‌ಶಹರ್‌ನಲ್ಲಿ ನಡೆದಿದೆ. ಬಾಲಕಿ ಕೊಡಲಿಯಿಂದ (Axe) ಕೊಚ್ಚಿ ಪೋಷಕರನ್ನು ಹತ್ಯೆ ಮಾಡಿದ್ದಾಳೆಂದು ಪೊಲೀಸರು ತಿಳಿಸಿದ್ದು, ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಶಬ್ಬೀರ್(45) ಮತ್ತು ಅವರ ಪತ್ನಿ ರಿಹಾನಾ (42) ಫರೂಖಿ ಮೃತ ದುರ್ದೈವಿಗಳು. ಇವರಿಬ್ಬರು ನಗರ ಲಾಲ್ ದರ್ವಾಜಾ ಮೊಹಲ್ಲಾದಲ್ಲಿರುವ ತಮ್ಮ ಮನೆಯಲ್ಲಿ ಮಾರ್ಚ್ 15ರಂದು ಶವವಾಗಿ ಪತ್ತೆಯಾಗಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.
ಮಗಳೇ ಕೊಲೆಗಾತಿ
ಆರೋಪಿ ಬಾಲಕಿ ಯಾವಾಗಲೂ ಹುಡುಗರೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ಪೋಷಕರು ಅಸಮಾಧಾನಗೊಂಡಿದ್ದರು. ಕೋಪದಲ್ಲಿ ಮಗಳಿಗೆ ಬುದ್ದಿವಾದ ಹೇಳಿ ಥಳಿಸಿದ್ದರು. ಇಷ್ಟಕ್ಕೆ ಕೋಪಗೊಂಡ ಬಾಲಕಿ ಹೆತ್ತವರನ್ನೆ ಮುಗಿಸಿದ್ದಾಳೆ.
ಅಹಾರದಲ್ಲಿ ಅಮಲೇರಿಸುವ ಮಾತ್ರೆ ಬೆರೆಸಿ, ನಂತರ ಕೊಲೆ
ತಂದೆ ತಾಯಿಯನ್ನೇ ಕೊಲ್ಲಲು ನಿರ್ಧರಿಸಿದ ಬಾಲಕಿ ತನ್ನ ಹುಡುಗನಿಂದ 20 ಅಮಲೇರುವ ಮಾತ್ರೆಗಳನ್ನು ತರಿಸಿಕೊಂಡಿದ್ದಾಳೆ. ಆ ಮಾತ್ರೆಗಳನ್ನು ಆಹಾರದಲ್ಲಿ ಬೆರೆಸಿದ್ದಾಳೆ. ಅದನ್ನು ತಿಂದಂತಹ ಪೋಷಕರು ಕೆಲ ಸಮಯದ ನಂತರ ಪ್ರಜ್ಞಾಹೀನರಾಗಿದ್ದಾರೆ. ಈ ಸಂದರ್ಭದಲ್ಲಿ ಕೊಡಲಿಯಿಂದ ಇಬ್ಬರೂ ಸಾಯುವವರೆಗೂ ಕೊಡಲಿಯಿಂದ ದಾಳಿ ಮಾಡಿದ್ದಾಳೆ " ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೋಷಕರನ್ನೇ ಕೊಂದಿರುವ ಅಪ್ರಾಪ್ತ ಬಾಲಕಿಯನ್ನು ಬಂಧಿಸಲಾಗಿದ್ದು, ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು. ಅಪರಾಧ ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆಕೆಗೆ ಮಾತ್ರೆಗಳನ್ನು ಪೂರೈಸಿದ ಯುವಕನನ್ನೂ ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಎಸ್ಎಸ್ಪಿ ಕುಮಾರ್ ತಿಳಿಸಿದ್ದಾರೆ.
ಮಗನನ್ನು ಕತ್ತು ಕೊಯ್ದು ಕೊಂದ ತಂದೆ
ತಂದೇಯೇ ಮಗನ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಅಮಾನವೀಯ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ ನಡೆದಿದೆ. ನಂಗಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಭುವನ್ ಎಂಬ ಎಂಟು ವರ್ಷದ ಬಾಲಕನನ್ನು ತಂದೆ ಬಾಲಸುಬ್ರಹ್ಮಣ್ಯಂ ತರಕಾರಿಯನ್ನು ಕೊಯ್ಯುವ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.
ಆರೋಪಿ ಬಾಲಸುಬ್ರಹ್ಮಣ್ಯಂ ಬೆಂಗಳೂರಿನಲ್ಲಿ ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದ. ಮೃತ ಬಾಲಕ ತನ್ನ ಅಜ್ಜಿಯ ಜೊತೆ ನಂಗಲಿಯಲ್ಲಿ ವಾಸಿಸುತ್ತಿದ್ದ. ಬಾಲಸುಬ್ರಹ್ಮಣ್ಯಂ ಅವಾಗವಾಗ ನಂಗಲಿಗೆ ಬಂದು ಮಗ ಮತ್ತು ತಾಯಿಯನ್ನು ನೋಡಿಕೊಂಡು ಹೋಗುತ್ತಿದ್ದ ಎಂದು ತಿಳಿದುಬಂದಿದೆ.
ಆದರೆ ಮನೆಗೆ ಬಂದ ಅದೇ ದಿನ ರಾತ್ರಿ ಬಾಲಸುಬ್ರಹ್ಮಣ್ಯಂ ಮಗನನ್ನು ಹನ್ನೊಂದು ಗಂಟೆ ರಾತ್ರಿ ಸಮಯದಲ್ಲಿ ಚಾಕುವಿನಿಂದ ಕತ್ತುಕೊಯ್ದು ಕೊಲೆ ಮಾಡಿದ್ದಾನೆ. ಆರೋಪಿ ಇದಕ್ಕೂ ಮೊದಲು ಮೂರು ವರ್ಷಗಳ ಹಿಂದೆ ತನ್ನ ಪತ್ನಿಯನ್ನೂ ಸಹ ನೇಣು ಹಾಕಿ ಕೊಲೆ ಮಾಡಿದ್ದ ಎಂದು ತಿಳಿದುಬಂದಿದೆ. ಆರೋಪಿಯನ್ನು ಕೈ ಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ