ರೇವಾ, ಮಧ್ಯಪ್ರದೇಶ : ಮೊಬೈಲ್ ಕಳ್ಳತನದ (Theft) ಆರೋಪ ಮಾಡಿದ್ದಕ್ಕೆ ಪ್ರತೀಕಾರ (Revenge) ತೀರಿಸಿಕೊಳ್ಳಲು 58 ವರ್ಷದ ಮಹಿಳೆಯ ಮೇಲೆ 16 ವರ್ಷದ ಬಾಲಕ ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ (Murder) ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ರೇವಾದಲ್ಲಿ ನಡೆದಿದೆ. ಈ ಪ್ರಕರಣದ ಸಂಬಂಧ ಪೊಲೀಸರು (Police) ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. ತನ್ನ ಮೇಲೆ ಕಳ್ಳತನ ಆರೋಪ ಮಾಡಿದ್ದರ ಪ್ರತೀಕಾರ ತೀರಿಸಿಕೊಳ್ಳಲು ಮಹಿಳೆಯನ್ನು ಕೊಂದಿರುವುದಾಗಿ ಬಾಲಕ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 31ರ ರಾತ್ರಿ ಕೈಲಾಸಪುರ ಎಂಬ ಹಳ್ಳಿಯಲ್ಲಿ ಮಹಿಳೆಯ ಕೊಲೆ ನಡೆದಿತ್ತು. 16 ವರ್ಷದ ಆರೋಪಿ ರಾತ್ರಿ ಮನೆಗೆ ನುಗ್ಗಿ ಮಲಗಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿ, ಕೈ ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟಿಕ್ ಚೀಲ, ಬಟ್ಟೆಗಳನ್ನು ತುರುಕಿ, ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಎಳೆದೊಯ್ದಿದ್ದಾನೆ. ನಂತರ ಕುಡುಗೋಲಿನಿಂದ ತಲೆ ಸೇರಿದಂತೆ ಸಿಕ್ಕ ಸಿಕ್ಕಲ್ಲೆಲ್ಲಾ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.
ಮೃತ ದೇಹದ ಮೇಲೆ ಅತ್ಯಾಚಾರ
ಮಹಿಳೆಯನ್ನು ಕೊಂದ ನಂತರ ಆರೋಪಿ ಬಾಲಕ ಮೃತದೇಹದ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೆ ಮಹಿಳೆಯ ಖಾಸಗಿ ಭಾಗಗಳನ್ನೂ ಕುಡಗೋಲಿನಿಂದ ಗಾಯಗೊಳಿಸಿ ವಿಕೃತಿ ಮೆರೆದಿದ್ದಾನೆ. ನಂತರ ಮನೆಗೆ ಬಂದು ಮನೆಯಲ್ಲಿದ್ದ 1000 ದುಡ್ಡು, ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Superstition: 3 ತಿಂಗಳ ಹಸುಗೂಸಿಗೆ ಬಿಸಿ ರಾಡ್‌ನಿಂದ 51 ಬಾರಿ ಚುಚ್ಚಿದ ಪೋಷಕರು, ಮೂಢನಂಬಿಕೆಗೆ ಬಲಿಯಾಯ್ತು ಕಂದಮ್ಮ!
ಎರಡು ವರ್ಷಗಳ ಹಿಂದೆ ಮೊಬೈಲ್ ಕದ್ದಿದ್ದ ಆರೋಪ
ಆರೋಪಿ ಬಾಲಕ ಮಹಿಳೆಯ ಮನೆಗೆ ಟಿವಿ ನೋಡಲು ಬರುತ್ತಿದ್ದನಂತೆ. ಎರಡು ವರ್ಷಗಳ ಹಿಂದೆ ಮನೆಯಲ್ಲಿ ಮೊಬೈಲ್ ಕಳ್ಳತನವಾಗಿತ್ತು. ಕುಟುಂಬಸ್ಥರು ಬಾಲಕನ ಮೇಲೆ ಆರೋಪ ಮಾಡಿದ್ದರು. ಈ ಘಟನೆಯಿಂದ ಊರಿನಲ್ಲಿ ಆತನಿಗೆ ಅವಮಾನ ಆದಂತಾಗಿತ್ತು. ಅಂದಿನಿಂದ ಬಾಲಕ ಕುಟುಂಬದ ಮೇಲೆ ಹಗೆ ಸಾಧಿಸುತ್ತಿದ್ದ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಕೊಲೆ
58 ವರ್ಷದ ಮಹಿಳೆ ಕೊಲೆಯಾಗಿರುವ ವಿಷಯ ತಿಳಿದು ಹನುಮಾನ ಪೊಲೀಸರು ಕೈಲಾಸಪುರ ಗ್ರಾಮಕ್ಕೆ ಆಗಮಿಸಿದರು. ಅವರ ಸ್ವಂತ ನಿರ್ಮಾಣ ಹಂತದ ಕಟ್ಟಡದಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಕೈಕಾಲು ಕಟ್ಟಿದ್ದು, ಬಾಯಿಯಲ್ಲಿ ಕರವಸ್ತ್ರ, ಪ್ಲಾಸ್ಟಿಕ್ಸ್ ಚೀಲ, ಎಲೆಗಳು ಕಂಡುಬಂದಿವೆ. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಸೈಬರ್ ಸೆಲ್, ಫಿಂಗರ್ ಪ್ರಿಂಟ್, ಡಾಗ್ ಸ್ಕ್ವಾಡ್ ಮತ್ತು ಎಫ್‌ಎಸ್‌ಎಲ್ ತಂಡವು ಸ್ಥಳದಲ್ಲಿ ಪುರಾವೆಗಳನ್ನು ಸಂಗ್ರಹಿಸಿದೆ. ಮೃತದೇಹವನ್ನು ಸಂಜೆ ವೈದ್ಯಕೀಯ ಕಾಲೇಜಿಗೆ ಸಾಗಿಸಿ, ಇಬ್ಬರು ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ.
ಮೃತರ ಮಗನ ಅನುಮಾನ ನಿಜವಾಯಿತು
ಮೊದಲಿಗೆ ಮಹಿಳೆ ಕುಟುಂಬ ಸದಸ್ಯರು 5 ಶಂಕಿತರ ಹೆಸರುಗಳನ್ನು ಸೂಚಿಸಿದ್ದು, ಎಲ್ಲರನ್ನೂ ವಿಚಾರಿಸಿದ ನಂತರ ಯಾರೂ ತಪ್ಪಿತಸ್ಥರೆಂಬುದು ಕಂಡುಬಂದಿರಲಿಲ್ಲ. ನಂತರ ಮೃತ ಮಹಿಳೆಯ ಮಗ ಪೊಲೀಸರಿಗೆ ಅಪ್ತಾಪ್ತ ಬಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾನೆ. ಬಾಲಕ ನಮ್ಮ ಮನೆಗೆ ಟಿವಿ ನೋಡಲು ಬರುತ್ತಿದ್ದ. ಇದೇ ವೇಳೆ ಮನೆಯಲ್ಲಿದ್ದ ಮೊಬೈಲ್ ಕಳ್ಳತನವಾಗಿತ್ತು. ಇದಕ್ಕೆ ಅವನ ಮೇಲೆ ಆರೋಪ ಮಾಡಲಾಗಿತ್ತು. ಇದರಿಂದ ಆತ ನಮ್ಮ ಕುಟುಂಬದ ಮೇಲೆ ದ್ವೇಷ ಇಟ್ಟುಕೊಂಡಿದ್ದ ಎಂದು ವಿವರಿಸಿದ್ದಾನೆ. ನಂತರ ಕೂಡಲೇ ಅಪ್ರಾಪ್ತನನ್ನು ಬಂಧಿಸಿದ್ದಾರೆ. 6 ಗಂಟೆಗಳ ಕಾಲ ಹಲವು ಸುತ್ತುಗಳಲ್ಲಿ ವಿಚಾರಣೆ ನಡೆಸಿದ್ದಾರೆ. ಆರೋಪಿ ತಾನೆ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಒಂಟಿಯಾಗಿದ್ದನ್ನು ತಿಳಿದು ಕೃತ್ಯ
ಮಹಿಳೆಯ ಮಗ ತನ್ನ ತಂದೆಗೆ ಚಿಕಿತ್ಸೆ ಕೊಡಿಸಲು ಬೇರೆ ಊರಿಗೆ ಕರೆದುಕೊಂಡು ಹೋಗಿದ್ದ. ಮಹಿಳೆ 15 ದಿನಗಳಿಂದ ಒಬ್ಬಂಟಿಯಾಗಿದ್ದರು. ಈ ವಿಷಯ ತಿಳಿದ ನಾನು ಮನೆಗೆ ನುಗ್ಗಿ ಮಂಚದ ಮೇಲೆ ಮಲಗಿದ್ದ ಮಹಿಳೆಯ ಕೈಗಳನ್ನು ಕಟ್ಟಿ ಹಾಕಿದೆ. ಶಬ್ದ ಮಾಡದಂತೆ ಬಾಯಿಗೆ ಸಾಕ್ಸ್ ಮತ್ತು ಪ್ಲಾಸ್ಟಿಕ್ ಕವರ್ಗಳನ್ನು ತುರುಕಿದೆ. ನಂತರ ನಿರ್ಮಾಣ ಹಂತದಲ್ಲಿರುವ ಮನೆಯ ಭಾಗಕ್ಕೆ ಎಳೆದೊಯ್ದೆ. ಹಗ್ಗದಿಂದ ಕೈ ಕಾಲುಗಳನ್ನು ಕಟ್ಟಿದೆ. ನಂತರ ಮುಖ, ಕುತ್ತಿಗೆ, ಎದೆಗೆ ಹಲವು ಬಾರಿ ಕುಡುಗೋಲಿನಿಂದ ಹೊಡೆದೆ. ಆಕೆ ಮೃತಪಟ್ಟ ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿರುವುದಾಗಿ ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ