• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Tragedy: ಹುಟ್ಟು ಹಬ್ಬದ ದಿನವೇ 16 ವರ್ಷದ ಬಾಲಕನ ದುರಂತ ಅಂತ್ಯ! ಶವದ ಮುಂದೆ ಕೇಕ್ ಕಟ್​ ಮಾಡಿದ ಪೋಷಕರು!

Tragedy: ಹುಟ್ಟು ಹಬ್ಬದ ದಿನವೇ 16 ವರ್ಷದ ಬಾಲಕನ ದುರಂತ ಅಂತ್ಯ! ಶವದ ಮುಂದೆ ಕೇಕ್ ಕಟ್​ ಮಾಡಿದ ಪೋಷಕರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

16 ವರ್ಷದ ಬಾಲಕ ಸಚಿನ್ ತನ್ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಬಯಸಿದ್ದ. ಪಾಲಕರು ಕೂಡ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರು. ಸಂಜೆ ವೇಳೆಗೆ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಮಾಡಲು ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದವು.

  • Share this:

ಹೈದರಾಬಾದ್​: 16 ವರ್ಷದ ಬಾಲಕ ತನ್ನ ಹುಟ್ಟುಹಬ್ಬವನ್ನು (Birthday) ಅದ್ಧೂರಿಯಾಗಿ ಆಚರಿಸಲು ಯೋಜಿಸಿದ್ದ. ಹಾಗಾಗಿ ಆ ದಿನವೇ ಕೇಕ್ (Cake), ಕ್ರ್ಯಾಕರ್ಸ್, ಸ್ವೀಟ್ಸ್ ಮತ್ತು ಬಲೂನ್‌ಗಳನ್ನು ಖರೀದಿಸಿ ಮನೆಗೆ ತಂದಿದ್ದ. ದುರಾದೃಷ್ಟವಶಾತ್​ ಸಂಜೆ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾನೆ. ಆದರೂ ಅವರ ಪೋಷಕರು (Parents) ಗುರುವಾರ ತಡರಾತ್ರಿ ಮೃತದೇಹದ (Dead Body) ಮುಂದೆ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಸಿ ನಂತರ ಬಾಲಕನ ಅಂತ್ಯಸಂಸ್ಕಾರ (Final Rites) ಮಾಡಿದ್ದಾರೆ.


ಅದ್ದೂರಿ ಜನ್ಮದಿನಾಚರಣೆ ಸಿದ್ಧತೆ


16 ವರ್ಷದ ಬಾಲಕ ಸಚಿನ್ ತನ್ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಬಯಸಿದ್ದ. ಪಾಲಕರು ಕೂಡ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರು. ಸಂಜೆ ವೇಳೆಗೆ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಮಾಡಲು ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಈ ಮಧ್ಯೆ, ಹುಟ್ಟುಹಬ್ಬದ ಹುಡುಗನಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ತಕ್ಷಣ ಆತನನ್ನು ಆಸಿಫಾಬಾದ್‌ನಲ್ಲಿ ವೈದ್ಯರ ಬಳಿಗೆ ಕರೆದುಕೊಂಡು ಬರಲಾಗಿದೆ. ಅವರು ಮಂಚಿರ್ಯಾಲ್ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಮಂಚಿರ್ಯಾಲ್‌ಗೆ ಸ್ಥಳಾಂತರ ಮಾಡಲಾಯಿತಾದರೂ ಆ ವೇಳೆಗಾಗಲೇ ಸಚಿನ್ ಪ್ರಾಣ ಕಳೆದುಕೊಂಡಿದ್ದರು.


ಇದನ್ನೂ ಓದಿ: Shocking News: ತಂದೆ ವಿರುದ್ಧವೇ ಠಾಣೆ ಮೆಟ್ಟಿಲೇರಿದ 9 ವರ್ಷದ ಬಾಲಕಿ! ಕಣ್ಣೀರಿಡುತ್ತಾ ಪೊಲೀಸರ ಮುಂದೆ ಹೇಳಿದ್ದೇನು?


ಅಂತ್ಯ ಸಂಸ್ಕಾರಕ್ಕೂ ಮೊದಲು ಬರ್ತ್​ ಡೇ ಆಚರಣೆ


ಜನ್ಮದಿನದಂದೇ ಈ ದುರಂತ ಸಂಭವಿಸಿದ್ದರಿಂದ ಪೋಷಕರು, ಆ ಪ್ರದೇಶದ ಜನರು ಸಂಬಂಧಿಕರು, ಕಣ್ಣೀರಿಟ್ಟಿದ್ದಾರೆ. ಸಚಿನ್ ಎಲ್ಲಾ ಏರ್ಪಾಡುಗಳನ್ನು ಮುಗಿಸಿ ಹುಟ್ಟುಹಬ್ಬಕ್ಕೆ ಕಾದು ಕುಳಿತಿದ್ದರಿಂದ, ಕುಟುಂಬಸ್ಥರು ಮೃತದೇಹವನ್ನು ತಡರಾತ್ರಿಯವರೆಗೂ ಇಟ್ಟುಕೊಂಡು, ಮಧ್ಯರಾತ್ರಿ ಹುಟ್ಟುಹಬ್ಬದ ನಂತರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದಾರೆ. ಕೊಮುರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಆಸಿಫಾಬಾದ್ ಮಂಡಮ್‌ನ ಬಾಬಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.


ತಡರಾತ್ರಿ ಜನ್ಮದಿನಾಚರಣೆ ಆಚರಿಸಿದ ನಂತರ ಮಾರನೆಯ ದಿನ ಸಚಿನ್​ ಅಂತ್ಯಕ್ರಿಯೆ ನಡೆಸಲಾಗಿದೆ. ಸಚಿನ್ ಗುಣವಂತ್ ರಾವ್ ಮತ್ತು ಲಲಿತಾ ದಂಪತಿಯ ಕಿರಿಯ ಮಗ. ಆತ ಇತ್ತೀಚೆಗೆ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, 7.7 ಗ್ರೇಡ್​ ಗಳಿಸಿದ್ದ ಎಂದು ತಿಳಿದುಬಂದಿದೆ.
ಯುವಜನತೆಯಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ


ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಧೂಮಪಾನದಂತಹ ವ್ಯಸನ, ಒತ್ತಡದ ಜೀವನದಿಂದ 50 ವರ್ಷದೊಳಗಿನವರು ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಹೃದ್ರೋಗ ತಜ್ಞರ ಅಭಿಪ್ರಾಯವಾಗಿದೆ. ಬದಲಾದ ಜೀವನ ಶೈಲಿಯಿಂದ ಹೃದಯದ ಆರೋಗ್ಯವು ಹಂತ ಹಂತವಾಗಿ ಕ್ಷೀಣಿಸುತ್ತಿದೆ. ಹೃದಯದ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿದಾಗ ಹೃದಯಾಘಾತ ಸಂಭವಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ, ಧೂಮಪಾನ, ಮಾದಕ ವಸ್ತು ಸೇವನೆ, ಒತ್ತಡದ ಜೀವನ, ವಾಯುಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಹೃದಯಾಘಾತ ಸಂಭವಿಸುತ್ತಿದೆ. ಅನುವಂಶೀಯತೆಯಿಂದಲೂ ಕೆಲವರಿಗೆ ಹೃದಯಾಘಾತವಾಗುತ್ತದೆ.

top videos
    First published: