ದೇಶದ 16 ರಾಜ್ಯಗಳಲ್ಲಿ ಭಾರೀ ಮಳೆ; ಕೇರಳದಲ್ಲಿ ರೆಡ್​ ಆಲರ್ಟ್​

news18
Updated:August 12, 2018, 4:36 PM IST
ದೇಶದ 16 ರಾಜ್ಯಗಳಲ್ಲಿ ಭಾರೀ ಮಳೆ; ಕೇರಳದಲ್ಲಿ ರೆಡ್​ ಆಲರ್ಟ್​
news18
Updated: August 12, 2018, 4:36 PM IST
ನ್ಯೂಸ್​ 18 

ಬೆಂಗಳೂರು (ಆ.12): ದಾಖಲೆ ಪ್ರಮಾಣದ ಮಳೆಗೆ ದೇಶ ಈ ಬಾರಿ ಸಾಕ್ಷಿಯಾಗಿದೆ. ದಕ್ಷಿಣ ಭಾರತದ ಕರ್ನಾಟಕ, ಕೇರಳ ಸೇರಿದಂತೆ ಉತ್ತರ ಭಾರತದ ದೆಹಲಿ, ಉತ್ತರ ಪ್ರದೇಶ, ಸಿಕ್ಕಿಂ, ಅಸ್ಸಾಂ ಸೇರಿದಂತೆ 16 ರಾಜ್ಯಗಳಲ್ಲಿ ಮಳೆ ತನ್ನ ರೌದ್ರವತಾರವನ್ನು ತೋರಿಸಿದೆ.

ಕೇರಳದಲ್ಲಿ ಭಾರೀ ಅನಾಹುತ ಸೃಷ್ಟಿಸಿರುವ ಮಳೆಗೆ ಈವರೆಗೆ 37 ಜನ ಸಾವನ್ನಪ್ಪಿದ್ದಾರೆ. ಇನ್ನೆರಡು ದಿನದ ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದ್ದಾರೆ.

ಅತಿ ಹೆಚ್ಚಿನ ಮಳೆ ಬೀಳುವ ಪ್ರದೇಶದಲ್ಲಿ ಈಗಾಗಲೇ ರೆಡ್​ ಆಲರ್ಟ್ ಘೋಷಿಸಲಾಗಿದೆ. ಉತ್ತರ ಖಂಡದ ಕೆಲವು ಭಾಗಗಳಲ್ಲಿ ಸೋಮವಾರ ಕೂಡ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಎನ್​ಡಿಎಂಎ ತಿಳಿಸಿದೆ.

ಉತ್ತರಖಂಡ, ಹಿಮಾಲಯದ ವ್ಯಾಪ್ತಿಯಲ್ಲಿ ಬರುವ ಪಶ್ಚಿಮ ಬಂಗಾಳ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಚತ್ತೀಸ್​ಗಢ. ಬಿಹಾರ, ಜಾರ್ಖಂಡ್​, ಒಡಿಶಾ, ಹಿಮಾಚಲ ಪ್ರದೇಶ, ಸಿಕ್ಕಿಂ, ಬಿಹಾರ, ಒಡಿಶಾ, ಅರುಣಾಚಲ ಪ್ರದೇಶ, ಅಸ್ಸಾ., ಮೇಘಾಲಯ, ಆಂಧ್ರ ಪ್ರದೇಶ ಗಡಿಭಾಗ, ಕರ್ನಾಟಕ ಕರಾವಳಿ, ತಮಿಳುನಾಡು ಮತ್ತು ಕೇರಳದಲ್ಲಿ ಇನ್ನು ಎರಡು ದಿನ ಮಳೆ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರಿಯ ಮಾನ್ಸೂನ್​ನಲ್ಲಿ 7ರಾಜ್ಯಗಳಲ್ಲಿ 718 ಮಂದಿ  ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಗೃಹ ಇಲಾಖೆ ರಾಷ್ಟ್ರೀಯ ತುರ್ತು ನಿರ್ವಹಣಾ ಕೇಂದ್ರದ ಅಂಕಿ ಅಂಶದ ಪ್ರಕಾರ  ಉತ್ತರ ಪ್ರದೇಶದಲ್ಲಿ 171, ಪಶ್ಚಿಮ ಬಂಗಾಳದಲ್ಲಿ 170, ಮಹಾರಾಷ್ಟ್ರ 139, ಗುಜರಾತ್​ನಲ್ಲಿ 52, ಅಸ್ಸಾಂನಲ್ಲಿ 44, ನಾಗಲ್ಯಾಂಡ್​ನಲ್ಲಿ 8 ಮಂದಿ ಮಳೆಯಿಂದಾದ ಅನಾಹುತಕ್ಕೆ ಪ್ರಾಣ ಕಳೆದು ಕೊಂಡಿದ್ದಾರೆ.

ಮಳೆಯಿಂದಾಗಿ ಕೇರಳದಲ್ಲಿ 26 ಮಂದಿ  ನಾಪತ್ತೆಯಾಗಿದ್ದರೆ, ಪಶ್ಚಿಮ ಬಂಗಾಳ 244 ಮಂದಿ ಮಳೆಯಿಂದಾಗಿ ಹಾನಿಗೊಂಡಿದ್ದಾರೆ.
Loading...

26 ವರ್ಷಗಳ ಬಳಿಕ ಭರ್ತಿಗೊಂಡ ಇಡುಕ್ಕಿ ಜಲಾಶಯದ ಕ್ರೇಸ್ಟ್​ ಗೇಟ್ ತೆರೆದ ಬಳಿಕವಂತೂ ಕೇರಳದಲ್ಲಿ ಹಾನಿ ಹೆಚ್ಚಾಗಿದೆ. ಜಲಾಶಯದಲ್ಲಿ ಅತಿ ಹೆಚ್ಚು ನೀರು ಬರುತ್ತಿರುವ ಹಿನ್ನಲೆ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಇಡುಕ್ಕಿ, ವೈನಾಡು, ಕಣ್ಣೂರು, ಎರ್ನಕುಲಂ, ಪಲಕ್ಕಡು, ಮಲಪುರಂ ಪ್ರದೇಶದಲ್ಲಿ ರೆಡ್​ ಆಲರ್ಟ್​ ಘೋಷಣೆ ಮಾಡಲಾಗಿದೆ. ​

 
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...