Plane Crashes In Russia: ರಷ್ಯಾದಲ್ಲಿ ವಿಮಾನ ಪತನಗೊಂಡು 16 ಮಂದಿ ದುರ್ಮರಣ; ಅವಘಡಕ್ಕೆ ಅದೇ ಕಾರಣ!

ರಷ್ಯಾದ ವಿಮಾನಗಳಲ್ಲಿ ಸುಧಾರಣೆ ತರಲಾಗುತ್ತಿದ್ದರೂ, ದೂರ ದೂರ ಪ್ರದೇಶಗಳಲ್ಲಿ ಅವಧಿ ಮೀರಿದ ವಿಮಾನಗಳನ್ನು ಹಾರಾಟ ನಡೆಸಲಾಗುತ್ತಿದೆ. ಇದರಿಂದ ರಷ್ಯಾ ಸಾಲು ಸಾಲು ವಿಮಾನ ಪತನಗಳು ಮರುಕುಳಿಸುತ್ತಿವೆ.

ಪತನಗೊಂಡ ವಿಮಾನದ ಅವಶೇಷ

ಪತನಗೊಂಡ ವಿಮಾನದ ಅವಶೇಷ

 • Share this:
  ಮಾಸ್ಕೋ: ರಷ್ಯಾದ ಟಟರಸ್ತಾನದಲ್ಲಿ (Republic of Tatarstan in central Russia) ವಿಮಾನ ಪತನಗೊಂಡಿದ್ದು, 16 ಜನರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಎಮೆರ್ಜೆನ್ಸಿ ಸರ್ವಿಸ್ ಸ್ಪುಟ್ನಿಕ್ ಪ್ರಕಾರ ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಜನರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ವಿಮಾನದಲ್ಲಿ ಪ್ಯಾರಾಚೂಟ್ ಜಂಪರ್ ಗಳು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಎಲ್-410 ( L-410 plan) ಟ್ಯಾಬ್ಲೆಟ್ ವಿಮಾನ ಪತನಗೊಂಡಿದ್ದು, ಇದು ಎರಡು ಇಂಜಿನ್ ಹೊಂದಿರುವ  ಶಾರ್ಟ್ ರೇಂಜ್ ಟ್ರಾನ್ಸಫೋರ್ಟ್ ವಿಮಾನ ಇದಾಗಿದೆ. ಕಳೆದ ಕೆಲ ವರ್ಷಗಳಲ್ಲಿ ರಷ್ಯಾ (Russia) ವಿಮಾನಯಾನ ಸುಧಾರಿಸಿದ್ರೂ, ಆಗಾಗ ಹಳೆಯ ಮಾಡೆಲ್ ವಿಮಾನಗಳು ಪತನವಾಗುತ್ತಿರುತ್ತಿವೆ.

  ಇಬ್ಬರು ಪೈಲಟ್ ಸೇರಿದಂತೆ 16 ಜನರ ಸಾವಾಗಿದೆ. ಪ್ಲೇನ್ ಟೇಕಾಪ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಯ್ತು. ಭೂಮಿಗೆ ಬೀಳುತ್ತಿದ್ದಂತೆ ವಿಮಾನ ಛಿದ್ರವಾಯ್ತು. ಪತನದ ತೀವ್ರತೆ ಎಷ್ಟಿತ್ತು ಅಂದ್ರೆ ವಿಮಾನದ ಟೇಲ್ ಭಾಗವೇ ಕಾಣಿಸುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಹಳೆಯ ವಿಮಾನ ಆಗಿದ್ದರಿಂದಲೇ ದುರಂತ ಸಂಭವಿಸಿದ ಎಂದು ಅನುಮಾನಿಸಲಾಗಿದೆ. ಎಲ್-410 ಮಾಡೆಲ್ ಈ ವಿಮಾನ ಸಣ್ಣ ಲೋಕಲ್ ಏರೋ ಪ್ಲೇನ್ ಆಗಿತ್ತು. ಟ್ವಿನ್ ಇಂಜಿನ್ ಹೊಂದಿರುವ ಶಾರ್ಟ್ ರೇಂಜ್ ಟರ್ಬೋ ಏರ್ ಕ್ರಾಫ್ಟ್ ಗೆ ಚೆಕ್ ರಿಪಬ್ಲಿಕ್ 1970ರಲ್ಲಿ ಹಾರಾಟಕ್ಕೆ ಅನುಮತಿ ನೀಡಿತ್ತು.

  ಸೆಪ್ಟೆಂಬರ್ ನಲ್ಲಿ ನಡೆದ ದುರಂತದಲ್ಲಿ ಆರು ಸಾವು

  ಕಳೆದ ತಿಂಗಳು ರಷ್ಯಾದಲ್ಲಿ ಎಂಟೋನೋವಾ An-26 ಟ್ರಾನ್ಸ್ ಪೋರ್ಟ್ ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿದ್ದರು. ಇದೇ ವರ್ಷ ಜುಲೈನಲ್ಲಿ ಕಾಮಾಚಟ್ಕಾ ವ್ಯಾಪ್ತಿಯಲ್ಲಿ ನಡೆದ ಎಂಟೋನೋವಾ An-26 ಟ್ರಾನ್ಸ್ ಪೋರ್ಟ್ ವಿಮಾನ ಪತನಗೊಂಡು 28 ಮಂದಿ ಸಾವನಪ್ಪಿದ್ದರು. ರಷ್ಯಾದ ವಿಮಾನಗಳಲ್ಲಿ ಸುಧಾರಣೆ ತರಲಾಗುತ್ತಿದ್ದರೂ, ದೂರ ದೂರ ಪ್ರದೇಶಗಳಲ್ಲಿ ಅವಧಿ ಮೀರಿದ ವಿಮಾನಗಳನ್ನು ಹಾರಾಟ ನಡೆಸಲಾಗುತ್ತಿದೆ. ಇದರಿಂದ ರಷ್ಯಾ ಸಾಲು ಸಾಲು ವಿಮಾನ ಪತನಗಳು ಮರುಕುಳಿಸುತ್ತಿವೆ.

  ಇದನ್ನೂ ಓದಿ: Mother Kills her Children: ಅತ್ತೆ ಜೊತೆ ಭಯಂಕರ ಜಗಳ; ತನ್ನಿಬ್ಬರು ಗಂಡು ಮಕ್ಕಳಿಗೆ ಬೆಂಕಿಯಿಟ್ಟ ಸೊಸೆ!

  ರಷ್ಯಾದ ವಿಮಾನ ದುರಂತಗಳು:

  * 2020ರಲ್ಲಿ ದಕ್ಷಿಣ ಸೂಡಾನ್ ನ ಜೂಬಾ ವಿಮಾನನಿಲ್ದಾಣದಲ್ಲಿ ಸೌಥ್-ವೆಸ್ಟ್ ಏವಿಯೇಷನ್ An-26 ಟರ್ಬೋಪ್ರಾಪ್ ವಿಮಾನ  ಪತನಗೊಂಡಿತ್ತು.

  *2020 ಸೆಪ್ಟೆಂಬರ್ ನಲ್ಲಿ ಯುಕ್ರೇನ್ ಪೂರ್ವ ಭಾಗದ ಚುಗಯ್ವೆಯಲ್ಲಿ ಲ್ಯಾಂಡ್ ಆಗುತ್ತಿದ್ದ ವಿಮಾನ ದುರಂತಕ್ಕೀಡಾಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 28 ಪ್ರಯಾಣಿಕರ ಪೈಕಿ 22 ಜನರು ಸಾವನ್ನಪ್ಪಿದ್ದರು.

  * 2019ರಲ್ಲಿ ಫ್ಲೈಗ್ ಕ್ಯಾರಿಯರ್ ಏರ್ ಲೈನ್ಸ್ Aeroflot ವಿಮಾನ ಸುಖೋಯಿ ಸೂಪರ್ ಜೆಟ್ ಮಾಸ್ಕೋ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿರುವಾಗ ಕ್ರ್ಯಾಶ್ ಆಗಿ ಬೆಂಕಿ ಹತ್ತಿಕೊಂಡಿತ್ತು. ಇದರಲ್ಲಿದ್ದ 41 ಪ್ರಯಾಣಿಕರು ಸಾವಿನ ಮನೆ ಸೇರಿದ್ದರು.

  * ಫೆಬ್ರವರಿ 2018ಲ್ಲಿ ಸಾರ್ಟೋವಾ ಏರ್ ಲೈನ್ಸ್ 148 ಏರ್ ಕ್ರಾಫ್ಟ್ ಪತನವಾಗಿತ್ತು. ಟೇಕಾಫ್ ಆಗುತ್ತಿದ್ದಂತೆ ಪತನವಾಗಿದ್ದ ವಿಮಾನದಲ್ಲಿದ್ದ ಎಲ್ಲ 71 ಪ್ರಯಾಣಿಕರು ಜೀವ ಕಳೆದುಕೊಂಡಿದ್ದರು.

  ವರದಿ: ಮೊಹ್ಮದ್​ ರಫೀಕ್​ ಕೆ 
  Published by:Kavya V
  First published: