16-15-12 ಸೂತ್ರದಂತೆ ಶಿವಸೇನೆ ಜೊತೆಗೆ ಸರ್ಕಾರ ರಚಿಸಲು ಎನ್​ಸಿಪಿ-ಕಾಂಗ್ರೆಸ್ ಚಿಂತನೆ

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ನಾಯಕರಾದ ಫ್ರಫುಲ್ ಪಟೇಲ್, ಸುನೀಲ್ ತಾಟ್ಕರೆ, ಅಜಿತ್ ಪವಾರ್, ಜಯಂತ್ ಪಾಟೀಲ್ ಎನ್​ಸಿಪಿ ನಾಯಕರು ಸಭೆ ಸೇರಿ, ಶಿವಸೇನೆ ಜೊತೆ ಸೇರಿ ರಾಜ್ಯದಲ್ಲಿ ಸರ್ಕಾರ ರಚನೆ ಸಂಬಂಧ ಇರುವ ಆಯ್ಕೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

HR Ramesh | news18-kannada
Updated:November 20, 2019, 6:10 PM IST
16-15-12 ಸೂತ್ರದಂತೆ ಶಿವಸೇನೆ ಜೊತೆಗೆ ಸರ್ಕಾರ ರಚಿಸಲು ಎನ್​ಸಿಪಿ-ಕಾಂಗ್ರೆಸ್ ಚಿಂತನೆ
ಶರದ್ ಪವಾರ್, ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ
  • Share this:
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದರೂ ಸರ್ಕಾರ ರಚನೆಯ ಹಗ್ಗಜಗ್ಗಾಟ ಮುಂದುವರೆದಿದೆ. ಅಧಿಕಾರ ಹಂಚಿಕೆ ವಿಚಾರವಾಗಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ನಡುವೆ ವೈಮನಸ್ಸು ಉಂಟಾದ ಕಾರಣ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಯೊಂದಿಗೆ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದೆ. ಇದೀಗ ಮೂರು ಪಕ್ಷಗಳ ನಡುವೆ ಮಾತುಕತೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. 

ಬಿಕ್ಕಟ್ಟಿನ ನಡುವೆಯೂ ಎಲ್ಲರ ಕಣ್ಣು ಇದೀಗ ಎನ್​ಸಿಪಿ ಮತ್ತು ಕಾಂಗ್ರೆಸ್ ನಡುವೆ ನಡೆಯಲಿರುವ ಮಹತ್ವದ ಮಾತುಕತೆಯತ್ತ ನೆಟ್ಟಿದ್ದು, ಸೈದ್ಧಾಂತಿಕವಾಗಿ ವಿರುದ್ಧವಾಗಿರುವ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೇ ಬೇಡವೇ ಎಂಬ ವಿಷಯವಾಗಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.ಅಷ್ಟೇ ಅಲ್ಲದೇ, 16-15-12 ಆಧಾರದಲ್ಲಿ ಮುಖ್ಯಮಂತ್ರಿ ಸ್ಥಾನವೂ ಸೇರಿದಂತೆ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದೇ ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಶಿವಸೇನೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿತ್ತು.

ಮೂಲಗಳ ಪ್ರಕಾರ, ಈ ಸೂತ್ರದಂತೆ 16 ಸ್ಥಾನ ಶಿವಸೇನೆಗೆ 15 ಸಚಿವ ಸ್ಥಾನ ಎನ್​ಸಿಪಿಗೆ ಮತ್ತು 12 ಸ್ಥಾನಗಳು ಕಾಂಗ್ರೆಸ್​ಗೆ. ಜೊತೆಗೆ ಮುಖ್ಯಮಂತ್ರಿ ಸ್ಥಾನವನ್ನು ಎನ್​ಸಿಪಿಯೂ ಶಿವಸೇನೆ ಜೊತೆಗೆ 2.5 ವರ್ಷ ಸಮಾನಾಗಿ ಹಂಚಿಕೊಳ್ಳುವುದು. ಈ ಒಪ್ಪಂದಕ್ಕೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ ಅಥವಾ ಎನ್​ಸಿಪಿಗೆ ಹೋಗಲಿದೆ.

ಇದನ್ನು ಓದಿ: ರಾಜ್ಯಸಭೆಯಲ್ಲಿ ಸೀಟು ಬದಲಾವಣೆಗೆ ಅಸಮಾಧಾನ ವ್ಯಕ್ತಪಡಿಸಿದ ಉಪರಾಷ್ಟ್ರಪತಿಗೆ ಪತ್ರ ಬರೆದ ಶಿವಸೇನೆ ನಾಯಕ ಸಂಜಯ್ ರಾವತ್

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ನಾಯಕರಾದ ಫ್ರಫುಲ್ ಪಟೇಲ್, ಸುನೀಲ್ ತಾಟ್ಕರೆ, ಅಜಿತ್ ಪವಾರ್, ಜಯಂತ್ ಪಾಟೀಲ್ ಎನ್​ಸಿಪಿ ನಾಯಕರು ಸಭೆ ಸೇರಿ, ಶಿವಸೇನೆ ಜೊತೆ ಸೇರಿ ರಾಜ್ಯದಲ್ಲಿ ಸರ್ಕಾರ ರಚನೆ ಸಂಬಂಧ ಇರುವ ಆಯ್ಕೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

First published: November 20, 2019, 6:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading