• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Today in History: ಫೆಬ್ರವರಿ 15 ಸಾಮಾನ್ಯ ದಿನವಲ್ಲ, ಜಗತ್ತಿನಾದ್ಯಂತ ಹತ್ತಾರು ಮಹತ್ವದ ಘಟನೆಗಳು ನಡೆದ ಅಪರೂಪದ ದಿನ!

Today in History: ಫೆಬ್ರವರಿ 15 ಸಾಮಾನ್ಯ ದಿನವಲ್ಲ, ಜಗತ್ತಿನಾದ್ಯಂತ ಹತ್ತಾರು ಮಹತ್ವದ ಘಟನೆಗಳು ನಡೆದ ಅಪರೂಪದ ದಿನ!

ಇತಿಹಾಸದಲ್ಲಿ ಈ ದಿನ

ಇತಿಹಾಸದಲ್ಲಿ ಈ ದಿನ

ಪ್ರತಿಯೊಂದು ದಿನವೂ ಕೂಡ ಆಯಾ ದಿನ ಸಂಭವಿಸುವ ಐತಿಹಾಸಿಕ ಘಟನೆಗಳ ಕಾರಣಕ್ಕೆ ವರ್ತಮಾನದಲ್ಲಿ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಮಹತ್ವದ ಘಟನೆಗಳು ವರ್ತಮಾನದಲ್ಲಿ ಶಾಲಾ ಕಾಲೇಜುಗಳ ಪಾಠಗಳಲ್ಲೋ ಅಥವಾ ಇನ್ಯಾವುದೋ ಕಾರಣಗಳಿಗೆ ನಾವು ತಿಳಿಯುವ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ ಫೆಬ್ರವರಿ 15 ಕೂಡ ಸಾಮಾನ್ಯ ದಿನವಲ್ಲ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Share this:

ಪ್ರತಿದಿನ ಹೊಸ ದಿನ.. ಒಂದೊಂದು ದಿನವೂ ಒಬೊಬ್ಬರ ಪಾಲಿಗೆ ಇತಿಹಾಸದಲ್ಲಿ (History) ಅಚ್ಚಳಿಯದ ನೆನಪನ್ನು ಸೃಷ್ಟಿಸುತ್ತವೆ. ವಿಶ್ವ ಇತಿಹಾಸದಲ್ಲಿ ಪ್ರತಿದಿನಕ್ಕೂ ಅದರದ್ದೇ ಆದ ಒಂದು (Today In History) ನೆನಪು, ಮೌಲ್ಯ, ದಿನ ಎಲ್ಲವೂ ಇರುತ್ತದೆ. ಮಹಾತ್ಮರು ಹುಟ್ಟಿದ ದಿನವಾಗಿರಬಹುದು, ಅವರು ಐಕ್ಯವಾಗಿರಬಹುದು, ಇಲ್ಲ ಇನ್ಯಾವುದೋ ಸಾಧನೆ ಮಾಡಿದ ದಿನವಾಗಿರಬಹುದು. ಹೀಗೆ ಪ್ರತಿ ದಿನವೂ ಒಂದಲ್ಲ ಒಂದು ನೆನಪನ್ನು ಮರುಕಳಿಸುತ್ತದೆ.


ಹಾಗಾದರೆ ವಿಶ್ವ ಇತಿಹಾಸದಲ್ಲಿ ಫೆಬ್ರವರಿ 15 ರಂದು ಏನೆಲ್ಲಾ ನಡೆದಿದೆ. ಯಾವ ಕಾರಣಕ್ಕೆ ನಾವು ಈ ದಿನವನ್ನು ನೆನಪಿಸಿಕೊಳ್ಳಬಹುದು ಎಂಬುದನ್ನು ವಿವರವಾಗಿ ನೋಡೋಣ.


ಇದನ್ನೂ ಓದಿ: Today In History: ಫೆ 14 ಪ್ರೇಮಿಗಳ ದಿನವಷ್ಟೇ ಅಲ್ಲ, ಇನ್ನೂ ಇದೆ ಹತ್ತಾರು ಮಹತ್ವದ ಘಟನೆಗಳು! ಇಲ್ಲಿದೆ ಈ ದಿನದ ವಿಶೇಷ


ಜನ್ಮ ವಾರ್ಷಿಕೋತ್ಸವ
ಮೊದಲಿಗೆ ಭಾರತೀಯ ಇತಿಹಾಸದಲ್ಲಿ ಫೆಬ್ರವರಿ 15 ರಂದು ಜನಿಸಿದ ಮಹಾತ್ಮರ ಬಗ್ಗೆ ತಿಳಿಯೋಣ.


ರಾಧಾ ಕೃಷ್ಣ ಚೌಧರಿ (15 ಫೆಬ್ರವರಿ 1921 - 15 ಮಾರ್ಚ್ 1985)
ಬಿಹಾರದ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರಾದ ರಾಧಾ ಕೃಷ್ಣ ಚೌಧರಿ ಇತಿಹಾಸಕಾರ ಮತ್ತು ಚಿಂತಕರು ಹೌದು. ಚೌಧರಿಯವರು ಬಿಹಾರದ ಐತಿಹಾಸಿಕ ಮತ್ತು ಪುರಾತತ್ವ ಅಧ್ಯಯನ ಹಾಗೂ ಮೈಥಿಲಿ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಅವರು ಬಿಹಾರದ ಇತಿಹಾಸದಲ್ಲಿ ಅನೇಕ ಮೂಲ ಪ್ರಬಂಧಗಳನ್ನು ಸಹ ಬರೆದು ಪ್ರಕಟಿಸಿದರು.


ನರೇಶ್ ಮೆಹ್ತಾ (15 ಫೆಬ್ರವರಿ 1922 - 22 ನವೆಂಬರ್ 2000)
ಬ್ರಿಟಿಷ್ ಭಾರತದ ಶಾಜಾಪುರದಲ್ಲಿ ಜನಿಸಿದ ನರೇಶ್ ಮೆಹ್ತಾ ಪ್ರಸಿದ್ಧ ಹಿಂದಿ ಕವಿ ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ ಉನ್ನತ ಬರಹಗಾರರಲ್ಲಿ ಒಬ್ಬರು. ಅವರು ಆಧುನಿಕ ಕಾವ್ಯಕ್ಕೆ ಹೊಸ ಸೊಗಸಿನೊಂದಿಗೆ ಹೊಸ ಆಯಾಮ ನೀಡಿದವರಲ್ಲಿ ಪ್ರಮುಖರು. ನರೇಶ್ ಮೆಹ್ತಾ ಅವರು ಇಂದೋರ್‌ನಿಂದ ಪ್ರಕಟವಾದ ‘ಚೌತಾ ಸಂಸಾರ್’ ಹಿಂದಿ ದಿನಪತ್ರಿಕೆಯನ್ನೂ ಸಂಪಾದಿಸಿದ್ದಾರೆ.


ಕೆ ಜಿ ಸುಬ್ರಹ್ಮಣ್ಯಂ (15 ಫೆಬ್ರವರಿ 1924 - 29 ಜೂನ್ 2016)
ಕೆ ಜಿ ಸುಬ್ರಹ್ಮಣ್ಯಂ ಒಬ್ಬ ಭಾರತೀಯ ಶಿಲ್ಪಿ ಮತ್ತು ಮ್ಯೂರಲಿಸ್ಟ್. ಭಾರತೀಯ ಆಧುನಿಕ ಕಲೆಯ ಪ್ರವರ್ತಕರಲ್ಲಿ ಸುಬ್ರಹ್ಮಣ್ಯಂ ಅಗ್ರಗಣ್ಯ ಸ್ಥಾನ ಹೊಂದಿದವರು.


ರಾಧಾವಲ್ಲಭ ತ್ರಿಪಾಠಿ
15 ಫೆಬ್ರವರಿ 1949 ರಂದು ಮಧ್ಯಪ್ರದೇಶದ ರಾಜ್ಗಢದಲ್ಲಿ ಜನಿಸಿದ ರಾಧಾವಲ್ಲಭ ತ್ರಿಪಾಠಿ ಸಂಸ್ಕೃತ ಭಾಷೆಯ ಪ್ರಖ್ಯಾತ ಸಾಹಿತಿ. ಹಲವು ಕಾವ್ಯ, ಸಂಕಲನಗಳನ್ನು ರಚಿಸಿದ್ದಾರೆ.


ಇವರ ‘ಸಂಧಾನಂ’ ಕವನ ಸಂಕಲನಕ್ಕಾಗಿ 1994 ರಲ್ಲಿ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ನೀಡಲಾಯಿತು. ರಾಧಾ ವಲ್ಲಭ ತ್ರಿಪಾಠಿ ಸಂಸ್ಕೃತಕ್ಕೆ ಆಧುನಿಕತೆಯ ಸಂಸ್ಕೃತಿಯನ್ನು ನೀಡಿದ ವಿದ್ವಾಂಸ ಮತ್ತು ಹಿಂದಿಯ ಸಮೃದ್ಧ ಬರಹಗಾರ ಮತ್ತು ಕಥೆಗಾರರಲ್ಲಿ ಪ್ರಮುಖರು.


ಇದನ್ನೂ ಓದಿ: Valentine’s Day: ಇತಿಹಾಸದಲ್ಲೇ ಪ್ರಸಿದ್ಧವಾದ 10 ಶ್ರೇಷ್ಠ ಪ್ರೇಮಕಥೆಗಳಿವು!


ಸಂಸ್ಮರಣೆ


ಭಾರತೀಯ ಇತಿಹಾಸದಲ್ಲಿ ಫೆಬ್ರವರಿ 15 ಅನ್ನು ಈ ಕೆಳಗಿನ ವ್ಯಕ್ತಿಗಳ ಮರಣದ ದಿನವನ್ನಾಗಿ ಆಚರಿಸಲಾಗುತ್ತದೆ:


ಗಾಲಿಬ್ ಅಲಿಯಾಸ್ ಮಿರ್ಜಾ ಅಸಾದುಲ್ಲಾ ಬೇಗ್ ಖಾನ್ (27 ಡಿಸೆಂಬರ್ 1797 - 15 ಫೆಬ್ರವರಿ 1869)
ಮಿರ್ಜಾ ಗಾಲಿಬ್ ಎಂದೇ ಖ್ಯಾತನಾಮ ಪಡೆದಿರುವ ಇವರು ಸಾರ್ವಕಾಲಿಕ ಶ್ರೇಷ್ಠ ಉರ್ದು-ಪರ್ಷಿಯನ್ ಕವಿ. ಭಾರತೀಯ ಭಾಷೆಯಲ್ಲಿ ಪರ್ಷಿಯನ್ ಕಾವ್ಯದ ಹರಿವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಆಗ ಪ್ರಕಟವಾಗದ ಗಾಲಿಬ್ ಬರೆದ ಪತ್ರಗಳೂ ಉರ್ದು ಬರವಣಿಗೆಯ ಪ್ರಮುಖ ದಾಖಲೆಗಳೆಂದು ಪರಿಗಣಿಸಲಾಗಿದೆ. ಗಾಲಿಬ್ ಭಾರತ ಮತ್ತು ಪಾಕಿಸ್ತಾನದ ಪ್ರಮುಖ ಕವಿ.


ದಬೀರ್-ಉಲ್-ಮುಲ್ಕ್ ಮತ್ತು ನಜ್ಮ್-ಉದ್-ದೌಲಾ ಎಂಬ ಬಿರುದನ್ನು ಸಹ ಪಡೆದಿದ್ದರು. ಗಾಲಿಬ್ ನವಾಬಿ ಕುಟುಂಬಕ್ಕೆ ಸೇರಿದ್ದರು ಮತ್ತು ಮೊಘಲ್ ಆಸ್ಥಾನದಲ್ಲಿ ಉನ್ನತ ಸ್ಥಾನಮಾನವನ್ನು ಪಡೆದಿದ್ದರು. ಅವರು ಫೆಬ್ರವರಿ 15, 1869 ರಂದು ನಿಧನ ಹೊಂದಿದರು.


ಸುಭದ್ರಾ ಕುಮಾರಿ ಚೌಹಾಣ್ (16 ಆಗಸ್ಟ್ 1904 - 15 ಫೆಬ್ರವರಿ 1948)
ಸುಭದ್ರಾ ಕುಮಾರಿ ಚೌಹಾಣ್ ಪ್ರಸಿದ್ಧ ಹಿಂದಿ ಕವಯಿತ್ರಿ ಮತ್ತು ಲೇಖಕಿ. ಇವರ ಸಾಹಿತ್ಯ ಬದುಕಿನಲ್ಲಿ 'ಝಾನ್ಸಿ ಕಿ ರಾಣಿ' ಕವಿತೆ ಇವರಿಗೆ ಹೆಚ್ಚು ಪ್ರಸಿದ್ಧಿಯನ್ನು ನೀಡಿತು.


ಲೇಖಕಿಯಾದ ಇವರು ಅನೇಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ. ಸೆರೆಮನೆಯಲ್ಲಿ ಅನುಭವಿಸಿದ ಎಲ್ಲಾ ನೋವು, ಅನುಭವಗಳನ್ನು ಇವರ ಪುಸ್ತಕದಲ್ಲಿ ಕಾಣಬಹುದು. ಸುಭದ್ರಾ ಕುಮಾರಿ ಫೆಬ್ರವರಿ 15, 1948 ರಂದು ನಿಧನರಾದರು


ಭಾರತೀಯ ಮತ್ತು ವಿಶ್ವ ಇತಿಹಾಸದಲ್ಲಿ ಫೆಬ್ರವರಿ 15 ರಂದು ನಡೆದ ಪ್ರಮುಖ ಘಟನೆಗಳು


  • 15 ಫೆಬ್ರವರಿ 1564 - ಮಹಾನ್ ಖಗೋಳಶಾಸ್ತ್ರಜ್ಞ ಗೆಲಿಲಿಯೋ ಜನಿಸಿದರು

  • 15 ಫೆಬ್ರವರಿ 1677 - ಇಂಗ್ಲಿಷ್ ರಾಜ ಚಾರ್ಲ್ಸ್ II ಫ್ರಾನ್ಸ್ ವಿರುದ್ಧ ಡಚ್ಚರೊಂದಿಗೆ ಮೈತ್ರಿ ಮಾಡಿಕೊಂಡರು.

  • 15 ಫೆಬ್ರವರಿ 1763 - ಆಸ್ಟ್ರೇಲಿಯಾ ಮತ್ತು ಪರ್ಷಿಯಾ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

  • 15 ಫೆಬ್ರವರಿ 1764 - ಅಮೆರಿಕಾದಲ್ಲಿ ಸೇಂಟ್ ಲೂಯಿಸ್ ನಗರವನ್ನು ಸ್ಥಾಪಿಸಲಾಯಿತು.

  • 15 ಫೆಬ್ರವರಿ 1798 - ಫ್ರಾನ್ಸ್ ರೋಮ್ ಅನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಅದನ್ನು ಗಣರಾಜ್ಯವೆಂದು ಘೋಷಿಸಿತು.

  • 15 ಫೆಬ್ರವರಿ 1806 - ಫ್ರಾಂಕೋ-ಪರ್ಷಿಯಾ ಒಪ್ಪಂದ.

  • 15 ಫೆಬ್ರವರಿ 1845 - ಅಮೇರಿಕನ್ ವಕೀಲ, ರಿಪಬ್ಲಿಕನ್ ರಾಜಕಾರಣಿ, ರಾಜಕಾರಣಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಎಲಿಹು ರೂಟ್ ಜನಿಸಿದ ದಿನ.

  • 15 ಫೆಬ್ರವರಿ 1861 - ಸ್ವಿಸ್ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಚಾರ್ಲ್ಸ್ ಎಡ್ವರ್ಡ್ ಗುಯಿಲೌಮ್ ಜನ್ಮದಿನ

  • 15 ಫೆಬ್ರವರಿ 1873 - ಜರ್ಮನ್ ಮೂಲದ ಸ್ವೀಡಿಷ್ ಜೀವ ರಸಾಯನ ಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಹ್ಯಾನ್ಸ್ ವಾನ್ ಯೂಲರ್ ಚೆಲ್ಪಿನ್ ಜನ್ಮದಿನ

  • ಫೆಬ್ರವರಿ 15, 1903 - ಈ ದಿನದಂದು ವಿಶ್ವ ಪ್ರಸಿದ್ಧವಾದ ನೆಚ್ಚಿನ ಮೃದುವಾದ ಆಟಿಕೆ ಟೆಡ್ಡಿ ಬೇರ್ ಅನ್ನು ಮೋರಿಸ್ ಮಿಚ್ಟಮ್ ಮಾರುಕಟ್ಟೆಗೆ ಪರಿಚಯಿಸಿದರು.

  • 15 ಫೆಬ್ರವರಿ 1920 - ಅನ್ನಿ ಕ್ಯಾತ್ ವೆಸ್ಟ್ಲಿ, ಮಕ್ಕಳ ಸಾಹಿತ್ಯದ ನಾರ್ವೇಜಿಯನ್ ಲೇಖಕಿ ಹುಟ್ಟಿದ ದಿನ.

  • 15 ಫೆಬ್ರವರಿ 1926 - US ನಲ್ಲಿ ಒಪ್ಪಂದದ ಏರ್‌ಮೇಲ್ ಸೇವೆ ಪರಿಚಯವಾದ ದಿನ

  • 15 ಫೆಬ್ರವರಿ 1942 - ವಿಶ್ವ ಸಮರ II ರ ಸಮಯದಲ್ಲಿ ಸಿಂಗಾಪುರವು ಜಪಾನಿನ ಸೈನ್ಯಕ್ಕೆ ಈ ದಿನದಂದು ಶರಣಾಯಿತು.

  • 15 ಫೆಬ್ರುವರಿ 1944 - ನೂರಾರು ಬ್ರಿಟಿಷ್ ವಿಮಾನಗಳಿಂದ ಬರ್ಲಿನ್‌ಗೆ ಬಾಂಬ್ ದಾಳಿ ಮಾಡಲಾಯಿತು.

  • 15 ಫೆಬ್ರವರಿ 1959 - ಬ್ರಿಟಿಷ್ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಓವನ್ ವಿಲ್ಲನ್ಸ್ ರಿಚರ್ಡ್ಸನ್ ನಿಧನರಾದರು.

  • 15 ಫೆಬ್ರವರಿ 1961 - ಬೋಯಿಂಗ್ 707 ವಿಮಾನವು ಬೆಲ್ಜಿಯಂನಲ್ಲಿ ಪತನಗೊಂಡು ಸುಮಾರು 50 ಜನರು ಸಾವನ್ನಪ್ಪಿದರು.

  • 15 ಫೆಬ್ರವರಿ 1965 - ಕೆನಡಾದ ಅಧಿಕೃತ ಧ್ವಜದಲ್ಲಿ ಮ್ಯಾಪಲ್ ಎಲೆಗಳನ್ನು ಸೇರ್ಪಡೆ ಮಾಡಲಾಯಿತು.

  • 15 ಫೆಬ್ರವರಿ 1967 - ಭಾರತದಲ್ಲಿ ನಾಲ್ಕನೇ ಲೋಕಸಭೆಗೆ ಚುನಾವಣೆಗಳು ನಡೆದ ದಿನ.

  • 15 ಫೆಬ್ರವರಿ 1976 - ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್‌ನಲ್ಲಿ ಕೇಂದ್ರೀಯ ಕೃಷಿ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.

  • 15 ಫೆಬ್ರವರಿ 1982 - ಶ್ರೀಲಂಕಾದ ರಾಜಧಾನಿ ಕೊಲಂಬೊದಿಂದ ಜನವರ್ಧನಪುರಕ್ಕೆ ವರ್ಗಾವಣೆ.

  • 15 ಫೆಬ್ರವರಿ 1989 - ಆಗಿನ ಸೋವಿಯತ್ ಒಕ್ಕೂಟದ ಸೈನ್ಯವು ಅಫ್ಘಾನಿಸ್ತಾನದಿಂದ ಹಿಂದೆ ಸರಿಯಿತು

  • 15 ಫೆಬ್ರವರಿ 1991 - ಇರಾಕ್ ಕುವೈತ್‌ನಿಂದ ಹಿನ್ನಡೆಯುವುದಾಗಿ ಘೋಷಿಸಿದ ದಿನ.

  • 15 ಫೆಬ್ರವರಿ 1999 - ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಉದ್ದೇಶಕ್ಕಾಗಿ ಈಜಿಪ್ಟ್ ಕಣ್ಗಾವಲು ಕೇಂದ್ರವನ್ನು ಸ್ಥಾಪಿಸುವುದಾಗಿ ಈ ದಿನದಂದು ಘೋಷಿಸಿತು.

  • 15 ಫೆಬ್ರವರಿ 2000 - ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ನಿರ್ದೇಶಕ ಬಿಆರ್ ಚೋಪ್ರಾ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು.

  • 15 ಫೆಬ್ರವರಿ 2001 - ಇಸ್ರೇಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದು, ಅದೇ ದಿನ ಇಸ್ರೇಲ್ ಪಶ್ಚಿಮ ದಂಡೆಯಲ್ಲಿರುವ ಗಾಜಾ ಪಟ್ಟಿಯನ್ನು ಮುಚ್ಚಿಲಾಗಿತ್ತು.

  • 15 ಫೆಬ್ರವರಿ 2002 - ಅಫ್ಘಾನಿಸ್ತಾನದಲ್ಲಿ ಹಜ್ ಯಾತ್ರಾರ್ಥಿಗಳ ಗುಂಪೊಂದು ಪ್ರವಾಸೋದ್ಯಮ ಸಚಿವ ಅಬ್ದುಲ್ ರೆಹಮಾನ್ ಅವರನ್ನು ಹೊಡೆದು ಕೊಂದಿದ್ದರು.

  • 15 ಫೆಬ್ರವರಿ 2003 - ದೂರಸಂಪರ್ಕ ಉಪಗ್ರಹ 'ಇಂಟೆಲ್‌ಸ್ಯಾಟ್' ಅನ್ನು "Ariane 4" ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾಯಿಸಲಾಯಿತು.

  • 15 ಫೆಬ್ರವರಿ 2005 - ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಮಸೀದಿಯಲ್ಲಿ ಬೆಂಕಿ ಕಾಣಿಸಿಕೊಂಡು 60 ಜನರು ಸಾವನ್ನಪ್ಪಿದರು.

  • 15 ಫೆಬ್ರವರಿ 2008 - ಹಿಂದೂ ಮಹಾಸಾಗರದ ಕರಾವಳಿ ದೇಶಗಳ ನೌಕಾಪಡೆ ಮುಖ್ಯಸ್ಥರ ಮೊದಲ ಸಮ್ಮೇಳನವು ನವದೆಹಲಿಯಲ್ಲಿ ನಡೆಯಿತು.

  • 15 ಫೆಬ್ರವರಿ 2010 – ಜೈಪುರ ಘರಾನಾದ ಕಥಕ್ ನೃತ್ಯಗಾರ್ತಿ ಪ್ರೇರಣಾ ಶ್ರೀಮಾಲಿಯನ್ನು 2009 ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

  • 15 ಫೆಬ್ರವರಿ 2010 - ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಸಿಲ್ಡಾ ಶಿಬಿರದ ಮೇಲೆ ಶಸ್ತ್ರಸಜ್ಜಿತ ಮಾವೋವಾದಿಗಳು ದಾಳಿ ಮಾಡಿದರು. ಈ ದಾಳಿಯಲ್ಲಿ ಸುಮಾರು 24 ಯೋಧರು ಹುತಾತ್ಮರಾಗಿದ್ದರು.

  • 15 ಫೆಬ್ರವರಿ 2012 - ಮಧ್ಯ ಅಮೆರಿಕದ ಹೊಂಡುರಾಸ್‌ನ ಕೊಮಯಾಗುವಾ ಜೈಲಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಈ ಅವಘಡದಲ್ಲಿ ಸುಮಾರು 358 ಜನರು ಪ್ರಾಣ ಕಳೆದುಕೊಂಡಿದ್ದರು.



ಪ್ರತಿದಿನವೂ ಒಂದಲ್ಲ ಒಂದು ಕಾರಣಗಳಿಗೆ ವಿಶೇಷವೇ ಆಗಿರುತ್ತದೆ. ಆದರೆ ಆಯಾ ದಿನ ನಡೆದ ಘಟನೆಗಳನ್ನು ದಾಖಲಿಸಿದರೆ ಅದು ಮುಂದಿನ ಪೀಳಿಗೆಯ ಜನರಿಗೆ ತಿಳಿಯಲು ಸಹಕಾರಿಯಾಗುತ್ತದೆ.

First published: