• Home
  • »
  • News
  • »
  • national-international
  • »
  • Steve Irwin’s Birthday Google Doodle: ವನ್ಯಜೀವಿ ರಕ್ಷಕ ಸ್ಟೀವ್​ ಇರ್ವಿನ್​ಗೆ ಗೂಗಲ್​ ಡೂಡಲ್​ ಗೌರವ

Steve Irwin’s Birthday Google Doodle: ವನ್ಯಜೀವಿ ರಕ್ಷಕ ಸ್ಟೀವ್​ ಇರ್ವಿನ್​ಗೆ ಗೂಗಲ್​ ಡೂಡಲ್​ ಗೌರವ

ಗೂಗಲ್​ ಡೂಡಲ್​ನಲ್ಲಿ ಸ್ಟೀವ್​

ಗೂಗಲ್​ ಡೂಡಲ್​ನಲ್ಲಿ ಸ್ಟೀವ್​

Today’s Google Doodle, Steve Irwin’s Birthday: ಸ್ಟೀವ್​ ಹೆಂಡತಿ ಟೆರ್ರಿ ಕೂಡ ಪ್ರಾಣಿಗಳ ಬಗ್ಗೆ ಸಾಕಷ್ಟು ಪ್ರೀತಿ ಹೊಂದಿದ್ದರು. ಝ್ಯೂಗೆ ಭೇಟಿ ನೀಡಿದ್ದ ವೇಳೆ ಇಬ್ಬರ ಪರಿಚಯವಾಗಿ ನಂತರ ಅದು ಪ್ರೀತಿಗೆ ತಿರುಗಿತ್ತು. ನಂತರ ಅವರು, ‘ದಿ ಕ್ರೊಕಡೈಲ್​ ಹಂಟರ್​’ ಎನ್ನುವ ಟಿವಿ ಕಾರ್ಯಕ್ರಮ ಆರಂಭಿಸಿದರು.

ಮುಂದೆ ಓದಿ ...
  • News18
  • Last Updated :
  • Share this:

ಬೆಂಗಳೂರು (ಫೆ.22): ವನ್ಯಜೀವಿ ರಕ್ಷಣೆಗೆ ಸಾಕಷ್ಟು ಕೊಡುಗೆ ನೀಡಿದ್ದ ಸ್ಟೀವ್​ ಇರ್ವಿನ್​ ಅವರ ಜನ್ಮ ದಿನದ ಅಂಗವಾಗಿ ಗೂಗಲ್​ ಡೂಡಲ್​ ಗೌರವ ಸಮರ್ಪಣೆ ಮಾಡಿದೆ.


ಸ್ಟೀವ್​ ಆರನೇ ವರ್ಷದ ಜನ್ಮದಿನಕ್ಕೆ ಅವರ ತಂದೆ-ತಾಯಿ ಬಾಬ್​ ಹಾಗೂ ಲಿನ್​ ಇರ್ವಿನ್​ 11 ಅಡಿ ಉದ್ದದ ಹೆಬ್ಬಾವನ್ನು ಉಡುಗೊರೆಯಾಗಿ ನೀಡಿದ್ದರು. ಅಲ್ಲಿಂದ ಅವರಿಗೆ ವನ್ಯಜೀವಿಗಳ ಮೇಲೆ ಪ್ರೀತಿ ಹುಟ್ಟಿಕೊಂಡಿತ್ತು. ಆ ಹಾವಿಗೆ ಫ್ರೆಡ್​ ಎಂದು ನಾಮಕರಣ ಮಾಡಿದರು ಸ್ಟೀವ್​. ನಂತರ ಅವರು ಕ್ವೀನ್ಸ್​ಲ್ಯಾಂಡ್​ಗೆ ತೆರಳಿದರು. ಕುಟುಂಬದ ಸಹಾಯದಿಂದ ಅಲ್ಲಿ ಸರಿಸೃಪಗಳ ಪಾರ್ಕ್​​ ತೆರೆದರು. ಅದಕ್ಕೆ ಬೀರ್ವಾ ರೆಪ್ಟೈಲ್​ ಪಾರ್ಕ್​ ಎಂದು ನಾಮಕರಣ ಮಾಡಲಾಗಿದೆ.


9 ವರ್ಷ ಇದ್ದಾಗಲೇ ಸ್ಟೀವ್​ ಮೊಸಳೆಗಳ ಜೊತೆಗೆ ಕಾದಾಟಕ್ಕೆ ಇಳಿದಿದ್ದ. ಕುಟುಂಬ ನಡೆಸುತ್ತಿದ್ದ ಪಾರ್ಕ್​ಅನ್ನು ಸ್ಟೀವ್​ ನಡೆಸುತ್ತಿದ್ದ. ನಂತರ ಇದಕ್ಕೆ ‘ಕ್ವೀನ್ಸ್​ಲ್ಯಾಂಡ್​ ರೆಪ್ಟೈಲ್​ ಆ್ಯಂಡ್​ ಫೌನಾ ಪಾರ್ಕ್​’ ಎಂದು ಮರು ನಾಮಕರಣ ಮಾಡಲಾಯಿತು. ನಂತರ ಅದು ಆಸ್ಟ್ರೇಲಿಯಾದ ಪ್ರಾಣಿ ಸಂಗ್ರಹಾಲಯವಾಗಿ ಮಾರ್ಪಾಡಾಯಿತು.


ಇದನ್ನೂ ಓದಿ: ಪುಲ್ವಾಮಾ ದಾಳಿಯ ಪ್ರತೀಕಾರಕ್ಕೆ ಮುಂದಾದ ಭಾರತ; ಪಾಕ್​ಗೆ ನೀರು ಹರಿಸದಿರಲು ನಿರ್ಧಾರ


ಸ್ಟೀವ್​ ಹೆಂಡತಿ ಟೆರ್ರಿ ಕೂಡ ಪ್ರಾಣಿಗಳ ಬಗ್ಗೆ ಸಾಕಷ್ಟು ಪ್ರೀತಿ ಹೊಂದಿದ್ದರು. ಝ್ಯೂಗೆ ಭೇಟಿ ನೀಡಿದ್ದ ವೇಳೆ ಇಬ್ಬರ ಪರಿಚಯವಾಗಿ ನಂತರ ಅದು ಪ್ರೀತಿಗೆ ತಿರುಗಿತ್ತು. ನಂತರ ಅವರು, ‘ದಿ ಕ್ರೊಕಡೈಲ್​ ಹಂಟರ್​’ ಎನ್ನುವ ಟಿವಿ ಕಾರ್ಯಕ್ರಮ ಆರಂಭಿಸಿದರು. ಇದು ತುಂಬಾನೇ ಖ್ಯಾತಿ ಪಡೆದುಕೊಂಡಿತು.2006ರಲ್ಲಿ ವಿಷದ ಮೀನು ಕಚ್ಚಿ ಸ್ಟೀವ್​ ಮೃತಪಟ್ಟರು.


Published by:Rajesh Duggumane
First published: