Shocking News: ಮಹಿಳೆಯ ಮೂಗಿನಲ್ಲಿ ಬೆಚ್ಚಗೆ ಮಲಗಿದ್ದ 150 ಲಾರ್ವಾಗಳು! ವೈದ್ಯರಿಗೇ ಶಾಕ್

ಆಕೆಯ ಮೂಗಲ್ಲಿ ನೊಣಗಳ ಲಾರ್ವಾ ಬೆಳೆಯುತ್ತಿರುವುದು ಸ್ವತಃ ಮಹಿಳೆಗೇ ಗೊತ್ತಿರಲಿಲ್ಲ.ಕೊನೆಗೂ ಸೆಂಚುರಿ ಆಸ್ಪತ್ರೆಯ ವೈದ್ಯರ ಪರಿಶ್ರಮದಿಂದ ಈ ವಿಷಯ ಬಹಿರಂಗಗೊಂಡಿದ್ದು ಶಸ್ತ್ರಚಿಕಿತ್ಸೆ ಮೂಲಕ ಬರೋಬ್ಬರಿ 150 ಲಾರ್ವಾಗಳನ್ನು ಮೂಗಿನಿಂದ ಹೊರತೆಗೆಯಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊರೊನಾ ವೈರಸ್​ನಿಂದ ಆಗುವ ಹೊಸ ಹೊಸ ಅಪಾಯಗಳು ಬೆಳಕಿಗೆ ಬರುವುದು ಇನ್ನೂ ನಿಂತಿಲ್ಲ. ಇದೀಗ ಹೈದರಾಬಾದ್ ನಗರದ ಆಸ್ಪತ್ರೆಯೊಂದರ ವೈದ್ಯರು (Hyderabad Doctors) ಕೊರೊನಾ ವೈರಸ್ ಸೋಂಕು ತಗುಲಿದ್ದ ಮಹಿಳೆಯ ಮೂಗಿನಿಂದ ನೊಣಗಳ 150 ಲಾರ್ವಾಗಳನ್ನು (150 Maggots) ಹೊರತೆಗೆದಿದ್ದಾರೆ. 50 ವರ್ಷದ ಮಹಿಳೆಗೆ ಈ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ.  ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಗೆ ಸುಮಾರು 6 ತಿಂಗಳ ಹಿಂದೆ ಕೊವಿಡ್ ಸೋಂಕು (Covid-19) ತಗುಲಿತ್ತು. ನಂತರ ಅದೇ ಮಹಿಳೆಯಲ್ಲಿ ಕಪ್ಪು ಶಿಲೀಂದ್ರ (Black Fungus Patient Nose) ಅಥವಾ ಮ್ಯೂಕೋರ್ಮೈಕೋಸಿಸ್ ಬೆಳವಣಿಗೆ ಹೊಂದಿತ್ತು.

    ಹೈದರಾಬಾದ್​ನ ಸೆಂಚುರಿ ಆಸ್ಪತ್ರೆಯ ವೈದ್ಯರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಗೃಹಿಣಿಯಾಗಿರುವ 50 ವರ್ಷದ ರೋಗಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಬಚಾವ್ ಮಾಡಿದ್ದಾರೆ.  ಸ್ಕಲ್ ಬೇಸ್ ಸರ್ಜನ್ ಡಾ.ಜಾನಕಿರಾಮ್ ನೇತೃತ್ವದ ತಜ್ಞರ ತಂಡವು ಮಹಿಳೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದು ಈ ಪ್ರಕರಣವನ್ನು ಅಪರೂಪದದಲ್ಲಿ ಅಪರೂಪ ಎಂದೇ ಹೇಳಲಾಗಿದೆ.

    ಮಹಿಳೆಯ ಬಲಗಣ್ಣನ್ನು ತೆಗೆಯಲಾಗಿತ್ತು
    ರೋಗಿಯು ಸುಮಾರು ಆರು ತಿಂಗಳ ಹಿಂದೆ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ಇದು ಮ್ಯೂಕೋರ್ಮೈಕೋಸಿಸ್​ಗೆ ಕಾರಣವಾಗಿತ್ತು. ಇದನ್ನು ಕಪ್ಪು ಶಿಲೀಂಧ್ರ ಎಂದೂ ಕರೆಯುತ್ತಾರೆ. ಆಕೆಯ ಮೆದುಳಿಗೆ ಸೋಂಕು ಹರಡಿದ್ದರಿಂದ ರೋಗಿಯ ಬಲಗಣ್ಣನ್ನು ತೆಗೆಯಲಾಯಿತು. ಆಕೆಯ ಮೂತ್ರಪಿಂಡದ ಕಾರ್ಯನಿರ್ವಹಣೆಯು ಪರಿಣಾಮ ಬೀರಿ ಆಕೆಗೆ ಮಧುಮೇಹ ತಗುಲಿತ್ತು.

    ನೊಣಗಳ ಲಾರ್ವಾ ಬೆಳೆಯುತ್ತಿರುವುದು ಗೊತ್ತೇ ಇರಲಿಲ್ಲ
    ಆದರೆ ಇಷ್ಟೆಲ್ಲ ಆದ ನಂತರವೂ ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದ ಮಹಿಳೆಗೆ ತನಗೆ ಆಗುತ್ತಿರುವ ಸಮಸ್ಯೆಯ ಅರಿವೇ ಇರಲಿಲ್ಲ. ಆಕೆಯ ಮೂಗಲ್ಲಿ ನೊಣಗಳ ಲಾರ್ವಾ ಬೆಳೆಯುತ್ತಿರುವುದು ಸ್ವತಃ ಮಹಿಳೆಗೇ ಗೊತ್ತಿರಲಿಲ್ಲ. ಕೊನೆಗೂ ಸೆಂಚುರಿ ಆಸ್ಪತ್ರೆಯ ವೈದ್ಯರ ಪರಿಶ್ರಮದಿಂದ ಈ ವಿಷಯ ಬಹಿರಂಗಗೊಂಡಿದ್ದು ಶಸ್ತ್ರಚಿಕಿತ್ಸೆ ಮೂಲಕ ಬರೋಬ್ಬರಿ 150 ಲಾರ್ವಾಗಳನ್ನು ಮೂಗಿನಿಂದ ಹೊರತೆಗೆಯಲಾಗಿದೆ.

    ಸಂಕೀರ್ಣ ಚಿಕಿತ್ಸೆ
    ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮೆದುಳಿನ ಕೆಳಭಾಗದಲ್ಲಿ ಹುಳುಗಳು ಇರುವುದು ಪತ್ತೆಯಾಯಿತು. ಆದರೆ ಆಕೆಯ ಅಧಿಕ ರಕ್ತದ ಸಕ್ಕರೆಯ ಮಟ್ಟ ಮತ್ತು ದುರ್ಬಲ ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ಪರಿಗಣಿಸಿ, ರೋಗಿಯ ಸ್ಥಿತಿಯನ್ನು ಸ್ಥಿರಗೊಳಿಸಬೇಕಾಗಿತ್ತು.

    ಇದನ್ನೂ ಓದಿ: Ghulam Nabi Azad Resigns: ರಾಹುಲ್​ ಗಾಂಧಿಯಿಂದಲೇ ಕಾಂಗ್ರೆಸ್ ಹಾಳಾಯ್ತು; ಗುಡ್ ಬೈ ಹೇಳಿದ ಹಿರಿಯ ನಾಯಕ

    ಅತ್ತ ಸಾಮಾನ್ಯ ವೈದ್ಯರು ಮತ್ತು ಮೂತ್ರಪಿಂಡಶಾಸ್ತ್ರಜ್ಞರ ತಂಡವು ಆಕೆಯ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿತ್ತು. ಇತ್ತ ನಾವು ಏಕಕಾಲದಲ್ಲಿ ಹುಳುಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೆವು ಎಂದು ಡಾ.ಜಾನಕಿರಾಮ್ ಹೇಳಿದರು.

    ಮುಖದ ಮೂಳೆಗಳಿಗೂ ಸೋಂಕು
    ಮಹಿಳೆಯ ಮೆದುಳಿಗೆ ಹತ್ತಿರವಿರುವ ಮುಖದ ಮೂಳೆಗಳು ಸಂಪೂರ್ಣವಾಗಿ ಸೋಂಕಿಗೆ ಒಳಗಾಗಿದ್ದು ತಿಳಿದುಬಂದಿದೆ. ನೊಣಗಳು ಆಕೆಯ ಮೂಗಿಗೆ ನುಗ್ಗಿ ಮೊಟ್ಟೆಯಿಟ್ಟಿದ್ದವು. ಮೊಟ್ಟೆಗಳು ಒಡೆದು ಲಾರ್ವಾಗಳಾಗಿ ಮಾರ್ಪಟ್ಟಿದ್ದವು. ಇದನ್ನು ಮ್ಯಾಗೊಟ್ ಎಂದೂ ಕರೆಯುತ್ತಾರೆ. ಇಂತಹ ಲಾರ್ವಾಗಳು ಮೆದುಳಿಗೆ ಪ್ರವೇಶಿಸಿ ಹಾನಿಯನ್ನು ಉಂಟುಮಾಡಬಹುದು ಎಂದು ವೈದ್ಯರು ವಿವರಿಸಿದರು.

    ಇದನ್ನೂ ಓದಿ:  Shocking News: ಅಯ್ಯೋ ದುರ್ವಿಧಿಯೇ! ಏಡ್ಸ್, ಮಂಕಿಪಾಕ್ಸ್, ಕೊರೊನಾ ಎಲ್ಲಾ ಒಟ್ಟಿಗೇ ಬಂತು!

    ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಗೃಹಿಣಿಯಾಗಿರುವ 50 ವರ್ಷದ ರೋಗಿಯ ಜೀವವನ್ನು ಶಸ್ತ್ರಚಿಕಿತ್ಸೆಯ ಮೂಲಕ ಸೆಂಚುರಿ ಆಸ್ಪತ್ರೆಯ ವೈದ್ಯರು ಉಳಿಸಿದ್ದಾರೆ. ಸ್ಕಲ್ ಬೇಸ್ ಸರ್ಜನ್ ಜಾನಕಿರಾಮ್ ನೇತೃತ್ವದ ತಜ್ಞರ ತಂಡವು ಮಹಿಳೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಯಶಸ್ವಿಯಾಗಿದೆ. ಅಂತೂ ಇಂತೂ ಕೊರೊನಾ ವೈರಸ್​ನಿಂದ ಕಪ್ಪು ಶಿಲೀಂಧ್ರ ಬಂದು ಇದೀಗ ಮೂಗಿನಲ್ಲಿ ನೊಣಗಳ ಲಾರ್ವಾ ಬೆಳೆದ ವಿರಳಾತಿ ವಿರಳ ಪ್ರಕರಣದ ಶಸ್ತ್ರಚಿಕಿತ್ಸೆ ಯಶಸ್ವಿಯಾದಂತಾಗಿದೆ.
    Published by:guruganesh bhat
    First published: