ಆಂಬ್ಯುಲೆನ್ಸ್​ನಲ್ಲೇ ಸಿಖ್​ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪಾಕ್ ಕಾಮುಕರು

Seema.R | news18
Updated:October 29, 2018, 4:02 PM IST
ಆಂಬ್ಯುಲೆನ್ಸ್​ನಲ್ಲೇ ಸಿಖ್​ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪಾಕ್ ಕಾಮುಕರು
ಸಾಂದರ್ಭಿಕ ಚಿತ್ರ.
  • News18
  • Last Updated: October 29, 2018, 4:02 PM IST
  • Share this:
ನ್ಯೂಸ್​ 18 ಕನ್ನಡ

ಲಹೋರ್ (ಅ.29): ಆಂಬ್ಯುಲೆನ್ಸ್​ನಲ್ಲಿಯೇ 15 ವರ್ಷದ ಬಾಲಕಿ ಮೇಲೆ ಇಬ್ಬರು ಕಾಮುಕರು ಅತ್ಯಾಚಾರ ನಡೆಸಿರುವ ಘಟನೆ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದಲ್ಲಿ ನಡೆದಿದೆ.

ಬಾಲಕಿ ಮಾನಸಿಕ ಅಸ್ವಸ್ಥಳಾಗಿದ್ದು, ಭಾನುವಾರ ಗುರುದ್ವಾರದ ನಂಕನ ಸಾಹಿಬ್​ ನಗರದಿಂದ ನಾಪತ್ತೆಯಾಗಿದ್ದಳು. ಆಕೆ ಮನೆಗೆ ಮರಳದ ಹಿನ್ನಲೆ ಆಕೆ ವಿರುದ್ಧ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ  ಪಂಜಾಬ್​ ತುರ್ತು ಸೇವೆ ರಕ್ಷಣಾ ಸೇವೆ 1122 ಆಂಬ್ಯುಲೆನ್ಸ್​ನಲ್ಲಿ ಬಾಲಕಿ ತಂದೆಗೆ ಮಗಳು ಪತ್ತೆಯಾಗಿದ್ದಾಳೆ

ಆಂಬ್ಯಲೆನ್ಸ್​ನಲ್ಲಿ ಯುವತಿ ಚಿರಾಡುತ್ತಿರುವುದು ಕೇಳಿತು. ಈ ವೇಳೆ ನಾವು ವಾಹನದ ಬಳಿ ಹೋದೆವು. ಆಗ ನಮ್ಮ ಮಗಳ ಮೇಲೆ ಇಬ್ಬರು ದೌರ್ಜನ್ಯ ನಡೆಸುತ್ತಿದ್ದರು. ಆ ವೇಳೆ ವಾಹನ ಚಲಾಯಿಸಿ ಕೊಂಡು ಹೋದರು.  ಎರಡು ಕಿ.ಮೀ ಸಾಗಿ ಮಗಳನ್ನು ವಾಹನದಿಂದ ಎಸೆದರು ಎಂದು ಸಂತ್ರಸ್ತೆ ತಂದೆ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ:  ಕರ್ತವ್ಯಕ್ಕೆ ಹಸುಗೂಸು ಕರೆದುಕೊಂಡು ಬಂದ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ಗೆ ಸಿಕ್ಕಿತು ವರ್ಗಾವಣೆ

ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಬ್ಯುಲೆನ್ಸ್​ ನೌಕರರಾದ ಅಹ್ಸನ್​ ಆಲಿ ಮತ್ತು ಸಮೀನ್​ ಹೈದರ್​ ವಿರುದ್ಧ ಪ್ರಕರಣದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ಈ ಕುರಿತು ತನಿಖಾ ತಂಡವನ್ನು ರಚಿಸಲಾಗಿದೆ ಎಂದರು.
First published:October 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading