ಕ್ವಾರಂಟೈನ್​ ಸೆಂಟರ್​​​​ನಲ್ಲಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸೆಕ್ಯೂರಿಟಿ ಗಾರ್ಡ್​​

ರೈಲ್ವೆ ಅಧಿಕಾರಿಗಳು ಈ ಬಾಲಕಿಯನ್ನು ನೋಡಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಬಳಿಕ ಮಕ್ಕಳ ಸಹಾಯವಾಣಿ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಕೊರೋನಾ ಪರೀಕ್ಷೆ ಮಾಡಿಸಲು ನಿರ್ಧರಿಸಿದರು. ಹೀಗಾಗಿ ಆಕೆಯನ್ನು ಕೋವಿಡ್-19 ವಾರ್ಡ್​​ಗೆ ಕರೆದೊಯ್ಯಲಾಗಿತ್ತು.

news18-kannada
Updated:July 16, 2020, 6:18 PM IST
ಕ್ವಾರಂಟೈನ್​ ಸೆಂಟರ್​​​​ನಲ್ಲಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸೆಕ್ಯೂರಿಟಿ ಗಾರ್ಡ್​​
ಸಾಂದರ್ಭಿಕ ಚಿತ್ರ
  • Share this:
ಪಾಟ್ನಾ(ಜು.16): ಕೋವಿಡ್​-19 ಕ್ವಾರಂಟೈನ್​ ಸೆಂಟರ್​​​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್​​ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಪಾಟ್ನಾ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. 

ಆರೋಪಿಯನ್ನು ಮಹೇಶ್(40) ಎಂದು ಗುರುತಿಸಲಾಗಿದೆ. ಆತನನ್ನು ಬುಧವಾರ ರಾತ್ರಿ ಬಂಧಿಸಲಾಗಿದ್ದು, ಪೋಕ್ಸೋ ಕಾಯ್ದೆ ಮತ್ತು ಇತರೆ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. ಪಿರ್ ಬಹೋರ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯು ಒಂದು ವಾರದ ಹಿಂದೆ ನಳದ ಜಿಲ್ಲೆಯಲ್ಲಿರುವ ತನ್ನ ಮನೆಯಿಂದ ಓಡಿ ಹೋಗಿದ್ದಳು. ಬಳಿಕ ತನ್ನ ತಂದೆಯ ಬಳಿ ಹೋಗಲು ಕೊಲ್ಕತ್ತಾಗೆ ತೆರಳಲು ಬರ್ಹ ರೈಲ್ವೆ ನಿಲ್ದಾಣವನ್ನು ತಲುಪಿದ್ದಳು. ಆಕೆಯ ತಂದೆ ಕೊಲ್ಕತ್ತಾದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Bengaluru Rain: ಬೆಂಗಳೂರಿನಲ್ಲಿ ಗುಡುಗು ಸಮೇತ ಧಾರಕಾರ ಮಳೆ

ರೈಲ್ವೆ ಅಧಿಕಾರಿಗಳು ಈ ಬಾಲಕಿಯನ್ನು ನೋಡಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಬಳಿಕ ಮಕ್ಕಳ ಸಹಾಯವಾಣಿ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಕೊರೋನಾ ಪರೀಕ್ಷೆ ಮಾಡಿಸಲು ನಿರ್ಧರಿಸಿದರು. ಹೀಗಾಗಿ ಆಕೆಯನ್ನು ಕೋವಿಡ್-19 ವಾರ್ಡ್​​ಗೆ ಕರೆದೊಯ್ಯಲಾಗಿತ್ತು.

ಜುಲೈ 8ರಂದು ಬಾಲಕಿ ಆಸ್ಪತ್ರೆಗೆ ಬಂದ ಕೆಲವೇ ಗಂಟೆಗಳಲ್ಲಿ ಸೆಕ್ಯೂರಿಟಿ ಗಾರ್ಡ್​​​​​​ಗೆ ಸಿಕ್ಕಿಬಿದ್ದಿದ್ದಾಳೆ. ಆರೋಪಿ ಬಾತ್​ರೂಂನಲ್ಲಿಯೇ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಷ್ಟೇ ಅಲ್ಲದೇ ಈ ವಿಷಯವನ್ನು ಎಲ್ಲಿಯೂ ಹೇಳದಂತೆ ಆರೋಪಿ ಆಕೆಗೆ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದು ಬಂದಿದೆ.

ಬಳಿಕ ಸಂತ್ರಸ್ತ ಬಾಲಕಿ ಇನ್ನೊಂದು ಹುಡುಗಿಯ ಮೊಬೈಲ್​ನಿಂದ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಇದಾದ ನಂತರ ಪೊಲೀಸರಿಗೂ ವಿಷಯ ತಿಳಿದಿದೆ ಎನ್ನಲಾಗಿದೆ.

ಬಾಲಕಿಯ ಕೋವಿಡ್​-19 ಟೆಸ್ಟ್​ ನೆಗೆಟಿವ್ ಬಂದಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ರಕ್ಷಿಸಿ ಶೆಲ್ಟರ್​ ಹೋಮ್​ಗೆ ಕಳುಹಿಸಲಾಗಿದೆ.
Published by: Latha CG
First published: July 16, 2020, 6:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading