Love Case: 15ರ ಬಾಲಕನ ಜೊತೆ 22 ವರ್ಷದ ಯುವತಿಯ ಲವ್, ಮದುವೆಯಾಗಿ ಪೊಲೀಸರ ಅತಿಥಿಯಾದ ಜೋಡಿ
West Bengal: ನಾಡಿಯಾದ ಕೃಷ್ಣನಗರ ಕೊಟ್ವಾಲಿಯ 15 ವರ್ಷದ ಬಾಲಕ ಮತ್ತು ಶಾಂತಿನಗರದ 22 ವರ್ಷದ ಯುವತಿ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗುವ ಮೂಲಕ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾ (Social Media) ಬಳಕೆ ಹೆಚ್ಚಾಗುತ್ತಿದ್ದಂತೆ ಅಪರಾಧ (Crime) ಪ್ರಕರಣಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಹದಿಹರೆಯದ ಯುವಕ ಯುವತಿಯರಲ್ಲಿ(Youths) ಸಾಮಾಜಿಕ ಜಾಲತಾಣಗಳ ಬಳಕೆ ಯಿಂದ ಹಲವಾರು ತೊಂದರೆಗಳು ಆಗುತ್ತಿದೆ.. ಹದಿಹರೆಯದ ಯುವಕ ಯುವತಿಯರು ಸೋಶಿಯಲ್ ಮೀಡಿಯಾ ಬಳಕೆಯಿಂದ ಪ್ರೀತಿ-ಪ್ರೇಮ (Love) ಎಂದೆಲ್ಲಾ ಹಾಳಾಗಿ ಚಿಕ್ಕವಯಸ್ಸಿನಲ್ಲೇ ಜೀವನವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ.. ಇದಕ್ಕೆ ಸಾಕ್ಷಿ ಎನ್ನುವಂತೆ ಫೇಸ್ಬುಕ್ (Facebook) ನಿಂದ ಪರಿಚಯವಾಗಿ ಮನೆ ಬಿಟ್ಟು ಹೋಗಿ ಮದುವೆಯಾದ ಎಷ್ಟು ಜೋಡಿಗಳು ಕೆಲವೇ ಕೆಲವು ದಿನಗಳಲ್ಲಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿವೆ..
ಅದ್ರಲ್ಲೂ ಬದುಕು ಏನು ಎಂದು ಅರಿಯುವ ಮೊದಲೇ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಮುದುಕರು ಜೊತೆಗೆ, ಅಪ್ರಾಪ್ತ ಬಾಲಕರು ತಮಗಿಂತ ವಯಸ್ಸಿನಲ್ಲಿ ಹೆಚ್ಚಿರುವ ಮಹಿಳೆಯರ ಜೊತೆ ಪ್ರೀತಿ ಪ್ರೇಮ ಎಂದೆಲ್ಲಾ ನಂಬಿ ಮನೆ ಬಿಟ್ಟು ಹೋಗಿ ಮದುವೆಯಾಗುತ್ತಿರುವ ವಿಲಕ್ಷಣ ಘಟನೆಗಳು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿವೆ. ಹೀಗಿದ್ದರೂ ಸಹಾ ಅನೇಕ ಜನರು ಇದುವರೆಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರೀತಿಯಲ್ಲಿ ಬೀಳುವುದು ತಪ್ಪಿಲ್ಲ. ಇನ್ನು ಇದೇ ಮದುವೆಯಾದ ಕೆಲವೇ ದಿನಗಳಲ್ಲಿ ಒಟ್ಟಿಗೆ ಬದುಕಲಾಗದೇ ದೂರ ಆಗುತ್ತಿರುವ ಅನೇಕ ಉದಾಹರಣೆಗಳು ಕೂಡ ಇವೆ. ಹೀಗಿದ್ದರೂ ಸಹ ಸಾಮಾಜಿಕ ಜಾಲತಾಣಗಳ ಮೂಲಕ ಪ್ರೀತಿ-ಪ್ರೇಮ ಎಂದು ನಂಬಿ ಮೋಸ ಹೋಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.. ಸದ್ಯ ಇದೇ ರೀತಿಯ ರೀತಿಯ ವಿಲಕ್ಷಣ ಘಟನೆ ಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
22ರ ಯುವತಿಯ ಜೊತೆ 15 ವರ್ಷದ ಬಾಲಕನಿಗೆ ಲವ್
ಪಶ್ಚಿಮ ಬಂಗಾಳದ ಕೊತ್ವಾಲಿ ಯಲ್ಲಿ ಫೇಸ್ಬುಕ್ ಮೂಲಕ 15 ವರ್ಷದ ಬಾಲಕನಿಗೆ 22 ವರ್ಷದ ಯುವತಿ ಪರಿಚಯ ಆಗಿದ್ದಾಳೆ. ಪರಿಚಯ ಸ್ನೇಹಕ್ಕೆ ತಿರುಗಿ ಬಾಲಕ ಹಾಗೂ ಯುವತಿಗೆ ಪ್ರೇಮಾಂಕುರವಾಗಿದೆ. ಕೊನೆಗೆ ನಾಡಿಯಾದ ಕೃಷ್ಣನಗರ ಕೊಟ್ವಾಲಿಯ 15 ವರ್ಷದ ಬಾಲಕ ಮತ್ತು ಶಾಂತಿನಗರದ 22 ವರ್ಷದ ಯುವತಿ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗುವ ಮೂಲಕ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಉತ್ತರ ಪ್ರದೇಶಕ್ಕೆ ಓಡಿ ಹೋಗಿ ಮದುವೆಯಾದ ಅಪ್ರಾಪ್ತರು
ಫೇಸ್ಬುಕ್ ಮೂಲಕ ಪರಿಚಯವಾದ ಅಪ್ರಾಪ್ತ ಬಾಲಕ ಹಾಗೂ ಬಾಲಕಿಯರ ಪ್ರೀತಿಯಲ್ಲಿ ಬಿದ್ದ ಬಳಿಕ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ.. ತಮ್ಮ ಪ್ರೀತಿಯ ವಿಷಯ ಮನೆಯವರಿಗೆ ತಿಳಿದರೆ ಎಲ್ಲಿ ಮದುವೆಗೆ ಒಪ್ಪುವುದಿಲ್ಲ ಎಂದು ಉತ್ತರಪ್ರದೇಶಕ್ಕೆ ಹೋಗಿ ಮದುವೆಯಾಗಲು ಇವರಿಬ್ಬರು ಯೋಜನೆ ರೂಪಿಸಿದ್ದಾರೆ. ಅದರಂತೆ ಡಿಸೆಂಬರ್ 25ರಂದು ಮನೆಯಿಂದ ಓಡಿಹೋಗಿ ಈ ಜೋಡಿ ಮದುವೆ ಮಾಡಿಕೊಂಡಿದೆ.
ಇನ್ನು ಮದುವೆಯ ನಂತರ ವಾಪಸಾಗುತ್ತಿದ್ದ ವೇಳೆ ಅವರಿಬ್ಬರೂ ಮದುವೆ, ಓಡಿಹೋದ ಬಗ್ಗೆ ಪರಸ್ಪರ ರೈಲಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಕೇಳಿಸಿಕೊಂಡ ಅಕ್ಕಪಕ್ಕದವರಿಗೆ ಸಂದೇಹ ಬಂದಿದೆ. ಹುಡುಗ ಇನ್ನೂ ತೀರಾ ಚಿಕ್ಕವನಂತೆ ಕಾಣುತ್ತಿದ್ದುದರಿಂದ ಅವರಿಗೆ ಈ ಜೋಡಿಯ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಮಾತಿನಲ್ಲಿಯೇ ಅವರಿಬ್ಬರೂ ಮದುವೆಯಾಗಿರುವುದೂ ತಿಳಿದಿದೆ. ಕೂಡಲೇ ಅವರು ಅನುಮಾನದಿಂದ ಚೈಲ್ಡ್ಲೈನ್ಗೆ ಮಾಹಿತಿ ನೀಡಿದ್ದಾರೆ. ಅದಾಗಲೇ ಇಬ್ಬರೂ ಕಾಣೆಯಾಗಿರುವ ಬಗ್ಗೆ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕ 10ನೇ ತರಗತಿ ಓದುತ್ತಿದ್ದರು, ಯುವತಿ ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ಸದ್ಯ ಈ ನವಜೋಡಿಗೆ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಇಬ್ಬರಿಗೂ ಕೌನ್ಸಲಿಂಗ್ ನೀಡುವ ಮೂಲಕ ತಿಳಿವಳಿಕೆ ನೀಡುತ್ತಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ