ವರ್ಷವೇ ಕಾದಿದ್ದೀರಿ, ಇನ್ನೂ 15 ದಿನದಲ್ಲಿ ಏನೂ ಆಗಲ್ಲ: ಓಮರ್​ ಅಬ್ದುಲ್ಲಾ ಬಂಧನ ಪ್ರಶ್ನಿಸಿದ ಅರ್ಜಿಗೆ ಸುಪ್ರೀಂ ಕೋರ್ಟ್​​

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ಪರಿಚ್ಛೇದ 370ರ ಅಡಿ ಇದ್ದ ವಿಶೇಷ ಸವಲತ್ತನ್ನು ಕೇಂದ್ರ ಸರ್ಕಾರ ಹಿಂಪಡೆದ ನಂತರ ಓಮರ್​ ಅಬ್ದುಲ್ಲಾರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲಾಗಿತ್ತು

ಓಮರ್ ಅಬ್ದುಲ್ಲಾ

ಓಮರ್ ಅಬ್ದುಲ್ಲಾ

 • Share this:
  ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ ಗೃಹಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಉತ್ತರಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಅದರ ಜತೆಜತೆಗೆ, ಅರ್ಜಿ ಸಲ್ಲಿಸಲು ಇಷ್ಟು ಸಮಯ ಕಳೆದಿರುವಾಗ ಇನ್ನೂ 15 ದಿನ ಕಾಯುವುದರಲ್ಲಿ ಸಮಸ್ಯೆ ಏನು ಎಂದು ಅರ್ಜಿ ಸಲ್ಲಿಸಿದ್ದ ಓಮರ್​ ಅಬ್ದುಲ್ಲಾ ತಂಗಿ ಸಾರಾ ಅಬ್ದುಲ್ಲಾ ಪೈಲಟ್​ಗೆ ಕೊರ್ಟ್​ ಪ್ರಶ್ನಿಸಿದೆ. 

  ಶುಕ್ರವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಅರುಣ್​ ಮಿಶ್ರಾ ಪೀಠ ವಿಚಾರಣೆ ನಡೆಸಿತು. ಓಮರ್​ ತಂಗಿ ಸಾರಾ ಪರ ಕಾಂಗ್ರೆಸ್​ ಹಿರಿಯ ಮುಖಂಡ ಮತ್ತು ಹಿರಿಯ ನ್ಯಾಯವಾದಿ ಕಪಿಲ್​ ಸಿಬಲ್​ ವಾದ ಮಂಡಿಸಿದರು. ಅರ್ಜಿ ವಿಚಾರಣೆ ವೇಳೆ ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳಿಗೆ, ಓಮರ್​ ಮುನ್ನಚ್ಚರಿಕಾ ಬಂಧನದ ಬಗ್ಗೆ ಉತ್ತರಿಸುವಂತೆ ಸೂಚಿಸಿತು.

  ಕಪಿಲ್​ ಸಿಬಲ್​ ಅರ್ಜಿ ಸಂಬಂಧ ತುರ್ತು ಆದೇಶ ನೀಡುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳು, ಅರ್ಜಿ ಸಲ್ಲಿಸಲು ಒಂದು ವರ್ಷವೇ ಕಾದಿದ್ದೀರಿ, ಇನ್ನೊಂದು ಹದಿನೈದು ಕಾದರೆ ಏನಾಗಲಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್​ ಸಿಬಲ್​ ಅರ್ಜಿ ಸಲ್ಲಿಕೆಗೆ ಒಂದು ವರ್ಷ ಕಾದಿಲ್ಲ. ಇದು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಕುರಿತಾದ ಅರ್ಜಿ, ಅವರ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಹೀಗಾಗಿ ಪ್ರಕರಣ ಸಂಬಂಧ ಶೀಘ್ರ ತೀರ್ಪು ನೀಡಬೇಕು ಎಂದು ಮನವಿ ಮಾಡಿದರು.

  ಇದನ್ನೂ ಓದಿ: ಫೆ.16ಕ್ಕೆ ದೆಹಲಿ ಸಿಎಂ ಆಗಿ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ; ಪ್ರಧಾನಿ ಮೋದಿಗೆ ಆಹ್ವಾನ

  ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ಪರಿಚ್ಛೇದ 370ರ ಅಡಿ ಇದ್ದ ವಿಶೇಷ ಸವಲತ್ತನ್ನು ಕೇಂದ್ರ ಸರ್ಕಾರ ಹಿಂಪಡೆದ ನಂತರ ಓಮರ್​ ಅಬ್ದುಲ್ಲಾರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲಾಗಿತ್ತು. ನಂತರ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಮತ್ತು ಲಡಾಕ್​ - ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಲಾಯಿತು. ಓಮರ್​ ಅಬ್ದುಲ್ಲಾ ರೀತಿಯಲ್ಲೇ ಹಲವು ರಾಜಕಾರಣಿಗಳನ್ನು ಬಂಧನದಲ್ಲಿರಿಸಲಾಗಿದ್ದು, ಇತ್ತೀಚೆಗೆ ಇಂಟರ್ನೆಟ್​ ಸೌಲಭ್ಯ ಮತ್ತೆ ನೀಡಲಾಗಿದೆ.

  ಇದನ್ನೂ ಓದಿ: ಬೀದರ್ ಶಾಲಾ ಮಕ್ಕಳ ವಿರುದ್ಧ ದೇಶದ್ರೋಹ ಪ್ರಕರಣ: ವಿಚಾರಣೆಗೆ ತಡೆ ಕೋರಿ ಪಿಐಎಲ್ – ಸರ್ಕಾರಕ್ಕೆ ಸುಪ್ರೀಂ ನೋಟೀಸ್

  ಸದ್ಯ ಸುಪ್ರೀಂ ಕೋರ್ಟ್​ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್​ 2ಕ್ಕೆ ಮುಂದೂಡಿದ್ದು, ಅಷ್ಟರೊಳಗೆ ಉತ್ತರಿಸುವಂತೆ ಜಮ್ಮು ಕಾಶ್ಮೀರಕ್ಕೆ ಸೂಚನೆ ನೀಡಿದೆ.
  First published: