Tirupati Tirumala: ತಿರುಪತಿ ಗಿರಿವಾಸ ಮತ್ತಷ್ಟು ಶ್ರೀಮಂತ! ಒಂದೇ ತಿಂಗಳಲ್ಲಿ 140 ಕೋಟಿ ರೂಪಾಯಿ ಕಾಣಿಕೆ ಸಂಗ್ರಹ

ಸತತ ರಜಾ ದಿನಗಳು ಮತ್ತು ಶ್ರಾವಣ ಮಾಸದ ಕಾರಣ, ಆಗಸ್ಟ್ ತಿಂಗಳಿನಲ್ಲಿ ತಿರುಮಲ ದೇವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹೀಗಾಗಿ ಆ ತಿಂಗಳಲ್ಲಿ 22.22 ಲಕ್ಷ ಭಕ್ತರು ಸ್ವಾಮಿಯ ದರ್ಶನ ಪಡೆದರು. ಅಂದರೆ ಕಳೆದ ತಿಂಗಳಲ್ಲಿ ಸರಾಸರಿ 71 ಸಾವಿರಕ್ಕೂ ಹೆಚ್ಚು ಮಂದಿ ತಿರುಮಲೇಶನ ದರ್ಶನ ಪಡೆದಿದ್ದಾರೆ. 

ತಿರುಪತಿ ತಿಮ್ಮಪ್ಪ

ತಿರುಪತಿ ತಿಮ್ಮಪ್ಪ

  • Share this:
ತಿರುಪತಿ: ಭಾರತದ ಅತ್ಯಂತ ಶ್ರೀಮಂತ ದೇಗುಲ (Richest Temple in India) ತಿರುಪತಿ ತಿಮ್ಮಪ್ಪನ (Tirupati Timmappa) ಖಜಾನೆ ಮತ್ತಷ್ಟು ತುಂಬುತ್ತಾ ಇದೆ. ಇಲ್ಲಿ ಭಕ್ತರು (Devotees) ಮಳೆ, ಚಳಿ, ಬಿಸಿಲು ಎನ್ನದೇ ಭೇಟಿ (Visit) ನೀಡುತ್ತಲೇ ಇರುತ್ತಾರೆ. “ನಮ್ಮ ಕಷ್ಟ ಕಳಿಯಪ್ಪಾ ದೇವರೇ” ಅಂತ ಪ್ರಾರ್ಥಿಸಿ (Prayer) ಹರಕೆ ಕಟ್ಟಿಕೊಳ್ಳುತ್ತಾರೆ. ಆ ಪ್ರಾರ್ಥನೆ ಈಡೇರಿದ ಬಳಿಕ ಹರಕೆ ರೂಪದಲ್ಲಿ ಹಣ (Money), ಚಿನ್ನ (Gold), ಬೆಳ್ಳಿ (Silver) ಇತ್ಯಾದಿ ಆಭರಣ (Jewelry) ದೇವರ ಹುಂಡಿಗೆ ಹಾಕಿ, ಪೂಜೆ ಸಲ್ಲಿಸ್ತಾರೆ. ಜೊತೆಗೆ ಕೆಲವರು ಕೂದಲು (Hair) ದಾನ (Donate) ಮಾಡುತ್ತಾರೆ. ಹೀಗೆ ವಿವಿಧ ಮೂಲಗಳಿಂದ ಮೇ ತಿಂಗಳಲ್ಲಿ ತಿಮ್ಮಪ್ಪನ ಖಜಾನೆ ತುಂಬಿ ಹೋಗಿದ್ಯಂತೆ. ಒಂದೇ ತಿಂಗಳಲ್ಲಿ ಬರೋಬ್ಬರಿ 140.34 ಕೋಟಿ ರೂಪಾಯಿ ಆದಾಯ ಬಂದಿದೆ ಅಂತ ಟಿಟಿಡಿ (TTD) ತಿಳಿಸಿದೆ.

ಆಗಸ್ಟ್‌ ತಿಂಗಳಲ್ಲಿ ಬರೋಬ್ಬರಿ 140.934 ಕೋಟಿ ರೂಪಾಯಿ ಸಂಗ್ರಹ

ಸತತ ರಜಾ ದಿನಗಳು ಮತ್ತು ಶ್ರಾವಣ ಮಾಸದ ಕಾರಣ, ಆಗಸ್ಟ್ ತಿಂಗಳಿನಲ್ಲಿ ತಿರುಮಲ ದೇವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹೀಗಾಗಿ ಆ ತಿಂಗಳಲ್ಲಿ 22.22 ಲಕ್ಷ ಭಕ್ತರು ಸ್ವಾಮಿಯ ದರ್ಶನ ಪಡೆದರು. ಅಂದರೆ ಕಳೆದ ತಿಂಗಳಲ್ಲಿ ಸರಾಸರಿ 71 ಸಾವಿರಕ್ಕೂ ಹೆಚ್ಚು ಮಂದಿ ತಿರುಮಲೇಶನ ದರ್ಶನ ಪಡೆದಿದ್ದಾರೆ. ಭಕ್ತರ ಸಂಖ್ಯೆಯೊಂದಿಗೆ ಶ್ರೀವಾರಿ ಹುಂಡಿಯ ಆದಾಯವೂ ಗಣನೀಯವಾಗಿ ಏರಿಕೆಯಾಗಿದೆ. ಆಗಸ್ಟ್ ತಿಂಗಳಲ್ಲಿ ತಿರುಮಲ ಹುಂಡಿಯ ಆದಾಯ ರೂ. 140.34 ಕೋಟಿ ರೂಪಾಯಿ ಆಗಿದೆ. ಇದು ಟಿಟಿಡಿ ಇತಿಹಾಸದಲ್ಲಿ ಅಭೂತಪೂರ್ವ ದಾಖಲೆಯ ಕಾಣಿಕೆ ಸಂಗ್ರಹವಾಗಿದೆಯಂತೆ.

ಜುಲೈನಲ್ಲಿ 139 ಕೋಟಿ 45 ಲಕ್ಷ ರೂಪಾಯಿ ಸಂಗ್ರಹ

ಹಿಂದಿನ ತಿಂಗಳು ಅಂದರೆ ಜುಲೈನಲ್ಲಿ ಶ್ರೀವಾರಿ ಹುಂಡಿಗೆ ರೂ. 139.45 ಕೋಟಿ, ಮೇ ತಿಂಗಳಲ್ಲಿ ರೂ. 130.50 ಕೋಟಿ ಸಂಗ್ರಹವಾಗಿತ್ತು. ಅದೇ ರೀತಿ ಹುಂಡಿಯ ಆದಾಯ ಮಾರ್ಚ್‌ನಲ್ಲಿ 128 ಕೋಟಿ ರೂ., ಏಪ್ರಿಲ್‌ನಲ್ಲಿ 127.5 ಕೋಟಿ ರೂ. ಜೂನ್ ತಿಂಗಳಲ್ಲೂ ಹುಂಡಿಯ ಆದಾಯ ರೂ.120 ಕೋಟಿಗೂ ಅಧಿಕವಾಗಿತ್ತು. ಒಂದೇ ದಿನದಲ್ಲಿ ಅತಿ ಹೆಚ್ಚು ಹುಂಡಿ ಆದಾಯ ಬಂದಿರುವ ದಾಖಲೆಗಳನ್ನು ನೋಡಿದರೆ.. 2018ರ ಜುಲೈ 26ರಂದು ಹುಂಡಿಯಲ್ಲಿ 6.28 ಕೋಟಿ ರೂ.ಗಳ ಕಾಣಿಕೆ ಬಂದಿತ್ತು.. ಈ ವರ್ಷ ಜುಲೈ 5ರಂದು ಭಕ್ತರು 6.18 ಕೋಟಿ ರೂ.ಗಳನ್ನು ಕಾಣಿಕೆಯಾಗಿ ಸಲ್ಲಿಸಿದ್ದರು.

ಇದನ್ನೂ ಓದಿ: Tirupati: ಸೇವೆ ಪಡೆಯದ ವೆಂಕಟ, ಟಿಟಿಡಿಗೆ ಈಗ ಸಂಕಟ! ಭಕ್ತನಿಗೆ 45 ಲಕ್ಷ ರೂಪಾಯಿ ನೀಡುವಂತೆ ಕೋರ್ಟ್ ಆದೇಶ

ತಿರುಪತಿ ಲಾಡು ಮಾರಾಟದಲ್ಲೂ ದಾಖಲೆ

ಇನ್ನು ತಿರುಪತಿಯ ಪ್ರಸಿದ್ಧ ಪ್ರಸಾದ ಎಂದರೆ ಲಡ್ಡು. ಆಕಾರದಲ್ಲಿ ದೊಡ್ಡದಾಗಿರುವ, ತನ್ನ ಮಧುರ ಪರಿಮಳದೊಂದಿಗೆ ಆಕರ್ಷಿಸುವ ತಿರುಪತಿ ಲಡ್ಡು ಭಕ್ತರ ಫೇವರೇಟ್.  ಆಗಸ್ಟ್ ತಿಂಗಳಲ್ಲಿ ಒಂದು ಕೋಟಿಗೂ ಹೆಚ್ಚು ಲಡ್ಡೂ ಮಾರಾಟವಾಗಿದೆ ಎಂಬುದು ಗಮನಾರ್ಹ. ಕಳೆದ ತಿಂಗಳು ಒಟ್ಟು 47.46 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದರೆ, 10.85 ಲಕ್ಷ ಭಕ್ತರು ಕೂದಲು ಸಮರ್ಪಿಸಿದ್ದಾರೆ.

ಇದನ್ನೂ ಓದಿ: Tirupati: ಬರೋಬ್ಬರಿ 9.2 ಕೋಟಿ ಮೌಲ್ಯದ ಆಸ್ತಿ ದಾನ ಕೊಟ್ಟ ಅಜ್ಜಿ! ಸತ್ತ ಮೇಲೂ ತೀರಿತು ತಿಮ್ಮಪ್ಪನ ಹರಕೆ!

ಸೆಪ್ಟೆಂಬರ್‌ 27ರಿಂದ ಶ್ರೀಕ್ಷೇತ್ರದಲ್ಲಿ ವಾರ್ಷಿಕ ಬಹ್ರೋತ್ಸವ

ಇದೇ 27ರಿಂದ ಶ್ರೀವಾರಿಯ ವಾರ್ಷಿಕ ಬ್ರಹ್ಮೋತ್ಸವಕ್ಕೆ ಟಿಟಿಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಆಗಸ್ಟ್ 27 ರಂದು ಸಿಎಂ ಜಗನ್ ಸ್ವಾಮಿಗೆ ರೇಷ್ಮೆ ವಸ್ತ್ರ ಅರ್ಪಿಸಲಿದ್ದಾರೆ. ಅಂದು ರಾತ್ರಿ 9 ಗಂಟೆಗೆ ಮುಖ್ಯಮಂತ್ರಿಗಳು ಪೇದಶೇಷವಾಹನ ಸೇವೆಯಲ್ಲಿ ಪಾಲ್ಗೊಳ್ಳುವರು. ಮರುದಿನ ಪರಕಾಮಣಿ ಮಂಟಪ ಉದ್ಘಾಟನೆಯಾಗಲಿದೆ ಎಂದ ಟಿಟಿಡಿ ಮೂಲಗಳು ತಿಳಿಸಿವೆ.
Published by:Annappa Achari
First published: