14 ವರ್ಷದ ಬಾಲಕ ಯುಎಸ್​ನ ವರ್ಮಾಂಟ್ ನಗರದ ಗೌವರ್ನರ್ ಚುನಾವಣೆ ಅಭ್ಯರ್ಥಿ!

news18
Updated:August 14, 2018, 9:53 AM IST
14 ವರ್ಷದ ಬಾಲಕ ಯುಎಸ್​ನ ವರ್ಮಾಂಟ್ ನಗರದ ಗೌವರ್ನರ್ ಚುನಾವಣೆ ಅಭ್ಯರ್ಥಿ!
  • News18
  • Last Updated: August 14, 2018, 9:53 AM IST
  • Share this:
ನ್ಯೂಸ್ 18 ಕನ್ನಡ

ನ್ಯೂಯಾರ್ಕ್​ (ಆ.14): 14 ವರ್ಷದ ಅಮೆರಿಕದ ಶಾಲಾ ಮಕ್ಕಳು ಏನು ಮಾಡಬಹುದು, ಬೇಸ್​ಬಾಲ್​ ಆಡಬಹುದು, ಹುಡುಗಿರನ್ನು ಚುಡಾಯಿಸಬಹುದು ಮತ್ತು ಹೋಂ ವರ್ಕ್​ ಮಾಡಬಹುದು. ಆದರೆ, ಈಥನ್ ಸೋನೆಬಾರ್ನ್​ ಎಂಬ 14 ವರ್ಷದ ಬಾಲಕ ಗೌವರ್ನರ್ ಚುನಾವಣೆಗೆ ನಿಂತಿದ್ದಾನೆ.

ಅಮೆರಿಕದ ಬೊಕೊಲಿಕ್ ಈಶಾನ್ಯ ರಾಜ್ಯದ ವಿಶಿಷ್ಟ ಸಂವಿಧಾನದ ಲಾಭ ಪಡೆಯಲು ಈ ಬಾಲಕ ಮುಂದಾಗಿದ್ದಾನೆ. ಇಲ್ಲಿನ ಸಂವಿಧಾನದ ಪ್ರಕಾರ ಈ ರಾಜ್ಯದ ವರ್ಮಾಂಟ್ ಗೌವರ್ನರ್  ಚುನಾವಣೆಗೆ ನಿಲ್ಲಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಚುನಾವಣೆಯಲ್ಲಿ ನಿಲ್ಲಲು ಇರುವ ಏಕೈಕ ಮಾನದಂಡ ಅಂದರೆ, ಆತ ವರ್ಮಾಂಟ್ ನಗರದಲ್ಲಿ ಕನಿಷ್ಠ ನಾಲ್ಕು ವರ್ಷ ನೆಲೆಸಿರಬೇಕು.

ಈಥನ್ ತನ್ನ ಪ್ರಚಾರದ ವೇಳೆ ತಾನು 14 ವರ್ಷಗಳಿಂದ ಈ ನಗರದಲ್ಲಿ ನೆಲೆಸಿದ್ದೇನೆ ಎಂಬುದನ್ನು ಖುಷಿಯಿಂದ ಹೇಳಿಕೊಳ್ಳುತ್ತಿದ್ದಾನೆ. ಈತ ಮಂಗಳವಾರ ವಯಸ್ಕ ಪ್ರತಿಸ್ಪರ್ಧಿಗಳನ್ನು ಎದುರಿಸಲಿದ್ದಾನೆ.

ತನ್ನ ವೆಬ್​ಸೈಟ್​ನಲ್ಲಿ ಈಥನ್​ "ಮಧ್ಯಮ ಮತ್ತು ವೃತ್ತಿನಿರತ ಕುಟುಂಬಗಳ ಆರೋಗ್ಯ ಸುಧಾರಣೆ, ಆರ್ಥಿಕ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ," ಎಂದು ಪ್ರಚಾರ ಮಾಡುತ್ತಿದ್ದಾನೆ. ಈಥನ್ ಪ್ರಗತಿಪರವಾದ ಡೆಮಾಕ್ರಟಿಕ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾನೆ.

"ನಮಗೆ ಬೇಕಿರುವ ಬದಲಾವಣೆಗೆ ನಾನು ಉತ್ತಮ ಅಭ್ಯರ್ಥಿ," ಎಂದು ಈಥನ್ ಈ ತಿಂಗಳ ಆರಂಭದಲ್ಲಿ ಟೌನ್​ಹಾಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದನು.

ಈತನ ಎದುರಾಳಿಗಳಾಗಿ ಕಣದಲ್ಲಿ ಅಮೆರಿಕದ ಮೊದಲ ತೃತೀಯ ಲಿಂಗಿ ಗೌವರ್ನರ್ ಕ್ರಿಸ್ಟಿನೆ ಹಾಲ್​ಕ್ವಿಸ್ಟ್, ಪರಿಸರವಾದಿ ಜೇಮ್ಸ್ ಎತ್ಲೇರ್ಸ್ ಹಾಗೂ ನೃತ್ಯ ಉತ್ಸವಗಳ ಕಾರ್ಯಕಾರಿ ನಿರ್ದೇಶಕರಾದ ಬ್ರೆಂಡಾ ಸೀಗಲ್ ಅವರು ಪ್ರಮುಖರಾಗಿದ್ದಾರೆ.ಈಥನ್​ ಸೋನೆಬಾರ್ನ್​ನ ಪ್ರಶಂಸೆಯ ಹೊರತಾಗಿಯೂ ಆತನ ಪ್ರಬುದ್ಧತೆ ಮತ್ತು ರಾಜಕೀಯದ ಅರಿವು ಪ್ರಚಾರದ ವೇಳೆ ಎಲ್ಲರನ್ನು ಆಕರ್ಷಿಸುತ್ತಿದೆ. ಇಲ್ಲಿನ ಶಾಸಕರ ಅಪ್ರಾಮಾಣಿಕತೆ ಬಗ್ಗೆ ಹೇಳುತ್ತಿರುವ ಬಾಲಕ "ನಾವು ಸಂಪೂರ್ಣ ಪ್ರಾಮಾಣಿಕವಾಗಿರುವುದನ್ನು ತಾವು ನೋಡಬಹುದು," ಎಂದು ಹೇಳಿದ್ದಾನೆ.

ರಿಪಬ್ಲಿಕನ್ ಗೌವರ್ನರ್ ಪಿಲ್ ಸ್ಕಾಟ್​ ಪತ್ರಕರ್ತರೊಂದಿಗೆ ಮಾತನಾಡಿ, 14 ವರ್ಷದ ಬಾಲಕ ಗೌವರ್ನರ್ ಚುನಾವಣೆ ಅಭ್ಯರ್ಥಿಯಾಗುವುದನ್ನು ಸ್ವಾಗತಿಸಿದ್ದಾರೆ.

"ಆತ ಗೌವರ್ನರ್ ಚುನಾವಣೆಗೆ ನಿಲ್ಲುವ ವಯಸ್ಸಿನಲ್ಲಿ ನೀವು ವಾಹನ ಚಲಾವಣೆ ಪರವಾನಗಿ ಪಡೆದುಕೊಳ್ಳಿ,"  ಎಂದು ಹೇಳಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading